Chittoor Fire Accident: ಆಂಧ್ರಪ್ರದೇಶದಲ್ಲಿ ಪೇಪರ್​​​ ಪ್ಲೇಟ್​ ತಯಾರಿಸುವ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಮೂವರು ಸಾವು

| Updated By: ವಿವೇಕ ಬಿರಾದಾರ

Updated on: Sep 21, 2022 | 6:44 AM

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಡರಾತ್ರಿ ಪೇಪರ್​​​ ಪ್ಲೇಟ್​ ತಯಾರಿಸುವ ಕಾರ್ಖಾನೆಯಲ್ಲಿ ಶಾಟ್​​​​​ಸರ್ಕ್ಯೂಟ್​ನಿಂದ ಭಾರಿ ಅಗ್ನಿ ಅವಘಡ ಸಂಭವಸಿದೆ.

Chittoor Fire Accident: ಆಂಧ್ರಪ್ರದೇಶದಲ್ಲಿ ಪೇಪರ್​​​ ಪ್ಲೇಟ್​ ತಯಾರಿಸುವ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಮೂವರು ಸಾವು
ಸಾಂದರ್ಭಿಕ ಚಿತ್ರ
Follow us on

ಅಮರಾವತಿ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಡರಾತ್ರಿ ಪೇಪರ್​​​ ಪ್ಲೇಟ್​ ತಯಾರಿಸುವ ಕಾರ್ಖಾನೆಯಲ್ಲಿ ಶಾಟ್​​​​​ಸರ್ಕ್ಯೂಟ್​ನಿಂದ ಭಾರಿ ಅಗ್ನಿ ಅವಘಡ ಸಂಭವಸಿದೆ. ಅಗ್ನಿ ದುರಂತದಲ್ಲಿ ಮೂವರು ಸಜೀವದಹನರಾಗಿದ್ದಾರೆ. ಅಪ್ಪ ಭಾಸ್ಕರ್ (65), ಮಗ ಡೆಲ್ಲಿಬಾಬು (35) ಮತ್ತು ಬಾಲಾಜಿ (25) ಮೃತ ದುರ್ದೈವಿಗಳು. ಕಾರ್ಖಾನೆಯ ಮಾಲೀಕ, ಪುತ್ರ ಸಾವು

ಚಿತ್ತೂರಿನ ರಂಗಾಚಾರಿ ಬೀದಿಯಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಷ್ಟ್ರೀಯ ಖಾಸಗಿ ಸುದ್ದಿ ಸಂಸ್ಥೆಯ ವರದಿ ಪ್ರಕಾರ ರಂಗಾಚಾರಿ ಗಲ್ಲಿಯಲ್ಲಿ ಭಾಸ್ಕರ್ ಎಂಬುವರು ಎರಡು ಅಂತಸ್ತಿನ ಕಟ್ಟಡ ಹೊಂದಿದ್ದಾರೆ. ನೆಲಮಹಡಿಯಲ್ಲಿ ಪೇಪರ್ ಪ್ಲೇಟ್ ತಯಾರಿಕಾ ಘಟಕ ನಡೆಸಲಾಗುತ್ತಿತ್ತು. ಭಾಸ್ಕರ್ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದರು.

ತಡರಾತ್ರಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಪೇಪರ್ ಪ್ಲೇಟ್ ತಯಾರಿಕಾ ಘಟಕದಲ್ಲಿ ಶಾಟ್​​​​​ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದೆ. ಪೇಪರ್ ಪ್ಲೇಟ್​ಗಳು ಬೇಗ ಉರಿಯುವ ಗುಣ ಹೊಂದಿರುವುದರಿಂದ ಬೆಂಕಿ ಎಲ್ಲಡೆ ವ್ಯಾಪಿಸಿದೆ. ಎರಡನೇ ಮಹಡಿಗೂ ಬೆಂಕಿ ವ್ಯಾಪಿಸಿದೆ. ಅವಘಡದಲ್ಲಿ ಮೂವರು ಸಜೀವದಹನರಾಗಿದ್ದಾರೆ.

ಪೇಪರ್ ಪ್ಲೇಟ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿತ್ತು. ಬೆಂಕಿ ಸ್ವಲ್ಪ ನಂದ ಬಳಿಕ ಸ್ಥಳೀಯರು ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ದಿಲ್ಲಿ ಬಾಬು ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಗೆಳೆಯ ಬಾಲಾಜಿ ಅವರ ಮನೆಗೆ ಬಂದಿದ್ದರು ಎಂದು ವರದಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 am, Wed, 21 September 22