Video: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬಿಎಸ್ಎಫ್ ಮಹಿಳಾ ಬೈಕರ್ಗಳ ರೋಮಾಂಚನಕಾರಿ ಸಾಹಸ ಪ್ರದರ್ಶನ
ಗಣರಾಜ್ಯೋತ್ಸವದಲ್ಲಿ ಭಾರತದ ಮಿಲಿಟರಿ ಶಕ್ತಿಯ ಜತೆ ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶನ ನಡೆಯಿತು. ಅದರೊಂದಿಗೆ ಸ್ವಾತಂತ್ರ್ಯ ಬಂದು 75ವರ್ಷ ಆದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಲವು ಉಪಕ್ರಮಗಳನ್ನು ಸೇರಿಸಲಾಗಿತ್ತು.
ದೆಹಲಿ: ಇಂದು ಗಣರಾಜ್ಯೋತ್ಸವ ಪರೇಡ್ (Republic Day Parade 2022) ಅತ್ಯಂತ ಆಕರ್ಷಕವಾಗಿತ್ತು. ದೇಶದ ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ಧ ಚಿತ್ರಗಳ ಜತೆ, ಗಡಿ ಭದ್ರತಾ ಪಡೆಯ ಮಹಿಳಾ ಯೋಧರ (BSF) ಬೈಕ್ ಸಾಹಸ ಪ್ರದರ್ಶನ ದೇಶದ ಗಮನ ಸೆಳೆದಿದೆ. ಬಿಎಎಸ್ಎಫ್ನ ಸೀಮಾ ಭವಾನಿ ನೇತೃತ್ವದ ಮೋಟಾರ್ಸೈಕಲ್ ತಂಡ ರಾಷ್ಟ್ರಪತಿಯವರಿಗೆ ವಂದನೆ ಸಲ್ಲಿಸಿದ್ದು, ಅತ್ಯಂತ ರೋಮಾಂಚನಕಾರಿಯಾಗಿತ್ತು. ಈ ವಿಡಿಯೋವನ್ನು ಕೂಡ ನೋಡಬಹುದಾಗಿದೆ.
ಇಂದು ಈ ಬೈಕ್ ತಂಡ ಕಮಾಂಡ್ ಇನ್ಸ್ಪೆಕ್ಟರ್ ಹಿಮಾಂಶು ಸಿರೋಹಿ ಕಮಾಂಡ್ನಡಿ ರಾಷ್ಟ್ರಪತಿ ವಂದನೆ ಸಲ್ಲಿಸಿದೆ. ಸಬ್ ಇನ್ಸ್ಪೆಕ್ಟರ್ ಸೋನಿಯಾ ಬನ್ವಾರಿ ಆದೇಶದಡಿ, ಬೈಕ್ಮೇಲೆ ಏಕಮಂಡಿಯೂರಿ ಸಾಹಸ ಪ್ರದರ್ಶನ ನಡೆಸಿತು. ಕಾನ್ಸ್ಟೆಬಲ್ ಅನಿಮಾ ನೇತೃತ್ವದಲ್ಲಿ ಕುರ್ಚಿ ರೈಡಿಂಗ್ ನಡೆಯಿತು ಹಾಗೂ ಕಾನ್ಸ್ಟೆಬಲ್ ಪುಷ್ಪಾ ಮತ್ತೊಬ್ಬರು ಸೇರಿ ಫಿಶ್ ರೈಡಿಂಗ್ ನಡೆಸಿದರು. ಅಷ್ಟೇ ಅಲ್ಲ, ಕಾನ್ಸ್ಟೆಬಲ್ ರಜ್ವಿಂದರ್ ಕೌರ್ ಹಾಗೂ ಇನ್ನೊಬ್ಬರು ಸೇರಿ ಒಂದು ಬದಿಯಿಂದ ಡಬಲ್ ಬ್ಯಾಕ್ ರೈಡಿಂಗ್ ಮಾಡಿದರೆ, ಇನ್ನೊಂದು ಬೈಕ್ನಲ್ಲಿ ಕಾನ್ಸ್ಟೆಬಲ್ ಅನುಪಮಾ ಕುಮಾರಿ ಮತ್ತು ಇನ್ನೊಬ್ಬರು ಇದೇ ಮಾದರಿಯಲ್ಲಿ ಸಾಹಸ ಪ್ರದರ್ಶಿಸಿದರು. ಏಣಿಯ ಮೇಲೆ ನಿಂತು ಮಾಡುವ ಸಾಹಸವನ್ನು ಕಾನ್ಸ್ಟೆಬಲ್ ಸಂಗೀತಾ ಕುಮಾರಿ ನೇತೃತ್ವದಲ್ಲಿ ಮಾಡಲಾಯಿತು. ಇಲ್ಲಿ ಐದು ಮಹಿಳಾ ಯೋಧರು ಬ್ಯಾಲೆನ್ಸ್ ಮಾಡಿದ್ದು ರೋಚಕವಾಗಿತ್ತು. ಹಾಗೇ, ಕಾನ್ಸ್ಟೆಬಲ್ ಸುಮಿತಾ ಸಿಖ್ದರ್ ನೇತೃತ್ವದಲ್ಲಿ ನಾಲ್ವರು ರೈಡರ್ಗಳು ಬ್ಯಾಲೆನ್ಸ್ ಮಾಡಿದರು. ಈ ವೇಳೆ ಮಹಿಳಾ ಕಾನ್ಸ್ಟೆಬಲ್ಗಳು ಬೇಟಿ ಪಡಾವೋ, ಬೇಟಿ ಬಚಾವೋ ಎಂಬಿತ್ಯಾದಿ ಸಂದೇಶಗಳ ಬೋರ್ಡ್ಗಳನ್ನು ಪ್ರದರ್ಶಿಸಿದರು.
Spectacular display by BSF Seema Bhawani Team on Rajpath#JaiHind#RepublicDay#RepublicDay2022#RepublicDaywithBSF#गणतंत्रदिवस pic.twitter.com/ePx4xi9wYp
— BSF (@BSF_India) January 26, 2022
ಇದರೊಂದಿಗೆ ಇನ್ನೂ ವಿಧದ ಸ್ಟಂಟ್ಗಳನ್ನು ಬಿಎಸ್ಎಫ್ ಮಹಿಳಾ ಸಿಬ್ಬಂದಿ ಮಾಡಿದರು. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾರತದ ಮಿಲಿಟರಿ ಶಕ್ತಿಯ ಜತೆ ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶನ ನಡೆಯಿತು. ಅದರೊಂದಿಗೆ ಸ್ವಾತಂತ್ರ್ಯ ಬಂದು 75ವರ್ಷ ಆದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಲವು ಉಪಕ್ರಮಗಳನ್ನು ಸೇರಿಸಲಾಗಿತ್ತು. ಕೊವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯೋತ್ಸವಕ್ಕೆ ಆಗಮಿಸಿದವರ ಸಂಖ್ಯೆ ಕಡಿಮೆ ಆಗಿದ್ದು, ಅನೇಕರು ಆನ್ಲೈನ್ ಮೂಲಕವೇ ಸಮಾರಂಭ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ, ಸಲ್ಯೂಟ್ ಮಾಡಿದ ಸಚಿವ; ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ
Published On - 5:07 pm, Wed, 26 January 22