AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನೆಯಲ್ಲಿ ಹಣವೇ ಇಲ್ಲದಿರುವಾಗ ಲಾಕ್ ಮಾಡುವ ಅಗತ್ಯವೇನಿತ್ತು?’: ಮಧ್ಯಪ್ರದೇಶದ ಅಧಿಕಾರಿಗೆ ಪತ್ರ ಬರೆದಿಟ್ಟು ಹೋದ ಕಳ್ಳರು

ಅಧಿಕಾರಿಯ ಮನೆ ಶಾಸಕರ ಬಂಗಲೆಗಳು ಮತ್ತು ದೇವಾಸ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಪ್ರದೀಪ್ ಸೋನಿ ಮತ್ತು ಪೊಲೀಸ್ ಅಧೀಕ್ಷಕರ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿರುವ ಕಾರಣ ಈ ಘಟನೆಯು ಪೊಲೀಸರಿಗೆ ಸವಾಲಿನ ವಿಷಯವಾಗಿದೆ.

‘ಮನೆಯಲ್ಲಿ ಹಣವೇ ಇಲ್ಲದಿರುವಾಗ ಲಾಕ್ ಮಾಡುವ ಅಗತ್ಯವೇನಿತ್ತು?’: ಮಧ್ಯಪ್ರದೇಶದ ಅಧಿಕಾರಿಗೆ ಪತ್ರ ಬರೆದಿಟ್ಟು ಹೋದ ಕಳ್ಳರು
ಕಳ್ಳರು ಬರೆದ ಪತ್ರ
TV9 Web
| Edited By: |

Updated on: Oct 11, 2021 | 12:46 PM

Share

ಭೋಪಾಲ್: ಮಧ್ಯಪ್ರದೇಶದ ಉಪ ಜಿಲ್ಲಾಧಿಕಾರಿಯ ಮನೆಗೆ ಕಳ್ಳತನ ಮಾಡಲು ನುಗ್ಗಿದ ಕಳ್ಳರು ಮನೆಯಲ್ಲಿ ಏನೂ ಸಿಗದೇ ಇದ್ದಾಗ ಪತ್ರವೊಂದನ್ನು ಬರೆದಿಟ್ಟು ಹೋದ ವಿಚಿತ್ರ ಘಟನೆ ನಡೆದಿದೆ . “ಜಬ್ ಪೈಸೆ ನಹೀ ತೇ ತೋ ಲಾಕ್ ನಹಿ ಕರ್ನಾ ಥಾ ನಾ ಕಲೆಕ್ಟರ್ (ಹಣವೇ ಇಲ್ಲದಿರುವಾಗ ಲಾಕ್ ಮಾಡುವ ಅಗತ್ಯವೇನಿತ್ತು?) ಎಂದು ಪತ್ರದಲ್ಲಿ ಬರೆಯಲಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ 2.5 ಗಂಟೆ ಪ್ರಯಾಣಸಿದ ಸಿಗುವ  ದೇವಾಸ್​​ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ತ್ರಿಲೋಚನ್ ಗೌರ್ ಅವರ ಅಧಿಕೃತ ನಿವಾಸದಲ್ಲಿ ಕಳ್ಳತನ ನಡೆದಿದೆ.

ಅಧಿಕಾರಿಯ ಮನೆ ಶಾಸಕರ ಬಂಗಲೆಗಳು ಮತ್ತು ದೇವಾಸ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಪ್ರದೀಪ್ ಸೋನಿ ಮತ್ತು ಪೊಲೀಸ್ ಅಧೀಕ್ಷಕರ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿರುವ ಕಾರಣ ಈ ಘಟನೆಯು ಪೊಲೀಸರಿಗೆ ಸವಾಲಿನ ವಿಷಯವಾಗಿದೆ.

ಪ್ರಸ್ತುತ ದೇವಾಸ್‌ನ ಖಟೇಗಾಂವ್ ತಹಸಿಲ್‌ನಲ್ಲಿ ಎಸ್‌ಡಿಎಮ್ ಆಗಿ ನೇಮಕಗೊಂಡಿರುವ ತ್ರಿಲೋಚನ್ ಗೌರ್ ಕಳೆದ 15-20 ದಿನಗಳಿಂದ ಅವರ ಮನೆಯಲ್ಲಿ ಇರಲಿಲ್ಲ. ಮನೆಯೊಳಗೆ ತನ್ನ ಸಾಮಾನುಗಳು ಚದುರಿಹೋಗಿರುವುದನ್ನು ಮತ್ತು ಕೆಲವು ನಗದು ಮತ್ತು ಬೆಳ್ಳಿ ಆಭರಣಗಳು ಕಾಣೆಯಾಗಿರುವುದನ್ನು ಕಂಡು ಇವರು ದೂರು ನೀಡಿದ್ದರು.

“30,000 ನಗದು ಮತ್ತು ಕೆಲವು ಆಭರಣಗಳನ್ನು ತ್ರಿಲೋಚನ್ ಗೌರ್ ಅವರ ಸರ್ಕಾರಿ ನಿವಾಸದಿಂದ ಕಳವು ಮಾಡಲಾಗಿದೆ, ಅವರು ಪ್ರಸ್ತುತ ಖಟೇಗಾಂವ್‌ನ ಎಸ್ ಡಿಎಂ ಆಗಿ ನಿಯೋಜನೆಗೊಂಡಿದ್ದಾರೆ. ಘಟನೆಯ ನಿಖರವಾದ ಸಮಯ ಇನ್ನೂ ತಿಳಿದಿಲ್ಲ” ಎಂದು ಇನ್ಸ್‌ಪೆಕ್ಟರ್ ಉಮ್ರಾವ್ ಸಿಂಗ್ ಹೇಳಿದರು. ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Coal Crisis ದೇಶದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಇಲ್ಲ ಎಂದ ಕೇಂದ್ರ, ಇದೆ ಎನ್ನುತ್ತಿವೆ ರಾಜ್ಯಗಳು; ಹೇಗಿದೆ ಪರಿಸ್ಥಿತಿ?

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​