ಚೆನ್ನೈ: ಇಷ್ಟಪಟ್ಟ ಹುಡುಗಿ ಸಿಗಲಿಲ್ಲವೆಂದು ಹುಡುಗರು ಏನೇನೋ ಕಸರತ್ತುಗಳನ್ನು ಮಾಡಿದ ಉದಾಹರಣೆಗಳಿವೆ. ಕೆಲವೊಮ್ಮೆ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ಆದರೆ, ತಮಿಳುನಾಡಿನಲ್ಲಿ ವಿಚಿತ್ರವಾದ ಮತ್ತು ಆಘಾತಕಾರಿ ಘಟನೆಯೊಂದು (Shocking News) ನಡೆದಿದ್ದು, 19 ವರ್ಷದ ಯುವಕನೊಬ್ಬ 15 ವರ್ಷದ ಹುಡುಗಿಗೆ ಪ್ರಪೋಸ್ ಮಾಡಿದ್ದ. ಆದರೆ, ಆಕೆ ಆತನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಟವರ್ (Electricity Tower) ಹತ್ತಿ ಕುಳಿತಿದ್ದಾನೆ.
ಈ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ 19 ವರ್ಷದ ಯುವಕನೊಬ್ಬ ತಾಂಬರಂ ಸ್ಯಾನಿಟೋರಿಯಂ ಪ್ರದೇಶದಲ್ಲಿನ ಹೈ-ಟೆನ್ಷನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿರುವ ಆತ ರೈಲು ಸೇವೆಗಳನ್ನು ಅಸ್ತವ್ಯಸ್ತಗೊಳಿಸಿದ್ದಾನೆ. ತನ್ನ 15 ವರ್ಷದ ಪ್ರೇಯಸಿ ಮದುವೆಯಾಗಲು ಒಪ್ಪದ ಕಾರಣದಿಂದ ಆಕೆಯ ಮನವೊಲಿಸಲು ಆತ ಹೀಗೆ ಮಾಡಿದ್ದಾನೆ.
ಮೂಲಗಳ ಪ್ರಕಾರ, ಕೃಷ್ಣ ಎಂಬ ಈ ಯುವಕ ಕ್ರೋಂಪೇಟೆಯ ರಾಧಾ ನಗರದಲ್ಲಿ ವಾಸಿಸುತ್ತಿದ್ದಾನೆ. ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದ ಆತ ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಆಕೆಯ ಮನೆಗೆ ಪೇಂಟಿಂಗ್ ಮಾಡಲು ಹೋದಾಗ ಆಕೆಯ ಪರಿಚಯವಾಗಿ, ಪ್ರೀತಿ ಬೆಳೆದಿತ್ತು ಎನ್ನಲಾಗಿದೆ.
ಇದನ್ನೂ ಓದಿ: Viral News: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ
ಪೊಲೀಸರ ಪ್ರಕಾರ, ಆತನೊಂದಿಗೆ ಓಡಾಡಿಕೊಂಡಿದ್ದ ಆಕೆ ಆತ ಮದುವೆಯಾಗಲು ಪ್ರಪೋಸ್ ಮಾಡಿದಾಗ ನಿರಾಕರಿಸಿದ್ದಳು. ಇದರಿಂದ ಆಕೆಯ ಮನವೊಲಿಸುವ ಪ್ರಯತ್ನಗಳೆಲ್ಲ ವಿಫಲವಾದಾಗ, 80 ಅಡಿ ಎತ್ತರದ ದುರ್ಗಾನಗರದ ವಿದ್ಯುತ್ ಟವರ್ ಮೇಲೆ ಹತ್ತಿ ಆತ ಪ್ರತಿಭಟನೆ ನಡೆಸಿದ್ದಾನೆ. ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ವಿಷಯ ತಿಳಿದ ಕೂಡಲೆ ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ರಕ್ಷಣಾ ತಂಡವು ಹದಿಹರೆಯದವರೊಂದಿಗೆ ಶಾಂತಿ ಮಾತುಕತೆ ನಡೆಸಲು ಆ ಸ್ಥಳಕ್ಕೆ ಬಂದಿದ್ದಾರೆ. ಕೂಡಲೆ ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿ ವಿದ್ಯುತ್ ಅನ್ನು ಸ್ಥಗಿತಗೊಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: Viral News: ಬಾಲಕನನ್ನು ಮೊಸಳೆ ನುಂಗಿದೆ ಎಂದುಕೊಂಡ ಜನ; ಹುಡುಗನ ಕಾಪಾಡಲು ಮಾಡಿದ ಪ್ಲಾನ್ ಏನು ಗೊತ್ತಾ?
ಪೊಲೀಸರು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿದ ನಂತರವೂ ಆ ಯುವಕ ಟವರ್ ಮೇಲಿಂದ ಕೆಳಗಿಳಿಯಲು ನಿರಾಕರಿಸಿದ್ದಾನೆ. ನಂತರ ಆ ಹುಡುಗಿಯನ್ನು ಆ ಟವರ್ ಕೆಳಗ ಕರೆದುಕೊಂಡು ಬಂದು ನಿಲ್ಲಿಸಲಾಗಿದ್ದು, ಆಕೆ ಅವನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಅವನು ಕೆಳಗಿಳಿದಿದ್ದಾನೆ.
ಆ ವ್ಯಕ್ತಿ ಕೆಳಗೆ ಇಳಿದ ಕೂಡಲೇ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪೊಲೀಸರು ಆತನನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 353, 447, ಮತ್ತು 506 (1) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.