ಮೋದಿ ಸಂಪುಟದಲ್ಲಿ ಯಾವುದೇ ಸ್ಥಾನ ಕೇಳುವುದಿಲ್ಲ ಎಂದ ಚಂದ್ರಬಾಬು ನಾಯ್ಡು, ಆದರೆ….
ಪ್ರಧಾನಿ ಮೋದಿ ಅವರಿಗೆ ಬೆಂಬಲ ನೀಡಿದ ಚಂದ್ರಬಾಬು ನಾಯ್ಡು, ಮೋದಿ ಕ್ಯಾಬಿನೆಟ್ನಲ್ಲಿ ಯಾವುದೇ ಸ್ಥಾನ ಕೇಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ತಮ್ಮ ರಾಜ್ಯಕ್ಕೆ ಏನು ಬೇಕು ಎಂಬುದನ್ನು ಮುಕ್ತವಾಗಿ ಈ ಸಭೆಯಲ್ಲಿ ಕೇಳಿದ್ದಾರೆ. ಅಷ್ಟಕ್ಕೂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯಕ್ಕೆ ಏನು ಕೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ನೆನ್ನೆ (ಜೂ.8) ನಡೆದ ಎನ್ಡಿಎ ಸಭೆಯಲ್ಲಿ ಸಂಸದೀಯ ನಾಯಕನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಬಿಜೆಪಿಯ ಮಿತ್ರಪಕ್ಷಗಳು ನಮ್ಮ ಬೆಂಬಲ ಮೋದಿಗೆ ಎಂದು ಹೇಳಿದೆ. ಸಭೆಯಲ್ಲಿ ಎನ್ಡಿಎಗೆ ಬೆಂಬಲ ನೀಡಿದ ಮಿತ್ರಪಕ್ಷಗಳ ನಾಯಕರು ಸೇರಿದರು. ಸಭೆಯಲ್ಲಿ ಮಿತ್ರಪಕ್ಷದ ಸಂಸದರು ಬಂದು ತಮ್ಮ ಬೆಂಬಲ ಹಾಗೂ ಯಾಕೆ ಮೋದಿಗೆ ಬೆಂಬಲ ನೀಡುತ್ತಿದ್ದೇವೆ ಎಂಬ ಬಗ್ಗೆ ಮಾತನಾಡಿದ್ದಾರೆ. ಈ ಪೈಕಿ ನಿತೀಶ್ ಹಾಗೂ ಚಂದ್ರಬಾಬು ನಾಯ್ಡು ಕೂಡ ಮಾತನಾಡಿದ್ದಾರೆ. ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು ಮಾತನಾಡಿ, ಮೋದಿ ಕ್ಯಾಬಿನೆಟ್ನಲ್ಲಿ ಯಾವುದೇ ಸ್ಥಾನಬೇಡ, ಯಾವುದೇ ಬೇಡಿಕೆಯನ್ನು ಇಡುವುದಿಲ್ಲ, ಆದರೆ ನಮ್ಮ ರಾಜ್ಯಕ್ಕೆ ಕೇಂದ್ರ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಅಭಿವೃದ್ಧಿಯ ಬಗ್ಗೆ ಆಸಕ್ತಿ ಹೊಂದಿರುವ ನಾಯ್ಡು ಅವರು ಆಂಧ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಕೇಂದ್ರದಲ್ಲಿ ಮೋದಿ ಅವರು ಯಾವ ಸಚಿವ ಸ್ಥಾನ ನೀಡಿದರು ನಾವು ಖುಷಿಯಿಂದ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಈಗಾಗಲೇ ಜೆಡಿಯೂ ಮತ್ತು ಟಿಡಿಪಿ ಪಕ್ಷಕ್ಕೆ ತಲಾ 3-3 ಸಚಿವ ಸ್ಥಾನ ನೀಡಬಹುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಎರಡು ಪಕ್ಷಕ್ಕೂ ಕೇಂದ್ರ ಅಧಿಕಾರಕ್ಕಿಂತ ತನ್ನ ರಾಜ್ಯದ ಅಭಿವೃದ್ಧಿಯಾಗುವುದು ಮುಖ್ಯ ಎಂದು ಹೇಳಲಾಗಿದೆ. ಈ ಇಬ್ಬರು ನಾಯಕರಿಗೆ ಬಿಹಾರ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿ ಹೆಚ್ಚು ಮುಖ್ಯವಾಗಿದೆ.
ಇದನ್ನೂ ಓದಿ: ನಿತೀಶ್ಗೆ ಇಂಡಿಯಾ ಬಣದಿಂದ ಬಂದಿತ್ತು ಪ್ರಧಾನಿ ಆಫರ್, ಆದರೆ NDA, ಹುದ್ದೆಗಿಂತ ಗೌರವ ನೀಡಿದೆ: ಕೆಸಿ ತ್ಯಾಗಿ
ಇನ್ನು ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು, ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳು ಸಮಾನಾಂತರವಾಗಿ ಸಾಗಬೇಕು. ಸಮಾಜದ ಎಲ್ಲಾ ಸ್ತರಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡಬೇಕಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಆಂಧ್ರಕ್ಕೆ ಕೇಂದ್ರದ ಸಹಾಯಬೇಕಾಗಿದೆ. ತೆಲಂಗಾಣದಿಂದ ಕಳೆದುಕೊಂಡಿದ್ದ ಹೈದರಾಬಾದ್‌ಗೆ ಬದಲಾಗಿ ಅಮರಾವತಿಯಲ್ಲಿ ಹೊಸ ರಾಜಧಾನಿ ನಿರ್ಮಾಣವಾಗಬೇಕಿದೆ. ಮುಂದಿನ ದಿನಗಳಲ್ಲಿ ಅದಕ್ಕಾಗಿ ಕೇಂದ್ರ ಸಹಾಯಬೇಕಾಗಿದೆ. ಪೋಲವರನ್ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಮತ್ತು ಸಾಂಪ್ರದಾಯಿಕ ಎದುರಾಳಿ ಜಗನ್ ಮೋಹನ್ ರೆಡ್ಡಿಯಿಂದ ಹಿಮ್ಮೆಟ್ಟಿಸಲು ಬಿಜೆಪಿ ಮತ್ತು ಕೇಂದ್ರ ಅಗತ್ಯ ಇದೆ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ