40 ದಿನಗಳಲ್ಲಿ ಐದು ಜನರನ್ನು ಕೊಂದ ಹುಲಿ ಲಕ್ನೋದ ಮೃಗಾಲಯಕ್ಕೆ
ಇತ್ತೀಚೆಗೆ ಖೈರಾತಿಯಾ ಗ್ರಾಮದ ಸುತ್ತಮುತ್ತಲಿನ ಮಂಜ್ರಾ ಪುರಬ್ ಅರಣ್ಯ ಪ್ರದೇಶದಲ್ಲಿ ಹುಲಿ ಐದು ಜನರನ್ನು ಕೊಂದಿದೆ.
ಲಖಿಂಪುರ ಖೇರಿ: 40 ದಿನಗಳಲ್ಲಿ ಐದು ಜನರನ್ನು ಕೊಂದು ಮೂರು ದಿನಗಳ ಹಿಂದೆ ಸೆರೆಹಿಡಿಯಲಾದ ಕ್ರೂರ ವ್ಯಾಘ್ರವನ್ನು ಲಕ್ನೋದ ನವಾಬ್ ವಾಜಿದ್ ಅಲಿ ಶಾ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುಲಿ ತನಗೆ ಕಾಡಿನಲ್ಲಿ ಬೇಟೆಯಾಡಲು ಸಾಧ್ಯವಾಗದ ಕಾರಣ ಸಿಕ್ಕ ಸಿಕ್ಕ ಮನುಷ್ಯರ ಮೇಲೆ ದಾಳಿಯನ್ನು ಮಾಡಿದೆ ಎಂದು ಅಧಿಕಾರಿ ಹೇಳಿದರು. ಮಂಜ್ರಾ ಪುರಬ್ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಅನೇಕ ಜನರ ಸಾವು, ಅಲ್ಲಿ ಜನರಲ್ಲಿ ಆಂತಕವನ್ನು ಮೂಡಿಸಿದೆ. ಹುಲಿಯನ್ನು ಶುಕ್ರವಾರ ರಾತ್ರಿ ಪಶುವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ಲಕ್ನೋ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕತರ್ನಿಯಾಘಾಟ್‌ನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಆಕಾಶ್ ಬಧವಾನ್ ಹೇಳಿದ್ದಾರೆ. ವನ್ಯಜೀವಿ ಅಭಯಾರಣ್ಯ, ಪಿಟಿಐಗೆ ತಿಳಿಸಿದೆ. ಶನಿವಾರ ಬೆಳಗ್ಗೆ ಹುಲಿ ಸುರಕ್ಷಿತವಾಗಿ ಮೃಗಾಲಯವನ್ನು ತಲುಪಿದೆ ಎಂದು ಅವರು ಹೇಳಿದರು.
ಜೂನ್ 29 ರಂದು ರಾತ್ರಿ ದುಧ್ವಾ ಬಫರ್ ವಲಯದ ಮಂಜ್ರಾ ಪುರಬ್ ಅರಣ್ಯ ಪ್ರದೇಶದಿಂದ ಇದನ್ನು ಸೆರೆಹಿಡಿಯಲಾಯಿತು. ಇದನ್ನು ರಾತ್ರಿಯಲ್ಲಿ ಸ್ಥಳಾಂತರವನ್ನು ನಡೆಸಲಾಯಿತು ಎಂದು ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಸಂಜಯ್ ಕುಮಾರ್ ಪಾಠಕ್ ಪಿಟಿಐಗೆ ತಿಳಿಸಿದ್ದಾರೆ. ವಶಪಡಿಸಿಕೊಂಡ ಹುಲಿಯು ಸುಮಾರು ಒಂಬತ್ತು ವರ್ಷ ವಯಸ್ಸಾಗಿದೆ ಮತ್ತು ದೈಹಿಕವಾಗಿಯು ತುಂಬಾ ಬೆಳೆದಿದೆ. ಇದರ ಎಡ ಕೋರೆಹಲ್ಲುಗಳು ಮುರಿದು ಹೋಗಿದೆ. ಇದು ಹೆಣ್ಣು ಹುಲಿಯಾಗಿದ್ದು ಅನೇಕ ಪ್ರಾಣಿಗಳನ್ನು ಭೇಟೆಯಾಡಿದೆ. ಶ್ರೀ ಪಾಠಕ್ ಅವರು ಕತರ್ನಿಯಾಘಾಟ್‌ನಲ್ಲಿ ಸೆರೆಹಿಡಿದ ನಂತರ ಇದನ್ನು ಪರಿಶೀಲನೆ ನಡೆಸಿದ ತಜ್ಞರು ಅದನ್ನು ಮತ್ತೆ ಅರಣ್ಯಕ್ಕೆ ಬಿಡಲು ಸಾಧ್ಯವಿಲ್ಲ ಎಂದು ಪಿಟಿಐಗೆ ಮಾಹಿತಿ ನೀಡಿದರು.
ಇದನ್ನು ಓದಿ : ಮಹಾರಾಷ್ಟ್ರದಲ್ಲಿ ಅಂಗಡಿ ಮಾಲೀಕನ ಹತ್ಯೆ ಪ್ರಕರಣ: ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ
ಇತ್ತೀಚೆಗೆ ಖೈರಾತಿಯಾ ಗ್ರಾಮದ ಸುತ್ತಮುತ್ತಲಿನ ಮಂಜ್ರಾ ಪುರಬ್ ಅರಣ್ಯ ಪ್ರದೇಶದಲ್ಲಿ ಹುಲಿ ಐದು ಜನರನ್ನು ಕೊಂದಿದೆ. ಮೇ 21 ರಂದು ದುಮೇರಾ ಗ್ರಾಮದ ಮಹೇಶ್, ಮೇ 23 ರಂದು ಶಾಹಪುರ್ ಪಧುವಾ ಕಮಲೇಶ್, ಜೂನ್ 17 ರಂದು ರಾತ್ರಿ ಖೈರತಿಯ ಸ್ಥಳೀಯ ಅರ್ಚಕ ಮೋಹನ್ ದಾಸ್, ನಯಾಪಿಂಡ್‌ನ ಸೂರಜ್ ಸಿಂಗ್ -ಜೂನ್ 23 ರಂದು ಖೈರಾತಿಯಾ ಮತ್ತು ಜೂನ್ 27 ರಂದು ಖರಾಟಿಯಾದ ಮಿಂದಾರ್ ಕೌರ್.
Published On - 3:34 pm, Sat, 2 July 22