ಪಂಜಾಬ್: BSF ಗುಂಡಿಗೆ ಪಾಕಿಸ್ತಾನದ ನುಸುಳುಕೋರ ಬಲಿ
ನುಸುಳುಕೋರನ ಮೃತದೇಹದ ಬಳಿ 14 ಪ್ಯಾಕೆಟ್ ಹೆರಾಯಿನ್, ಒಂದು ಪಿಸ್ತೂಲ್ ಮ್ಯಾಗಝಿನ್, 2 ಮೊಬೈಲ್ ಫೋನ್ಗಳು ಪತ್ತೆಯಾಗಿವೆ

ಬಿಎಸ್ಎಫ್ (ಪ್ರಾತಿನಿಧಿಕ ಚಿತ್ರ)
ಚಂಡೀಗಢ: ಪಂಜಾಬ್ನ ತರ್ನ್ ತರನ್ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನಿ ಮೂಲದ ಓರ್ವ ನುಸುಳುಕೋರ ಶನಿವಾರ ಬೆಳಗ್ಗೆ 2:30ರ ವೇಳೆಗೆ ಹತ್ಯೆಗೈದಿದ್ದಾಗಿ ಗಡಿ ರಕ್ಷಣಾ ದಳ ತಿಳಿಸಿದೆ.. ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ ಜಾಗೃತರಾದ ಗಡಿ ರಕ್ಷಣಾ ದಳದ ಸಿಬ್ಬಂದಿ ಪಾಕಿಸ್ತಾನಿ ಮೂಲದ ನುಸುಳುಕೋರನ್ನು ಹತ್ಯೆಗೈದಿದೆ.
ನುಸುಳುಕೋರನ ಮೃತದೇಹದ ಬಳಿ 14 ಪ್ಯಾಕೆಟ್ ಹೆರಾಯಿನ್, ಒಂದು ಪಿಸ್ತೂಲ್ ಮ್ಯಾಗಝಿನ್, 2 ಮೊಬೈಲ್ ಫೋನ್ಗಳು ಪತ್ತೆಯಾಗಿವೆ.ಪಾಕಿಸ್ತಾನಿ ಮೂಲದ ನುಸುಳುಕೋರರ ಪತ್ತೆಗೆ ಅಂತರಾಷ್ಟ್ರೀಯ ಗಡಿ ಬಳಿ ಗಡಿ ರಕ್ಷಣಾ ದಳ ಹಗಲಿರುಳು ರಕ್ಷಣೆಯಲ್ಲಿ ನಿರತವಾಗಿದೆ ಶನಿವಾರ ಬೆಳಗ್ಗೆಯೇ ನಡೆದ ಕಾರ್ಯಾಚರಣೆಯ ನಂತರ ಗಡಿ ರಕ್ಷಣಾ ದಳ ಇನ್ನಷ್ಟು ಜಾಗೃತವಾಗಿದೆ ಎಂದು ತಿಳಿದುಬಂದಿದೆ.



