Udaipur Killing ಉದಯಪುರ ಹಂತಕರು ₹5000 ಪಾವತಿ ಮಾಡಿ 2611 ಎಂಬ ಸಂಖ್ಯೆ ಪಡೆದಿದ್ದರು: ರಾಜಸ್ಥಾನ ಪೊಲೀಸ್

RJ 27 AS 2611ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್ ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ಬಿದ್ದಿದೆ. ರಿಯಾಜ್ ಉದ್ದೇಶಪೂರ್ವಕವಾಗಿ 2611 ಸಂಖ್ಯೆಯನ್ನು ಕೇಳಿದ್ದುಈ ನಂಬರ್ ಪ್ಲೇಟ್‌ಗೆ ₹ 5,000 ಹೆಚ್ಚುವರಿ ಪಾವತಿಸಿದ್ದಾರೆ...

Udaipur Killing ಉದಯಪುರ ಹಂತಕರು ₹5000 ಪಾವತಿ ಮಾಡಿ 2611 ಎಂಬ ಸಂಖ್ಯೆ ಪಡೆದಿದ್ದರು: ರಾಜಸ್ಥಾನ ಪೊಲೀಸ್
ಹಂತಕರ ಬೈಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 01, 2022 | 9:44 PM

ಉದಯಪುರ: ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಗುಂಪಿನೊಂದಿಗೆ ಉದಯಪುರ ಹಂತಕರ (Udaipur Killing) ಸಂಪರ್ಕವನ್ನು ರಾಜಸ್ಥಾನ ಪೊಲೀಸರು (Rajasthan police) ಬಹಿರಂಗಪಡಿಸಿದ ಕೆಲವೇ ದಿನಗಳಲ್ಲಿ, ಪೊಲೀಸರು ಇಂದು ಪ್ರಕರಣದಲ್ಲಿ ಮತ್ತೊಂದು ಸಂಗತಿ ಬಹಿರಂಗಪಡಿಸಿದ್ದಾರೆ. ಹಂತಕರಲ್ಲಿ ಒಬ್ಬನಾದ ರಿಯಾಜ್ ಅಖ್ತರಿ ತನ್ನ ಮೋಟಾರ್‌ಸೈಕಲ್‌ಗೆ 2611 ಎಂದು ಬರೆದ ನಂಬರ್ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದಾನೆ. ಮುಂಬೈ ದಾಳಿ ನಡೆದ ದಿನಾಂಕವನ್ನು ಸೂಚಿಸುವ 2611ನಂಬರ್ ಪ್ಲೇಟ್ ಇದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅದೇ ವಾಹನದಲ್ಲಿ ಇಬ್ಬರು ಹಂತಕರಾದ ಘೌಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿ ಟೈಲರ್ ಕನ್ಹಯ್ಯಾ ಲಾಲ್ ಅವರ ಕುತ್ತಿಗೆಯನ್ನು ಕ್ರೂರವಾಗಿ ಸೀಳಿ ಪರಾರಿಯಾಗಿದ್ದರು. RJ 27 AS 2611ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್ ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ಬಿದ್ದಿದೆ. ರಿಯಾಜ್ ಉದ್ದೇಶಪೂರ್ವಕವಾಗಿ 2611 ಸಂಖ್ಯೆಯನ್ನು ಕೇಳಿದ್ದುಈ ನಂಬರ್ ಪ್ಲೇಟ್‌ಗೆ ₹ 5,000 ಹೆಚ್ಚುವರಿ ಪಾವತಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದು ಆತನ ಯೋಜನೆಗ ಬಗ್ಗೆ ಪ್ರಮುಖ ಸುಳಿವುಗಳನ್ನು ಒದಗಿಸಬಹುದು.

2014ರಲ್ಲಿಯೇ ರಿಯಾಜ್  ಏನನ್ನು ಯೋಚಿಸುತ್ತಿದ್ದ ಎಂಬುದಕ್ಕೆ ನಂಬರ್ ಪ್ಲೇಟ್ ಕೂಡ ಸುಳಿವು ನೀಡಬಹುದೆಂದು ಪೊಲೀಸರು ನಂಬಿದ್ದಾರೆ. ರಿಯಾಜ್‌ನ ಪಾಸ್‌ಪೋರ್ಟ್ ಪ್ರಕಾರ ಈತ 2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದ. ಈತ ಪಾಕಿಸ್ತಾನಕ್ಕೆ ಕರೆಗಳು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು.

ಇದನ್ನೂ ಓದಿ
Image
Udaipur Killing ಉದಯಪುರ ಹತ್ಯೆ ಖಂಡಿಸಿ ಗುರ್‌ಗಾಂವ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷದ ಘೋಷಣೆ; ಪ್ರಕರಣ ದಾಖಲು
Image
ಎಲ್ಲ ಧರ್ಮಗಳ ಬಗ್ಗೆ ಗೌರವವಿರಲಿ, ಜಾಗತಿಕವಾಗಿ ಸಾಮರಸ್ಯ ಮತ್ತು ಶಾಂತಿಯಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು ಕರೆ ನೀಡಿದ ವಿಶ್ವಸಂಸ್ಥೆ
Image
ಟೈಲರ್ ಹತ್ಯೆ ಪ್ರಕರಣ: ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಹಂತಕರು

ಉದಯಪುರದಿಂದ 45 ಕಿಮೀ ದೂರದಲ್ಲಿರುವ ರಾಜ್‌ಸಮಂದ್ ಜಿಲ್ಲೆಯ ಪೊಲೀಸ್ ಬ್ಯಾರಿಕೇಡ್‌ನಲ್ಲಿ ಇಬ್ಬರು ವ್ಯಕ್ತಿಗಳು ಈ ಬೈಕ್‌ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಪ್ರಾದೇಶಿಕ ಸಾರಿಗೆ ಕಚೇರಿ (RTO) ದಾಖಲೆಗಳು 2013 ರಲ್ಲಿಎಚ್​​​ಡಿಎಫ್​​ಸಿ (HDFC )ನಿಂದ ಸಾಲವನ್ನು ಪಡೆದು ರಿಯಾಜ್ ಅಖ್ತರಿ ಬೈಕು ಖರೀದಿಸಿದ್ದಾರೆ ಎಂದು ತೋರಿಸುತ್ತವೆ. ವಾಹನದ ವಿಮೆಯು 2014 ಮಾರ್ಚ್‌ನಲ್ಲಿ ಮುಕ್ತಾಯಗೊಂಡಿತು.

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ