2020ರಲ್ಲಿ 800ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥ: ಸಿಬಿಐ ನಿರ್ದೇಶಕ

ಕೊವಿಡ್-19ಸೋಂಕು ತಗುಲದಂತೆ ಎಚ್ಚರವಾಗಿರಬೇಕಲ್ಲದೆ, ಎಲ್ಲ ಸುರಕ್ಷತಾ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಸಿಬಿಐ ನಿರ್ದೇಶಕ ರಿಷಿಕುಮಾರ್ ಶುಕ್ಲಾ ತಮ್ಮ ಅಧಿಕಾರಿಗಳಿಗೆ ತಾಕೀತು ಮಾಡಿದರು. ದೇಶದೆಲ್ಲೆಡೆ ಇರುವ ಸಿಬಿಐ ಕಚೇರಿಗಳನ್ನು ಆಗಿಂದಾಗ್ಗೆ ಸ್ಯಾನಿಟೈಸ್ ಮಾಡುತ್ತಿರಬೇಕು ಮತ್ತು ಅಧಿಕಾರಿಗಳೆಲ್ಲ ಅಗಾಗ ಕೊವಿಡ್-19 ಪರೀಕ್ಷಣೆಗೆ ಒಳಗಾಗಬೇಕು ಎಂಬ ಸಲಹೆಯನ್ನೂ ಅವರು ನೀಡಿದರು.

2020ರಲ್ಲಿ 800ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥ: ಸಿಬಿಐ ನಿರ್ದೇಶಕ
ಸಿಬಿಐ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 01, 2021 | 11:12 PM

ದೆಹಲಿ: ಹೊಸ ವರ್ಷಾಚರಣೆಯ ಅಂಗವಾಗಿ ಕೇಂದ್ರ ತನಿಖಾ ದಳದ (ಸಿಬಿಐ)ಎಲ್ಲ ಅಧಿಕಾರಿಗಳನ್ನು ವರ್ಚ್ಯುಯಲ್ ಸಭೆಯೊಂದರ ಮೂಲಕ ಅಭಿನಂದಿಸಿ ಇಂದು ಮಾತಾಡಿದ ಸಂಸ್ಥೆಯ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಅವರು ಕೊವಿಡ್-19 ಪಿಡುಗಿನ ಉಪಟಳದ ಹೊರತಾಗಿಯೂ 2020ರಲ್ಲಿ 800ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿದ ಅಧಿಕಾರಿಗಳ ಶ್ರಮವನ್ನು ಕೊಂಡಾಡಿದರು.

‘‘ಮಹಾಮಾರಿ ಮತ್ತು ಲಾಕ್​ಡೌನ್​ಗಳು ನಮಗೆ ಸವಾಲಾಗಿ ಎದುರಾದವು. ಸುರಕ್ಷತಾ ಕ್ರಮಗಳನ್ನು ಅನುಸರಿಸಿದಾಗ್ಯೂ ನಮ್ಮ ಕೆಲವು ಅಧಿಕಾರಿಗಳು ಈ ಭೀಕರ ವ್ಯಾಧಿಗೆ ಬಲಿಯಾದರು. ಅವರ ಕುಟುಂಬಗಳೊಂದಿಗೆ ನಾವು ಯಾವತ್ತೂ ಇರುತ್ತೇವೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನಮ್ಮ ಸಂಸ್ಥೆ ಒದಗಿಸುತ್ತದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ,’’ ಎಂದು ಶುಕ್ಲಾ ಹೇಳಿದರು.

ಸೋಂಕು ತಗುಲದಂತೆ ಎಚ್ಚರವಾಗರಬೇಕಲ್ಲದೆ, ಎಲ್ಲ ಸುರಕ್ಷತಾ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಅವರು ತಮ್ಮ ಅಧಿಕಾರಿಗಳಿಗೆ ತಾಕೀತು ಮಾಡಿದರು. ದೇಶದೆಲ್ಲೆಡೆ ಇರುವ ಸಿಬಿಐ ಕಚೇರಿಗಳನ್ನು ಆಗಿಂದಾಗ್ಗೆ ಸ್ಯಾನಿಟೈಸ್ ಮಾಡುತ್ತಿರಬೇಕು ಮತ್ತು ಅಧಿಕಾರಿಗಳೆಲ್ಲ ಅಗಾಗ ಕೊವಿಡ್-19 ಪರೀಕ್ಷಣೆಗೆ ಒಳಗಾಗಬೇಕು ಎಂದು ರಿಷಿ ಕುಮಾರ್ ಶುಕ್ಲಾ ಹೇಳಿದರು.

ಸಿಬಿಐ ಕೇಂದ್ರ ಕಚೇರಿ

‘ನಿಮ್ಮೆಲ್ಲರ ಶ್ರಮ ಮತ್ತು ಭಗೀರಥ ಪ್ರಯತ್ನಗಳಿಂದಾಗಿ ನಾವು ಕಳೆದ ವರ್ಷ ಬಹಳಷ್ಟು ಕೇಸುಗಳನ್ನು ಇತ್ಯರ್ಥಗೊಳಿಸಿ ನಮ್ಮ ಟಾರ್ಗೆಟ್ ತಲುಪಿದೆವು. ಮುಂಬರುವ ದಿನಗಳಲ್ಲಿ ನಾವು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಬೇಕಿದೆ,’ ಎಂದು ಶುಕ್ಲಾ ಹೇಳಿದರು.

ಕೇರಳದ ಆತ್ಯಂತ ಕ್ಲಿಷ್ಟ ಪ್ರಕರಣವನ್ನು ಉಲ್ಲೇಖಿಸಿದ ಅವರು ಹಲವಾರು ಅಡೆತಡೆಗಳ ಹೊರತಾಗಿಯೂ ಅದನ್ನು ಇತ್ಯರ್ಥಗೊಳಿಸಿದ ಆಧಿಕಾರಿಗಳನ್ನು ಶ್ಲಾಘಿಸಿದರು.

ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಅಧಿಕಾರಿಗಳು ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಲು ಪ್ರಾವೀಣ್ಯತೆ ಹೊಂದಬೇಕಿರುವ ಅಗತ್ಯಕ್ಕೆ ಒತ್ತು ನೀಡಿದ ಶುಕ್ಲಾ, ಕೊವಿಡ್-19 ಮಹಾಮಾರಿಯಿಂದಾಗಿ ಈಗ ಆನ್​ಲೈನ್ ಮತ್ತು ವರ್ಚ್ಯುಯಲ್ ಮೂಲಕ ಅನೇಕ ತರಬೇತಿಗಳು ಲಭ್ಯವಿದ್ದು ಅಧಿಕಾರಿ್ಳು ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು. ಮೇಲ್ವಿಚಾರಣೆ ವರ್ಗದ ಅಧಿಕಾರಿಗಳು ತನಿಖೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಹೊಸ ವರ್ಷದ ರೆಸ್ಯೂಲೂಷನ್ ಮಾಡಿಕೊಳ್ಳಬೇಕೆಂದು ಶುಕ್ಲಾ ಸಲಹೆ ನೀಡಿದರು.

ಸಿಬಿಐಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳುವ ಭರವಸೆಯನ್ನೂ ನೀಡಿದ ಶುಕ್ಲಾ ಅವರು, ಬ್ಯಾಂಕುಗಳಲ್ಲಿ ನಡೆಯುತ್ತಿರುವ ಭಾರಿ ಪ್ರಮಾಣದ ವಂಚನೆಗಳು ಸಿಬಿಐ ಎದುರಿರುವ ಹೊಸ ಸವಾಲುಗಳಾಗಿವೆ ಎಂದು ಹೇಳಿ ತಮ್ಮ ಮಾತು ಮುಗಿಸಿದರು.

ಸಭೆಯಲ್ಲಿ ರಿಷಿಕುಮಾರ್ ಶುಕ್ಲಾ ಅವರೊಂದಿಗೆ ಸಿಬಿಐನ ಹೆಚ್ಚುವರಿ ನಿರ್ದೇಶಕರು ಮತ್ತು ಇತರ ಕೆಲ ಅಧಿಕಾರಿಗಳಿದ್ದರು.

Published On - 10:16 pm, Fri, 1 January 21

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ