ಕರ್ನಾಟಕದಿಂದ ಚಾರ್​​ ಧಾಮ್​​​ ಯಾತ್ರೆಗೆ ಹೋಗುವವರು ಈಗ ಪೂಜಾ ಫೀ ಎಷ್ಟು ಕೊಡಬೇಕು ಗೊತ್ತಾ?

ಚಾರ್​​ ಧಾಮ್​​​ ಯಾತ್ರೆ 2026ರ ನಿಮಿತ್ತ ಬದ್ರಿನಾಥ್-ಕೇದಾರನಾಥ್ ದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ಆರತಿಗಳ ಶುಲ್ಕವನ್ನು ಬಿಕೆಟಿಸಿ ಹೆಚ್ಚಿಸಿದೆ. ಆದಾಗ್ಯೂ, ಸಾಮಾನ್ಯ ಭಕ್ತರಿಗೆ ದರ್ಶನ ಉಚಿತವಾಗಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ದರ ಹೆಚ್ಚಳವು ದೇಗುಲಗಳ ನಿರ್ವಹಣೆ ಮತ್ತು ಭಕ್ತರ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ಗುರಿ ಹೊಂದಿದೆ. ವಿಶೇಷ ಪೂಜೆಗಳಲ್ಲಿ ಭಾಗವಹಿಸುವ ಭಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಿಕೊಂಡು ನಿಗದಿತ ಶುಲ್ಕ ಪಾವತಿಸಬೇಕಿದೆ.

ಕರ್ನಾಟಕದಿಂದ ಚಾರ್​​ ಧಾಮ್​​​ ಯಾತ್ರೆಗೆ ಹೋಗುವವರು ಈಗ ಪೂಜಾ ಫೀ ಎಷ್ಟು ಕೊಡಬೇಕು ಗೊತ್ತಾ?
ಕೇದಾರನಾಥ್​ ಮತ್ತು ಬದ್ರಿನಾಥ್​​ ದೇಗುಲ
Image Credit source: Tv9 Network

Updated on: Mar 20, 2026 | 3:08 PM

ವಿಶ್ವಪ್ರಸಿದ್ಧ ಚಾರ್​​ ಧಾಮ್​ ಯಾತ್ರೆಗೂ ಮುನ್ನ ಬದ್ರಿನಾಥ್​​-ಕೇದಾರನಾಥ್​ ಟೆಂಪಲ್​​ ಕಮಿಟಿ (ಬಿಕೆಟಿಸಿ)ಯಿಂದ ಭಕ್ತರಿಗೆ ಮಹತ್ವದ ಮಾಹಿತಿ ನೀಡಲಾಗಿದೆ. ಉಭಯ ದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ಆರತಿಗಳ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಬಿಕೆಟಿಸಿ ಸಭೆಯಲ್ಲಿ ಈ ನಿರ್ಧಾರವನ್ನು ಏಕಮತದಿಂದ ಅಂಗೀಕರಿಸಲಾಗಿದೆ. ಆದರೆ ಸಾಮಾನ್ಯ ದರ್ಶನ ಹಿಂದಿನಂತೆ ಉಚಿತವಾಗಿಯೇ ಮುಂದುವರಿಯಲಿದೆ. ಬಿಕೆಟಿಸಿ ನಿರ್ವಹಣೆಯಡಿ ಇರುವ ಈ ಎರಡೂ ಧಾಮಗಳಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ವಿವಿಧ ಪೂಜೆಗಳು ಮತ್ತು ಆರತಿಗಳು ನಡೆಯುತ್ತವೆ. ಮಹಾಭಿಷೇಕ, ಅಭಿಷೇಕ, ಭೋಗ, ಅಖಂಡ ಜ್ಯೋತಿ ಸೇರಿದಂತೆ ಅನೇಕ ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳುತ್ತವೆ. ಈ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಭಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕು ಹಾಗೂ ನಿಗದಿತ ಶುಲ್ಕ ಪಾವತಿಸಬೇಕಿದೆ. ಈಗಿನ ಹೊಸ ನಿರ್ಧಾರದಂತೆ ಈ ಶುಲ್ಕಗಳು ಹೆಚ್ಚಳಗೊಂಡಿವೆ.

ಬದ್ರಿನಾಥ ಧಾಮದ ಹೊಸ ದರಗಳು
ಸೇವೆಯ ವಿವರ ಹಿಂದನ ದರ (ರೂ. ಗಳಲ್ಲಿ) ಹೊಸ ದರ (ರೂ. ಗಳಲ್ಲಿ)
ಶ್ರೀಮದ್ಭಾಗವತ ಕಥೆ 51000 100000
ವೇದ ಮತ್ತು ಗೀತಾ ಪಾಠ 2500 3100
ಕರ್ಪೂರ ಆರತಿ 1951 3000
ಬೆಳ್ಳಿ ಆರತಿ 2731 5100
ಮಹಾಭಿಷೇಕ 4700 5500
ಅಭಿಷೇಕ 4500 5300
ಅಖಂಡ ಜ್ಯೋತಿ (ವಾರ್ಷಿಕ) 4951 6000
ಸ್ವರ್ಣ ಆರತಿ 5202 6100
ಖೀರ್ ಭೋಗ 1001 2100
ಬಾಲ ಭೋಗ 7301 10000
ಮಹಾಭೋಗ 32501 45000

ಇದನ್ನೂ ಓದಿ: ದೈವಾರಾಧನೆಯಲ್ಲಿ ‘ಮಡಿ’ ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!

ಕೆದಾರನಾಥ ಧಾಮದ ಹೊಸ ದರಗಳು
ಸೇವೆಯ ವಿವರ ಹಿಂದನ ದರ (ರೂ. ಗಳಲ್ಲಿ) ಹೊಸ ದರ (ರೂ. ಗಳಲ್ಲಿ)
ಲಘು ರುದ್ರಾಭಿಷೇಕ 6100 7100
ಮಹಾಭಿಷೇಕ 9500 11500
ರುದ್ರಾಭಿಷೇಕ 7200 7500
ದಿನಪೂರ್ತಿ ಪೂಜೆ 28600 51000
ಶಿವ ಸಹಸ್ರನಾಮ 2000 2500
ಅಖಂಡ ಜ್ಯೋತಿ 28600 35000
ಕರ್ಪೂರ ಆರತಿ 1900 2400
ಬಾಲ ಭೋಗ 1000 1500

ಸಾಮಾನ್ಯ ದರ್ಶನ ಉಚಿತ

ಬಿಕೆಟಿಸಿ ಪ್ರಕಾರ, ಸಾಮಾನ್ಯ ಭಕ್ತರಿಗೆ ದರ್ಶನ ವ್ಯವಸ್ಥೆ ಹಳೆಯದಂತೆ ಉಚಿತವಾಗಿಯೇ ಇರುತ್ತದೆ. ಕೇವಲ ವಿಶೇಷ ಪೂಜೆ, ಆರತಿ ಮತ್ತು ವಿಧಿಗಳಿಗಾಗಿ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಸಮಿತಿ ಅಧ್ಯಕ್ಷ ಹೆಮಂತ್ ದ್ವಿವೇದಿ ಹೇಳುವಂತೆ, ಪ್ರತಿವರ್ಷದಂತೆ ಈ ವರ್ಷವೂ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಚಾರಧಾಮ ಯಾತ್ರೆಗೂ ಮುನ್ನ ಕಮಿಟಿಯ ಈ ನಿರ್ಧಾರ ಪ್ರಾಮುಖ್ಯತೆ ಪಡೆದಿದೆ. ವಿಶೇಷ ಪೂಜೆಗಳಲ್ಲಿ ಭಾಗವಹಿಸುವ ಭಕ್ತರಿಗೆ ಈ ದರ ಏರಿಕೆಯ ಪರಿಣಾಮ ಬೀಳಬಹುದು. ಆದರೆ ಸಮಿತಿಯ ಪ್ರಕಾರ, ಈ ಹೆಚ್ಚುವರಿ ಶುಲ್ಕದಿಂದ ದೇವಸ್ಥಾನಗಳ ವ್ಯವಸ್ಥೆ ಮತ್ತು ಭಕ್ತರಿಗೆ ಸೌಲಭ್ಯಗಳು ಮತ್ತಷ್ಟು ಸುಧಾರಿಸಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:07 pm, Fri, 20 March 26

Follow Us