HAL ನಿರ್ಮಿತ 83 ತೇಜಸ್ ಲಘು ಯುದ್ಧವಿಮಾನ ಖರೀದಿಗೆ ಕೇಂದ್ರದ ಅನುಮೋದನೆ
ಎಚ್ಎಎಲ್ನಿಂದ ಲಘು ಯುದ್ಧ ವಿಮಾನಗಳ ಖರೀದಿಯಿಂದಾಗಿ ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಇದು ಹೊಸ ಉದ್ಯೋಗಗಳ ಸೃಷ್ಟಿಗೆ ಸಹಾಯವಾಗುತ್ತದೆ. ಇಂದು ಭದ್ರತಾ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಿದ್ದು, ಐತಿಹಾಸಿಕ ನಿರ್ಧಾರವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ನವದೆಹಲಿ: ಹಿಂದೂಸ್ತಾನ್ ಎರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿತ 83 ತೇಜಸ್ ಲಘು ಯುದ್ಧ ವಿಮಾನಗಳನ್ನು ₹ 48 ಸಾವಿರ ಕೋಟಿ ಮೊತ್ತಕ್ಕೆ ಖರೀದಿಸುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿದೆ. ಭಾರತದ ರಕ್ಷಣಾ ಇತಿಹಾಸದಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಚಿವ ಸಂಪುಟ ಉಪಸಮಿತಿಯ ಸಭೆಯಲ್ಲಿ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. ಅದರ ಅನ್ವಯ ಶೀಘ್ರದಲ್ಲೇ ಕೇಂದ್ರ ಸರ್ಕಾರ 83 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಿ, ವಾಯುಪಡೆಗೆ ಹಸ್ತಾಂತರ ಮಾಡಲಿದೆ. ಇಂದು ಅನುಮೋದನೆ ಸಿಕ್ಕ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, ಮಾಹಿತಿ ನೀಡಿದ್ದಾರೆ.
ವಾಯುಪಡೆಗೆ ಇನ್ನಷ್ಟು ಬಲ ತುಂಬುವ ಸಲುವಾಗಿ ಇಂದು ಅತಿ ದೊಡ್ಡ ದೇಶೀಯ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ. 48,000 ಕೋಟಿ ರೂಪಾಯಿ ವೆಚ್ಚದಲ್ಲಿ ಎಚ್ಎಎಲ್ನಿಂದ 83 ತೇಜಸ್ ಲಘು ಯುದ್ಧ ವಿಮಾನಗಳನ್ನು (LCA-Tejas) ಖರೀದಿಸಲಾಗುವುದು. ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಈ ಒಪ್ಪಂದ ಬಹುದೊಡ್ಡ ಗೇಮ್ಚೇಂಜರ್ ಆಗಲಿದೆ ಎಂದು ರಾಜನಾಥ್ ಸಿಂಗ್ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ಈ ತೇಜಸ್ ಲಘು ಯುದ್ಧವಿಮಾನಗಳು ಇಂಡಿಯನ್ ಏರ್ಫೋರ್ಸ್ನ ಬೆನ್ನೆಲುಬಾಗಲಿವೆ ಎಂದೂ ಹೇಳಿದ್ದಾರೆ.
ಸದ್ಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಘು ಯುದ್ಧ ವಿಮಾನ (LAC) Mk1ಗಿಂತಲೂ ಇದೀಗ ವಾಯುಪಡೆ ಸೇರ್ಪಡೆಯಾಗುತ್ತಿರುವ ಈ ತೇಜಸ್ Mk1A ಲಘು ಯುದ್ಧ ವಿಮಾನಗಳು ಸುಧಾರಿತ ಹಾಗೂ ಮುಂದುವರಿದ ವ್ಯವಸ್ಥೆಗಳನ್ನು ಹೊಂದಿವೆ. ಸದ್ಯ ಈ Mk1Aಗಳಲ್ಲಿ ಶೇ 50ರಷ್ಟು ಸ್ವದೇಶಿ ಸಲಕರಣೆಗಳು ಇದ್ದು, ಅದನ್ನು ಶೇ 60ಕ್ಕೆ ವರ್ಧಿಸಲಾಗುವುದು. ಈ ಲಘುಯುದ್ಧ ವಿಮಾನಗಳಲ್ಲಿ ಹಲವು ಹೊಸ ತಂತ್ರಜ್ಞಾನಗಳನ್ನು ಸಂಯೋಜಿಸಲಾಗಿದ್ದು, ಹಿಂದೆಂದೂ ಭಾರತದಲ್ಲಿ ತಯಾರಾದ ಯಾವುದೇ ಜೆಟ್ ಯುದ್ಧವಿಮಾನಗಳಲ್ಲಿ ಈ ಪ್ರಯೋಗ ಮಾಡಿರಲಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಎಚ್ಎಎಲ್ ನಿರ್ಮಿತ ಲಘು ಯುದ್ಧ ವಿಮಾನಗಳ ಖರೀದಿಯಿಂದಾಗಿ ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಇದು ಹೊಸ ಉದ್ಯೋಗಗಳ ಸೃಷ್ಟಿಗೆ ಸಹಾಯವಾಗುತ್ತದೆ. ಇಂದು ಭದ್ರತಾ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಿದ್ದು, ಐತಿಹಾಸಿಕ ನಿರ್ಧಾರವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಈ ಯುದ್ಧವಿಮಾನಗಳಲ್ಲಿ ಅತ್ಯಾಧುನಿಕ ರಾಡಾರ್, ಕಣ್ಣಿಗೆ ಕಾಣಿಸದಷ್ಟು ದೂರದ ಗುರಿಗಳನ್ನು ಧ್ವಂಸಪಡಿಸಬಲ್ಲ ಕ್ಷಿಪಣಿಗಳು, ಎಲೆಕ್ಟ್ರಾನಿಕ್ ಯುದ್ಧತಂತ್ರ, ಆಕಾಶದಲ್ಲಿಯೇ ಇಂಧನ ಭರ್ತಿ ಸೌಲಭ್ಯ ಇರುತ್ತದೆ.
ಸಾವರಿನ್ ಗೋಲ್ಡ್ಬಾಂಡ್ ನೋಂದಣಿಗೆ ಜ.15 ಕೊನೆಯದಿನ; ಪ್ರತಿ ಗ್ರಾಂಗೆ ₹ 5104 ನಿಗದಿ
Published On - 7:16 pm, Wed, 13 January 21