ಜೆಎಂಎಂಗೆ ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್ ರಾಜೀನಾಮೆ; ಬಿಜೆಪಿ ಸೇರಲು ಸಿದ್ಧತೆ

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ಗೆ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಇಂದು ರಾಜೀನಾಮೆ ನೀಡಿದ್ದಾರೆ. ಪಕ್ಷದ ಪ್ರಸ್ತುತ ಶೈಲಿ ಮತ್ತು ಕಾರ್ಯನೀತಿಯಿಂದ ನೊಂದಿರುವ ಕಾರಣ ನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದ್ದಾರೆ.

ಜೆಎಂಎಂಗೆ ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್ ರಾಜೀನಾಮೆ; ಬಿಜೆಪಿ ಸೇರಲು ಸಿದ್ಧತೆ
ಚಂಪೈ ಸೊರೆನ್

Updated on: Aug 28, 2024 | 10:35 PM

ರಾಂಚಿ: ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿಯಾದ ಬೆನ್ನಲ್ಲೇ ಇಂದು ಮಾಜಿ ಮುಖ್ಯಮಂತ್ರಿ ಚಂಪೈ ಸೋರೆನ್ ಜೆಎಂಎಂಗೆ ರಾಜೀನಾಮೆ ನೀಡಿದ್ದಾರೆ. ಅವರು ಆಗಸ್ಟ್ 30ರಂದು ಬಿಜೆಪಿಯನ್ನು ಸೇರಲಿದ್ದಾರೆ. ಜಾರ್ಖಂಡ್‌ನ ಆದಿವಾಸಿಗಳು, ಮೂಲನಿವಾಸಿಗಳು, ದಲಿತರು, ಹಿಂದುಳಿದವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಅಭಿವೃದ್ಧಿಗೆ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೋರೆನ್ ಅವರು ಪಕ್ಷದ ಈಗಿನ ಕಾರ್ಯವೈಖರಿ ಮತ್ತು ನೀತಿಗಳಿಂದ ನೊಂದಿರುವ ಕಾರಣ ನಾನು ಇಂತಹ ಕ್ರಮಕ್ಕೆ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಪಕ್ಷದ ವರಿಷ್ಠ ಶಿಬು ಸೊರೆನ್‌ಗೆ ಬರೆದ ರಾಜೀನಾಮೆ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಅವರು, ಜೆಎಂಎಂ ಪಕ್ಷದ ಸ್ಥಿತಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಶಿಬು ಸೊರೆನ್ ಅವರ ಮಾರ್ಗದರ್ಶನದಲ್ಲಿ ನಾನು ಮತ್ತು ಇತರ ಪಕ್ಷದ ಕಾರ್ಯಕರ್ತರು ಹೋರಾಡಿದ ಆದರ್ಶಗಳಿಂದ ಜೆಎಂಎಂ ದೂರ ಸರಿದಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Jharkhand Politics: ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಆ.30ರಂದು ಬಿಜೆಪಿಗೆ ಸೇರ್ಪಡೆ

ಶೀಘ್ರದಲ್ಲೇ ಬಿಜೆಪಿ ಸೇರಲಿರುವ ಸೋರೆನ್, “ಇಂದು ನಾನು ಜಾರ್ಖಂಡ್ ಮುಕ್ತಿ ಮೋರ್ಚಾದ ಪ್ರಾಥಮಿಕ ಸದಸ್ಯತ್ವ ಮತ್ತು ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ. ಜಾರ್ಖಂಡ್‌ನ ಆದಿವಾಸಿಗಳು, ದಲಿತರು, ಹಿಂದುಳಿದ ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಮೇಲೆ ನನ್ನ ಹೋರಾಟ ಮುಂದುವರಿಯುತ್ತದೆ” ಎಂದು ಹೇಳಿದರು.


ಒಂದು ಕಾಲದಲ್ಲಿ ನನ್ನ ಕುಟುಂಬದಂತಿದ್ದ ಪಕ್ಷವು ದಾರಿ ತಪ್ಪಿದ್ದು, ನೋವಿನ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದೆ ಎಂದು ವಿಷಾದಿಸಿದರು. ಶಿಬು ಸೋರೆನ್ ಅವರ ಅನಾರೋಗ್ಯದ ಕಾರಣ ಅವರನ್ನು ಸಕ್ರಿಯ ರಾಜಕೀಯದಿಂದ ದೂರವಿಟ್ಟಿರುವುದರಿಂದ ಅವರ ಕಳವಳವನ್ನು ವ್ಯಕ್ತಪಡಿಸಲು ಪಕ್ಷದೊಳಗೆ ಯಾವುದೇ ವೇದಿಕೆ ಇಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಹೆಣ್ಣುಮಕ್ಕಳ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಟ್ಯೂಷನ್ ಶಿಕ್ಷಕನ ಬೆತ್ತಲೆ ಮೆರವಣಿಗೆ!

ನಿನ್ನೆಯಷ್ಟೇ ಚಂಪೈ ಸೊರೆನ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರುವ ನಿರ್ಧಾರವನ್ನು ಜಾರ್ಖಂಡ್‌ನ ಹಿತಾಸಕ್ತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಬಿಜೆಪಿ ಸೇರುವ ನನ್ನ ನಿರ್ಧಾರ ಜಾರ್ಖಂಡ್‌ನ ಹಿತಾಸಕ್ತಿಗಾಗಿ… ನಾನು ಹೋರಾಟಕ್ಕೆ ಒಗ್ಗಿಕೊಂಡಿದ್ದೇನೆ ಎಂದು ಸೋರೆನ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ