Surajkund Chintan Shivir: ಪ್ರತಿ ರಾಜ್ಯವು ಪರಸ್ಪರ ಸ್ಫೂರ್ತಿ ಪಡೆಯಬೇಕು, ಒಗ್ಗಟ್ಟಾಗಿ ಕೆಲಸ ಮಾಡಬೇಕು: ನರೇಂದ್ರ ಮೋದಿ

ದೇಶದ ಒಳಿತಿಗಾಗಿ ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಗೃಹ ಸಚಿವರ ಚಿಂತನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

Surajkund Chintan Shivir: ಪ್ರತಿ ರಾಜ್ಯವು ಪರಸ್ಪರ ಸ್ಫೂರ್ತಿ ಪಡೆಯಬೇಕು, ಒಗ್ಗಟ್ಟಾಗಿ ಕೆಲಸ ಮಾಡಬೇಕು: ನರೇಂದ್ರ ಮೋದಿ
Narendra Modi Amit Shah
Follow us
TV9 Web
| Updated By: ನಯನಾ ರಾಜೀವ್

Updated on:Oct 28, 2022 | 11:18 AM

ದೇಶದ ಒಳಿತಿಗಾಗಿ ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ  ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಗೃಹ ಸಚಿವರ ಚಿಂತನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಇದು ದೇಶವಾಸಿಗಳ ಬಗ್ಗೆ ರಾಜ್ಯಗಳ ಜವಾಬ್ದಾರಿಯಾಗಿದೆ. ಪ್ರತಿಯೊಂದು ರಾಜ್ಯವೂ ಪರಸ್ಪರ ಕಲಿಯಬೇಕು, ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ವಿವಿಧ ಸವಾಲುಗಳ ನಡುವೆ ಹಬ್ಬಗಳ ಸಂದರ್ಭದಲ್ಲಿ ದೇಶದ ಏಕತೆಯನ್ನು ಬಲಪಡಿಸುವುದು ನಿಮ್ಮ ಸನ್ನದ್ಧತೆಯ ಪ್ರತಿಬಿಂಬವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿಯಾಗಿದೆ ಆದರೆ ಇದು ದೇಶದ ಏಕತೆ ಹಾಗೂ ಸಮಗ್ರತೆಗೆ ಸಂಬಂಧಿಸಿದೆ ಎಂದರು.

ಗೃಹ ಸಚಿವರ ಈ ಚಿಂತನಾ ಶಿಬಿರವು ಸಹಕಾರಿ ಫೆಡರಲಿಸಂಗೆ ಉತ್ತಮ ಉದಾಹರಣೆಯಾಗಿದೆ. ರಾಜ್ಯಗಳು ಪರಸ್ಪರ ಕಲಿಯಬಹುದು, ಪರಸ್ಪರ ಸ್ಫೂರ್ತಿ ಪಡೆಯಬಹುದು ಮತ್ತು ದೇಶದ ಒಳಿತಿಗಾಗಿ ಕೆಲಸ ಮಾಡಬಹುದು, ಇದು ಸಂವಿಧಾನದ ಆಶಯವಾಗಿದೆ ಹಾಗೂ ಇದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಮುಂಬರುವ 25 ವರ್ಷಗಳು ದೇಶದಲ್ಲಿ ಅಮೃತ ಪೀಳಿಗೆಯನ್ನು ನಿರ್ಮಿಸಲಿವೆ, ಪಂಚ ಪ್ರಾಣದ ಸಂಕಲ್ಪಗಳನ್ನು ಮೈಗೂಡಿಸಿಕೊಂಡು ಈ ಅಮೃತ ಪೀಳಿಗೆಯನ್ನು ರಚಿಸಲಾಗುವುದು.

ಸಂವಿಧಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿಯಾಗಿದ್ದರೂ, ದೇಶದ ಏಕತೆ-ಸಮಗ್ರತೆಯೊಂದಿಗೆ ಸಮಾನವಾದ ಸಂಪರ್ಕ ಹೊಂದಿದ್ದರೂ, ಪ್ರತಿಯೊಂದು ರಾಜ್ಯಗಳು ಪರಸ್ಪರ ಕಲಿಯಬೇಕು, ಪರಸ್ಪರ ಸ್ಫೂರ್ತಿ ಪಡೆಯಬೇಕು ಎಂದು ನುಡಿದರು.

ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ, ಈ ಪಂಚಪ್ರಾಣಗಳ ಮಹತ್ವವನ್ನು ಅರ್ಥಮಾಡಿಕೊಳ್ಳಿ, ಇದನ್ನು ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ ಸಾಬೀತುಪಡಿಸಬಹುದು. -ಅಭಿವೃದ್ಧಿಹೊಂದಿದ ಭಾರತವನ್ನು ನಿರ್ಮಿಸುವುದು -ಗುಲಾಮಗಿರಿಯ ಪ್ರತಿಯೊಂದು ಚಿಂತನೆಯಿಂದ ಮುಕ್ತಿ -ಪರಂಪರೆಯ ಹೆಮ್ಮೆ -ಏಕತೆ ಮತ್ತು ಒಗ್ಗಟ್ಟು -ನಾಗರಿಕ ಕರ್ತವ್ಯ ಹರ್ಯಾಣದ ಸೂರಜ್​ಕುಂಡ್​ನಲ್ಲಿ ಎರಡು ದಿನಗಳ ಗೃಹ ಸಚಿವರ ಚಿಂತನಾ ಶಿಬಿರವನ್ನು ಆಯೋಜಿಸಲಾಗಿದ್ದು, ಇಂದು ಕೊನೆಯ ದಿನದ ಶಿಬಿರ ನಡೆಯುತ್ತಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Fri, 28 October 22

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ