ದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪಕ್ಷವು ಮೈತ್ರಿ ಇಲ್ಲದೆ ಕಣಕ್ಕಿಳಿಯಲಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥ ಮಾಯಾವತಿ ಭಾನುವಾರ ಹೇಳಿದ್ದಾರೆ. ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಜೊತೆಗಿನ ಮೈತ್ರಿ ವರದಿಗಳನ್ನು ತಿರಸ್ಕರಿಸಿದ ಮಾಯಾವತಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಾತ್ರ ಪಕ್ಷ ಏಕಾಂಗಿಯಾಗಿ ಹೋರಾಡಲಿದೆ ಎಂದು ಹೇಳಿದರು. ಮುಂಬರುವ ಪಂಜಾಬ್ ಚುನಾವಣೆಗೆ ಪಕ್ಷವು ಶಿರೋಮಣಿ ಅಕಾಲಿ ದಳದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದಿದ್ದಾರೆ ಮಾಯಾವತಿ.
“ಈ ಸುದ್ದಿ ನಿನ್ನೆಯಿಂದ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಎಐಎಂಐಎಂ ಮತ್ತು ಬಿಎಸ್ಪಿ ಒಟ್ಟಾಗಿ ಹೋರಾಡಲಿವೆ. ಈ ಸುದ್ದಿ ಸಂಪೂರ್ಣವಾಗಿ ಸುಳ್ಳು, ದಾರಿತಪ್ಪಿಸುವ ಮತ್ತು ಆಧಾರರಹಿತವಾಗಿದೆ. ಇದರಲ್ಲಿ ಸತ್ಯದ ಒಂದು ಭಾಗವೂ ಇಲ್ಲ ಬಿಎಸ್ಪಿ ಅದನ್ನು ತೀವ್ರವಾಗಿ ನಿರಾಕರಿಸುತ್ತದೆ, ”ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ನೀರಸ ಪ್ರದರ್ಶನದ ನಂತರ ಮಾಯಾವತಿ ಈ ರೀತಿ ಹೇಳಿದ್ದಾರೆ . ಪಂಚಾಯತ್ ಚುನಾವಣೆಯಲ್ಲಿ ಬಿಎಸ್ಪಿ ಕಳಪೆ ಪ್ರದರ್ಶನ ನೀಡಿದ್ದು ಮೂರನೇ ಸ್ಥಾನಕ್ಕಿಳಿದಿತ್ತು.
1. मीडिया के एक न्यूज चैनल में कल से यह खबर प्रसारित की जा रही है कि यूपी में आगामी विधानसभा आमचुनाव औवेसी की पार्टी AIMIM व बीएसपी मिलकर लड़ेगी। यह खबर पूर्णतः गलत, भ्रामक व तथ्यहीन है। इसमें रत्तीभर भी सच्चाई नहीं है तथा बीएसपी इसका जोरदार खण्डन करती है। 1/2
— Mayawati (@Mayawati) June 27, 2021
2. वैसे इस सम्बन्ध में पार्टी द्वारा फिरसे यह स्पष्ट किया जाता है कि पंजाब को छोड़कर, यूपी व उत्तराखण्ड प्रदेश में अगले वर्ष के प्रारंभ में होने वाला विधानसभा का यह आमचुनाव बीएसपी किसी भी पार्टी के साथ कोई भी गठबन्धन करके नहीं लड़ेगी अर्थात् अकेले ही लड़ेगी। 2/2
— Mayawati (@Mayawati) June 27, 2021
ಪಂಜಾಬ್‌ನಲ್ಲಿ, 1996 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ 25 ವರ್ಷಗಳ ನಂತರ ಬಿಎಸ್‌ಪಿ ಮತ್ತು ಎಸ್‌ಎಡಿ ಕೈಜೋಡಿಸಿವೆ. ಎಸ್‌ಎಡಿ ಜೊತೆಗಿನ ಮೈತ್ರಿಯಲ್ಲಿ ಬಿಎಸ್‌ಪಿ 23 ಅಸೆಂಬ್ಲಿ ಸ್ಥಾನಗಳನ್ನು ಹೊಂದಿರುವ ದೋಬಾ (ಜಲಂಧರ್, ಹೋಶಿಯಾರ್‌ಪುರ್, ನವಾನ್‌ಶಹರ್ ಮತ್ತು ಕಪುರ್ಥಾಲಾ ಜಿಲ್ಲೆಗಳು) ಯಲ್ಲಿ ನಿಗದಿಪಡಿಸಿದ 20 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಸ್ಪರ್ಧಿಸಲಿದೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈ ಮೈತ್ರಿಯನ್ನು ಪಂಜಾಬ್ನಲ್ಲಿ ಪ್ರಗತಿ ಮತ್ತು ಸಮೃದ್ಧಿಗೆ ಕಾರಣವಾಗುವ “ಹೊಸ ರಾಜಕೀಯ ಮತ್ತು ಸಾಮಾಜಿಕ ಉಪಕ್ರಮ” ಎಂದು ಕರೆದರೆ, ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಇದನ್ನು ರಾಜ್ಯ ರಾಜಕೀಯದಲ್ಲಿ “ಹೊಸ ದಿನ” ಎಂದು ಬಣ್ಣಿಸಿದರು.
ಇದನ್ನೂ ಓದಿ: ಕೊವಿಡ್ 19 ಲಸಿಕೆ ವಿಚಾರದಲ್ಲಿ ರಾಜಕೀಯ, ವಿವಾದ ಮಾಡುವುದನ್ನು ನಿಲ್ಲಿಸಿ: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್
Published On - 12:41 pm, Sun, 27 June 21