ಅರವಿಂದ್ ಕ್ರೇಜಿವಾಲ್ ಮುಖ್ಯ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರ ಆರೋಪ
ಅರವಿಂದ್ ಕ್ರೇಜಿವಾಲ್ ಅವರು ಮುಖ್ಯ ಕಾರ್ಯದರ್ಶಿಯ ಮೇಲೆ ಭ್ರಷ್ಟಾಚಾರ ಆರೋಪ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ವಿರುದ್ಧ ಭ್ರಷ್ಟಾಚಾರ ದೂರು ಬಂದಿದ್ದು. ಈ ದೂರನ್ನು ವಿಜಿಲೆನ್ಸ್ ಸಚಿವ ಅತಿಶಿ ಅವರಿಗೆ ರವಾನಿಸಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ (Arvind Kejriwal) ಅವರ ಸರ್ಕಾರ ವಿರುದ್ಧ ಒಂದಲ್ಲ ಒಂದು ಆರೋಪಗಳು ಕೇಳಿರು ಬರುತ್ತಿದೆ. ಈ ಹಿಂದೆ ಕ್ರೇಜಿವಾಲ್ ಸಂಪುಟದ ಇಬ್ಬರು ಸಚಿವರ ವಿರುದ್ಧ ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಕೆಲವೊಂದು ಆರೋಪಗಳು ಕೇಳಿ ಬಂದಿದೆ. ಇದೀಗ ಅರವಿಂದ್ ಕ್ರೇಜಿವಾಲ್ ಅವರು ಮುಖ್ಯ ಕಾರ್ಯದರ್ಶಿಯ ಮೇಲೆ ಭ್ರಷ್ಟಾಚಾರ ಆರೋಪ (Delhi Chief Secretary) ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ (Naresh Kumar) ವಿರುದ್ಧ ಭ್ರಷ್ಟಾಚಾರ ದೂರು ಬಂದಿದ್ದು. ಈ ದೂರನ್ನು ವಿಜಿಲೆನ್ಸ್ ಸಚಿವ ಅತಿಶಿ ಅವರಿಗೆ ರವಾನಿಸಲಾಗಿದೆ.
ದೂರಿನ ಪ್ರಕಾರ, ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ತಮ್ಮ ಮಗನಿಗೆ ಉದ್ಯೋಗ ನೀಡುವ ಸಲುವಾಗಿ ಕಂಪನಿಯೊಂದಕ್ಕೆ ₹ 315 ಕೋಟಿ ಭೂಸ್ವಾಧೀನ ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ದೂರು ನೀಡಿರುವವರ ಹೆಸರನ್ನು ರಹಸ್ಯವಾಗಿ ಇಡಲಾಗಿದೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ವಿಸ್ತೃತ ವರದಿ ಕೇಳಿದೆ.
ಇನ್ನು ಈ ಆರೋಪವನ್ನು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ನಿರಾಕರಿಸಿದ್ದಾರೆ. ಮಗನಿಗೆ ಉದ್ಯೋಗ ನೀಡುವ ಕಂಪನಿಯ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ, ಇದು ಸತ್ಯ ದೂರವಾದ ಆರೋಪ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 201 ರಲ್ಲಿ ಖರೀದಿಸಿದ ನಗರದ ನೈಋತ್ಯದಲ್ಲಿ 19 ಎಕರೆ ಜಮೀನನ್ನು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣವನ್ನು ಅವರೇ ತನಿಖೆ ನಡೆಸಿದ್ದರು. ಈ ಭೂಮಿಯ ಬೆಲೆ ₹ 41.52 ಕೋಟಿ ಎಂದು ಜಿಲ್ಲಾಡಳಿತ ನಿರ್ಧರಿಸಿತ್ತು. ಇದನ್ನು ಅಂದಿನ ನೈರುತ್ಯ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಹೇಮಂತ್ ಕುಮಾರ್ ₹ 353.79 ಕೋಟಿಗೆ ಏರಿಸಿದ್ದಾರೆ. ಆದರೆ ಈ ತನಿಖೆಯಲ್ಲಿ ದಾರಿ ತಪ್ಪುವಂತೆ ಮಾಡುತ್ತಿದ್ದಾರೆ ಎಂದು ಹೇಮಂತ್ ಕುಮಾರ್ ಅವರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಹುದ್ದೆಯಿಂದ ವಜಾ ಮಾಡಲಾಯಿತು.
ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ಇಡಿ ಸಮನ್ಸ್, ವಿಚಾರಣೆಗೆ ಬರುವುದಿಲ್ಲ ಎಂದ ಕ್ರೇಜಿವಾಲ್
ಇದೀಗ ಇಂತಹದೇ ಪ್ರಕರಣದಲ್ಲಿ ದೆಹಲಿಯ ಮುಖ್ಯಕಾರ್ಯದರ್ಶಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ದೂರುದಾರರು ಹೇಳಿರುವಂತೆ ನರೇಶ್ ಕುಮಾರ್ ಭೂಮಾಲೀಕರಲ್ಲಿ ಒಬ್ಬರಿಗೆ ಎನ್‌ಎಚ್‌ಎಐ ಪಾವತಿಸಲು ಆದೇಶಿಸಿ ಹೆಚ್ಚಿನ ಬೆಲೆ ಪಡೆದುಕೊಳ್ಳುವ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೂರುದಾರರು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ