NEET-UG case: ‘ಮಾಸ್ಟರ್‌ಮೈಂಡ್’, ‘ಸಾಲ್ವರ್’ ಆಗಿ ಕೆಲಸ ಮಾಡಿದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ
ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಸಾಲ್ವರ್ ಗಳನ್ನು" ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಪರೀಕ್ಷೆಯ ದಿನದಂದು ಹಜಾರಿಬಾಗ್‌ನಲ್ಲಿ ಅವರ ಉಪಸ್ಥಿತಿಯನ್ನು ತಾಂತ್ರಿಕ ಕಣ್ಗಾವಲು ದೃಢಪಡಿಸಿದೆ ಎಂದು ವಿಷಯದ ಪರಿಚಿತ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ದೆಹಲಿ ಜುಲೈ 20: ಕೇಂದ್ರೀಯ ತನಿಖಾ ದಳ (CBI) ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ (NEET-UG paper leak case) “ಮಾಸ್ಟರ್ ಮೈಂಡ್” ಮತ್ತು ಸಾಲ್ವರ್ ಆಗಿ ಕಾರ್ಯನಿರ್ವಹಿಸಿದ ಇಬ್ಬರು ಎಂಬಿಬಿಎಸ್ (MBBS) ವಿದ್ಯಾರ್ಥಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಸಾಲ್ವರ್ ಗಳನ್ನು ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ.
ಪರೀಕ್ಷೆಯ ದಿನದಂದು ಹಜಾರಿಬಾಗ್‌ನಲ್ಲಿ ಅವರ ಉಪಸ್ಥಿತಿಯನ್ನು ತಾಂತ್ರಿಕ ಕಣ್ಗಾವಲು ದೃಢಪಡಿಸಿದೆ ಎಂದು ವಿಷಯದ ಪರಿಚಿತ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಆರೋಪಿ ಮಾಸ್ಟರ್ ಮೈಂಡ್ ಬಿ.ಟೆಕ್ ಪದವೀಧರ ಎಂದು ಪಿಟಿಐ ವರದಿ ಮಾಡಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಸುಪ್ರೀಂಕೋರ್ಟ್ ಆದೇಶದ ನಂತರ NEET-UG ಗಾಗಿ ಕೇಂದ್ರ ಮತ್ತು ನಗರವಾರು ಫಲಿತಾಂಶಗಳನ್ನು ಪ್ರಕಟಿಸಿದ ಗಂಟೆಗಳ ನಂತರ ಇವರ ಬಂಧನದ ಸುದ್ದಿಯಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳ ವಿಚಾರಣೆ ನಡೆಯುತ್ತಿದೆ.
ಶುಕ್ರವಾರ, ಸಿಬಿಐ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (RIMS) ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸುರಭಿ ಕುಮಾರಿಯನ್ನು ‘ಸಾಲ್ವರ್ ಮಾಡ್ಯೂಲ್’ ಭಾಗವಾಗಿ ಆರೋಪದ ಮೇಲೆ ಬಂಧಿಸಿದೆ.
ಸಿಬಿಐ ಎರಡು ದಿನಗಳ ವಿವರವಾದ ವಿಚಾರಣೆಯ ನಂತರ ಕುಮಾರಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 16 ಕಿಮೀ ದುರ್ಗಮ ಹಾದಿ ಕ್ರಮಿಸಿ ಕುಗ್ರಾಮದಲ್ಲಿರುವ ಬುಡಕಟ್ಟು ಜನರಿಗೆ ಔಷಧಿ ತಲುಪಿಸಿದ ತೆಲಂಗಾಣ ಆರೋಗ್ಯ ಅಧಿಕಾರಿ
ಎನ್‌ಟಿಎ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ NEET-UG ಪರೀಕ್ಷೆ ನಡೆಸುತ್ತದೆ. ಈ ವರ್ಷ, ಮೇ 5 ರಂದು ವಿದೇಶದಲ್ಲಿ 14 ಸೇರಿದಂತೆ 571 ನಗರಗಳ 4,750 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Sat, 20 July 24