
ಬೆಂಗಳೂರು, ಅಕ್ಟೋಬರ್ 31: ದೇಶದ ಬಹುನಿರೀಕ್ಷಿತ 2027ರ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶಾದ್ಯಂತ 2027ರ ಜನವರಿ 25 ರಿಂದ ಫೆಬ್ರವರಿ 28 ರವರೆಗೆ ಮನೆ ಮನೆಗೆ ತೆರಳಿ ಜನಸಂಖ್ಯೆ ಗಣತಿ ಕಾರ್ಯವನ್ನು ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಮನೆ-ಮನೆ ಸಮೀಕ್ಷೆ ಆರಂಭವಾಗುವ ಮುನ್ನ, ಸಾರ್ವಜನಿಕರಿಗಾಗಿ ಜನವರಿ 10 ರಿಂದ ಜನವರಿ 24ರವರೆಗೆ ಸ್ವಯಂ-ಗಣತಿ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಬೃಹತ್ ಗಣತಿ ಕಾರ್ಯದ ಉಲ್ಲೇಖಿತ ದಿನಾಂಕವನ್ನು 2027ರ ಮಾರ್ಚ್ 1 ರಂದು ನಿಗದಿಪಡಿಸಲಾಗಿದ್ದು, ಮಾರ್ಚ್ 1 ರಿಂದ 5 ರವರೆಗೆ ಪರಿಷ್ಕರಣಾ ಸುತ್ತು ನಡೆಯಲಿದೆ.
ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಗೋವಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹಾಗೂ ಮಣಿಪುರದಲ್ಲಿ (ಮುಂದಿನ ಆದೇಶದವರೆಗೆ) ಈ ಗಣತಿ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಲಡಾಖ್ ಹಾಗೂ ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಅತಿ ಹೆಚ್ಚು ಹಿಮಪಾತವಿರುವ ಪ್ರದೇಶಗಳನ್ನು ಈ ಬಾರಿಯ ಗಣತಿಯಿಂದ ಹೊರಗಿಡಲಾಗಿದೆ.
ಸ್ವಾತಂತ್ರ್ಯದ ಬಳಿಕ ನಡೆಯುತ್ತಿರುವ ಈ ಮಹತ್ವದ ಜನಗಣತಿಯು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿರಲಿದ್ದು, ಮೊಬೈಲ್ ಆಪ್‌ಗಳು ಮತ್ತು ಆನ್‌ಲೈನ್ ವ್ಯವಸ್ಥೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಜನಸಂಖ್ಯೆಯ ಸಾಮಾಜಿಕ, ಆರ್ಥಿಕ ಹಾಗೂರಚನಾತ್ಮಕ ವಿವರಗಳನ್ನು ಕrಕೊಳ್ಳಲು ಈ ಗಣತಿಯು ಅತ್ಯಂತ ನಿರ್ಣಾಯಕವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ