ಮಹಾರಾಷ್ಟ್ರದಲ್ಲಿ ಅಂಗಡಿ ಮಾಲೀಕನ ಹತ್ಯೆ ಪ್ರಕರಣ: ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ

ಉದಯ್​ಪುರದಲ್ಲಿ ಟೈಲರ್ ಹತ್ಯೆಗೂ ಮುನ್ನ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಪೋಸ್ಟ್​ ಹಾಕಿದ್ದಕ್ಕೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಅಂಗಡಿ ಮಾಲೀಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಮಹಾರಾಷ್ಟ್ರದಲ್ಲಿ ಅಂಗಡಿ ಮಾಲೀಕನ ಹತ್ಯೆ ಪ್ರಕರಣ: ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ
ಹತ್ಯೆಯಾದ ಉಮೇಶ್ ಕೋಲ್ಹೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 02, 2022 | 3:42 PM

ಮುಂಬೈ: ಪ್ರವಾದಿ ಮೊಹಮ್ಮದ್ (Prophet Mohammad) ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಭೀಕರ ಹತ್ಯೆ ಪ್ರಕರಣದ ಉದ್ವಿಗ್ನತೆಯ ನಡುವೆಯೇ ವಾರದ ಹಿಂದೆ ಮಹಾರಾಷ್ಟ್ರದಲ್ಲಿ ಕೆಮಿಸ್ಟ್ ಒಬ್ಬರ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದ ಬಗ್ಗೆ ಎನ್ಐಎ (NIA) ತನಿಖೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆದೇಶಿಸಿದ್ದಾರೆ. ಉದಯ್​ಪುರದಲ್ಲಿ ಟೈಲರ್ ಹತ್ಯೆಗೂ ಮುನ್ನ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಪೋಸ್ಟ್​ ಹಾಕಿದ್ದಕ್ಕೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಅಂಗಡಿ ಮಾಲೀಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವರದಿಗಳ ಪ್ರಕಾರ, ಜೂನ್ 21 ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ. ಅಮರಾವತಿಯ ಸ್ಥಳೀಯ ಬಿಜೆಪಿ ಘಟಕವು 54 ವರ್ಷದ ಉಮೇಶ್ ಕೋಲ್ಹೆ ಅವರ ಹತ್ಯೆಯು ಉದಯಪುರ ಘಟನೆಗೆ ಸಂಬಂಧಿಸಿದೆ ಎಂದು ಆರೋಪಿಸಿದೆ. ಉದಯಪುರ ಹತ್ಯೆ ಪ್ರಕರಣವನ್ನೂ  ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.

“ನೂಪುರ್ ಶರ್ಮಾ ವಿವಾದದ ಹಿನ್ನೆಲೆಯಲ್ಲಿ ಉಮೇಶ್ ಕೋಲ್ಹೆ ಹತ್ಯೆ ನಡೆದಿದೆ. ಪೊಲೀಸ್ ಇಲಾಖೆಯ ಜನರು ಸಹ ಹಾಗೆ ಭಾವಿಸುತ್ತಾರೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಕಾರಣಕ್ಕಾಗಿ ಹಂತಕರು ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಆದರೆ ಪೊಲೀಸರು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮರಾವತಿ ಜಿಲ್ಲೆಯ ಬಿಜೆಪಿ ನಾಯಕ ತುಷಾರ್ ಭಾರ್ತಿಯಾ ಹೇಳಿದ್ದಾರೆ.

ಈ ಕೊಲೆ ಜೂನ್  21 ರಂದು ಸಂಭವಿಸಿದೆ. ಇದು 22 ರಂದು ಈ ಪ್ರಕರಣ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದ್ದರೆ, ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಕೊಲೆಯಾಗುತ್ತಿರಲಿಲ್ಲ. ಅದಕ್ಕಾಗಿಯೇ ಪೊಲೀಸರು ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳನ್ನು ಹಿಡಿದರೂ ನಿಜವಾದ ಕಾರಣ ಸಿಗದಿದ್ದರೆ ಆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ಭಾರ್ತಿಯಾ ಹೇಳಿದ್ದಾರೆ.

ಇದನ್ನೂ ಓದಿ
Image
Prophet Row: ನೂಪುರ್ ಹೇಳಿಕೆ ಬೆಂಬಲಿಸಿದ್ದಕ್ಕೆ ಅಮರಾವತಿಯಲ್ಲಿ ನಡೆದಿತ್ತು ಅಂಗಡಿ ಮಾಲೀಕನ ಬರ್ಬರ ಹತ್ಯೆ
Image
Udaipur Killing ಉದಯಪುರ ಹಂತಕರು ₹5000 ಪಾವತಿ ಮಾಡಿ 2611 ಎಂಬ ಸಂಖ್ಯೆ ಪಡೆದಿದ್ದರು: ರಾಜಸ್ಥಾನ ಪೊಲೀಸ್
Image
Pranitha Subhash: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ ಪ್ರಣಿತಾ; ‘ಹಿಂದೂಗಳ ಜೀವ ಮುಖ್ಯ’ ಎಂದು ಫಲಕ ಹಿಡಿದ ನಟಿ

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಆದರೆ ಇದಕ್ಕೆ ಕಾರಣವೇನು ಎಂಬುದನ್ನು ವಿವರಿಸಿಲ್ಲ. ಅವರು ಈ ಪ್ರಕರಣದ ಬಗ್ಗೆ ಮೌನವಾಗಿದ್ದಾರೆ ಎಂದು ಭಾರ್ತಿಯಾ ಆರೋಪಿಸಿದ್ದಾರೆ.

ವರದಿಗಳ ಪ್ರಕಾರ, ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡಗಳು ಪ್ರಕರಣದ ತನಿಖೆಗಾಗಿ ಅಮರಾವತಿಗೆ ತೆರಳಲಿವೆ. ವೆಟರ್ನರಿ ಕೆಮಿಸ್ಟ್  ಆಗಿದ್ದ ಉಮೇಶ್ ಕೋಲ್ಹೆ ಜೂನ್ 21ರಂದು ತಮ್ಮ ಅಂಗಡಿಯಿಂದ ಮರಳುತ್ತಿದ್ದಾಗ ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿದ್ದರು. ಮೇಲ್ನೋಟಕ್ಕೆ ಇದು ದರೋಡೆ ಅಥವಾ ವೈಯಕ್ತಿಕ ದ್ವೇಷ ಎಂದು ಕಂಡರೂ ಈ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.

ಉದಯಪುರದಲ್ಲಿ ಕನ್ಹಯ್ಯಾ ಲಾಲ್ ನಂತೆ ಉಮೇಶ್ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್  ಮಾಡಿದ್ದರು.

Published On - 3:23 pm, Sat, 2 July 22