ಛತ್ತೀಸ್‌ಗಢ: ಕಾಂಗ್ರೆಸ್ ಅಭ್ಯರ್ಥಿ ಗುರುರುದ್ರ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ
ಛತ್ತೀಸ್ಗಢದ ನವಗಢ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರುರುದ್ರ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿ ಹಿಂದಿರುಗುತ್ತಿದ್ದಾಗ ಝಾಲ್ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದು, ವಾಹನದ ಗಾಜುಗಳು ಒಡೆದಿವೆ. ಗುರು ಅವರು ಹಾನಿಗೊಳಗಾದ ವಾಹನದಲ್ಲೇ ನವಗಢ ತಲುಪಿದ್ದು, ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಛತ್ತೀಸ್ಗಢದ ನವಗಢ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರುರುದ್ರ ಕುಮಾರ್(GuruRudra Kumar) ಅವರ ಬೆಂಗಾವಲು ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿ ಹಿಂದಿರುಗುತ್ತಿದ್ದಾಗ ಝಾಲ್ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದು, ವಾಹನದ ಗಾಜುಗಳು ಒಡೆದಿವೆ. ಗುರು ಅವರು ಹಾನಿಗೊಳಗಾದ ವಾಹನದಲ್ಲೇ ನವಗಢ ತಲುಪಿದ್ದು, ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಝಲ್ ಗ್ರಾಮದಲ್ಲಿ ಕಾರಿನ ಮೇಲೆ ಸಮಾಜ ವಿರೋಧಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಗುರು ರುದ್ರ ಬೆಂಬಲಿಗ ಆಶಿಶ್ ಜೈನ್ ಆರೋಪಿಸಿದ್ದಾರೆ. ಗುರು ರುದ್ರ ಕುಮಾರ್ ಅವರು ಪ್ರಸ್ತುತ ಅಹಿವಾರದಿಂದ ಕಾಂಗ್ರೆಸ್ ಶಾಸಕರಾಗಿದ್ದಾರೆ ಮತ್ತು PHE ಸಚಿವರಾಗಿದ್ದಾರೆ. ಈ ಬಾರಿ ಅವರು ಬೆಮೆತಾರಾ ಜಿಲ್ಲೆಯ ನವಗಢದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ದಾಳಿಗೆ ಒಳಗಾದ ಕುಮಾರ್ ಅವರ ವಾಹನದ ವೀಡಿಯೊದಲ್ಲಿ ಕಿಟಕಿಯ ಗಾಜುಗಳಲ್ಲಿ ಬಿರುಕುಗಳು ಗೋಚರಿಸುತ್ತವೆ. ಛತ್ತೀಸ್‌ಗಢ ವಿಧಾನಸಭೆಯ 20 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದ್ದು, ಉಳಿದ 70 ಸ್ಥಾನಗಳಿಗೆ ನವೆಂಬರ್ 17 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಮತ್ತಷ್ಟು ಓದಿ:Chhattisgarh Mizoram Elections 2023: ಇಂದು ಛತ್ತೀಸ್‌ಗಢ, ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ, ಮತದಾನ ಆರಂಭ, ಬಿಗಿ ಭದ್ರತೆ
2018 ರ ಚುನಾವಣೆಯಲ್ಲಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ 90 ರಲ್ಲಿ 68 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತು. ಪಕ್ಷವು ಶೇ.43.9ರಷ್ಟು ಮತಗಳನ್ನು ಪಡೆದಿತ್ತು. ಬಿಜೆಪಿ 15 ಸ್ಥಾನಗಳನ್ನು ಗೆದ್ದು ಶೇ.33.6 ಮತಗಳನ್ನು ಗಳಿಸಿತ್ತು.
ವರದಿಗಳ ಪ್ರಕಾರ ಕೆಲವು ಭದ್ರತಾ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಗುರು ರುದ್ರಕುಮಾರ್ ಸುರಕ್ಷಿತವಾಗಿದ್ದಾರೆ. ಗಾಯಾಳುಗಳಿಗೆ ನವಗಢದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
#WATCH | Chhattisgarh: Chhattisgarh Minister & Congress Candidate Guru Rudra Kumar’s convoy reportedly attacked with stones in Bemetara, on Wednesday late. pic.twitter.com/e7DxPpKUX4
— ANI (@ANI) November 8, 2023
ಶಾಂತಿ ಕಾಪಾಡುವಂತೆ ಕಾಂಗ್ರೆಸ್ ಅಭ್ಯರ್ಥಿ ಗುರು ರುದ್ರಕುಮಾರ್ ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ. ಗುರು ರುದ್ರ ಕುಮಾರ್ ಅವರು ನವಾಗರ್ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಮತ್ತು ಭೂಪೇಶ್ ಬಘೇಲ್ ಅವರ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 am, Thu, 9 November 23