ಹೊಸದಿಲ್ಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಅವರು ಉಪರಾಷ್ಟ್ರಪತಿ (Vice President)ಸ್ಥಾನಕ್ಕೆ ಎನ್‌ಡಿಎ (NDA) ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಚೇರಿಯಿಂದ ಮಾಹಿತಿ ನೀಡಲಾಗಿದೆ. 80 ವರ್ಷ ವಯಸ್ಸಿನ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಾಗಿ ಪ್ರಸ್ತುತ ಲಂಡನ್‌ನಲ್ಲಿದ್ದಾರೆ. ಜುಲೈ 19 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಈ ಪ್ರಮುಖ ಸಾಂವಿಧಾನಿಕ ಹುದ್ದೆಗೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಆಗಸ್ಟ್ 10 ರಂದು ಅಧಿಕಾರ ತ್ಯಜಿಸುವ ನಾಲ್ಕು ದಿನಗಳ ಮೊದಲು ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಬೆನ್ನಿನ ಶಸ್ತ್ರಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದಾರೆ. ಭಾನುವಾರ ಶಸ್ತ್ರಚಿಕಿತ್ಸೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದಿದ್ದಾರೆ.
ಬಿಜೆಪಿಯೊಂದಿಗೆ ವಿಲೀನವಾಗಲಿದೆ ಪಂಜಾಬ್ ಲೋಕ ಕಾಂಗ್ರೆಸ್
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಲಂಡನ್‌ನಿಂದ ಹಿಂದಿರುಗಿದ ನಂತರ ಪಂಜಾಬ್ ಲೋಕ ಕಾಂಗ್ರೆಸ್ ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ. ಪಕ್ಷದಿಂದ ಇದುವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಆದರೆ ಈ ವಿಷಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಂಜಾಬ್ ಬಿಜೆಪಿಯ ಹಿರಿಯ ನಾಯಕ ಹರ್ಜಿ ಸಿಂಗ್ ಗ್ರೆವಾಲ್ ಶನಿವಾರ ಹೇಳಿದ್ದಾರೆ.
ಲಂಡನ್‌ಗೆ ಹೊರಡುವ ಮೊದಲು, ಬಿಜೆಪಿಯೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸುವ ಉದ್ದೇಶವನ್ನು ಸಿಂಗ್ ತಿಳಿಸಿದ್ದರು. ಮಾಜಿ ಮುಖ್ಯಮಂತ್ರಿ ಅವರು ಹಿಂದಿರುಗಿದ ನಂತರ ವಿಲೀನವನ್ನು ಘೋಷಿಸುತ್ತಾರೆ ಎಂದು ಗ್ರೆವಾಲ್ ಹೇಳಿದರು.
ಹಿಂದಿನ ಪಟಿಯಾಲ ರಾಜಮನೆತನದ ವಂಶಸ್ಥ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಿಂಗ್, ಕಳೆದ ವರ್ಷ ಮುಖ್ಯಮಂತ್ರಿಯಾಗಿ ಅನಧಿಕೃತವಾಗಿ ನಿರ್ಗಮಿಸಿದ ನಂತರ ಕಾಂಗ್ರೆಸ್ ತೊರೆದು ಪಿಎಲ್ಸಿ ಪಕ್ಷ ಸ್ಥಾಪಿಸಿದ್ದರು.
ಪಿಎಲ್ಸಿ 2022 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿ ದಳ (ಸಂಯುಕ್) ಜೊತೆ ಮೈತ್ರಿ ಮಾಡಿಕೊಂಡಿದೆ.
ಆದಾಗ್ಯೂ, ಪಿಎಲ್ಸಿ ಅಭ್ಯರ್ಥಿಗಳಲ್ಲಿ ಯಾರೂ ಚುನಾವಣೆ ಗೆದ್ದಿಲ್ಲ. ಅಮರಿಂದರ್ ಅವರೇ ಅವರ ತವರು ಪಟಿಯಾಲ ನಗರ ಸೀಟಿನಲ್ಲಿ ಪರಾಭವಗೊಂಡಿದ್ದಾರೆ.
Published On - 4:09 pm, Sat, 2 July 22