Watch:ಗುಜರಾತ್​​ಗೆ ಕೇಜ್ರಿವಾಲ್​​ ಆಗಮಿಸಿದಾಗ ಮೊಳಗಿದ ಮೋದಿ ಜೈಕಾರ, ದೆಹಲಿ ಸಿಎಂ ಪ್ರತಿಕ್ರಿಯೆ ಹೀಗಿತ್ತು

ಇದಕ್ಕೂ ಮುನ್ನ ಸೆಪ್ಟೆಂಬರ್ 13 ರಂದು ಅಹಮದಾಬಾದ್‌ಗೆ ಭೇಟಿ ನೀಡಿದ್ದ ಕೇಜ್ರಿವಾಲ್, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು "ಹಿಂಬಾಗಿಲ ಮೂಲಕ ಪ್ರಧಾನಿ" ಮತ್ತು "ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ"...

Watch:ಗುಜರಾತ್​​ಗೆ ಕೇಜ್ರಿವಾಲ್​​ ಆಗಮಿಸಿದಾಗ ಮೊಳಗಿದ ಮೋದಿ ಜೈಕಾರ, ದೆಹಲಿ ಸಿಎಂ ಪ್ರತಿಕ್ರಿಯೆ ಹೀಗಿತ್ತು
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 20, 2022 | 7:55 PM

ವಡೋದರಾ: ಗುಜರಾತ್‌ನ (Gujarat) ವಡೋದರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (Aam Aadmi Party) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಮೋದಿ-ಮೋದಿ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ಇದಾದ ನಂತರ ಕೇಜ್ರಿವಾಲ್-ಕೇಜ್ರಿವಾಲ್ ಎಂಬ ಘೋಷಣೆಗಳೂ ಕೇಳಿ ಬಂದವು. ಕೇಜ್ರಿವಾಲ್ ಅವರು ಗುಜರಾತ್ ರಾಜ್ಯಕ್ಕೆ ಚುನಾವಣೆ ಹಿನ್ನಲೆಯಲ್ಲಿ ಒಂದು ದಿನದ ಭೇಟಿಯಲ್ಲಿದ್ದಾರೆ. ವಡೋದರಾದಲ್ಲಿ ಟೌನ್ ಹಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ ರಾಜಕೀಯ ಎದುರಾಳಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಘೋಷ ಕೇಳುತ್ತಿರುವಾಗ ಮಾಧ್ಯಮಗಳತ್ತ ಹೆಜ್ಜೆ ಹಾಕುತ್ತಿರುವ ಕೇಜ್ರಿವಾಲ್ ನಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ವೇಳೆ ಅಲ್ಲಿ ಏನೂ ಮಾತನಾಡದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಾಗಿ ತಿಳಿಸಿದರು. ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಪ್ರೀತಿ ಗಾಂಧಿ, “ಅರವಿಂದ ಕೇಜ್ರಿವಾಲ್ ಅವರಿಗೆ ಮೋದಿಯವರ ಗುಜರಾತ್‌ನಲ್ಲಿ ಆತ್ಮೀಯ ಸ್ವಾಗತ!!” ಎಂದು ಟ್ವೀಟ್ ಮಾಡಿದ್ದಾರೆ.

ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ತನ್ನ ಖಾತೆ ತೆರೆಯಲು ಸಾಧ್ಯವಾಗದ ಗುಜರಾತ್‌ಗೆ ಎಎಪಿ ಅಡಿ ಇಡಲು ಮುಂದಾಗಿದೆ. ಪಂಜಾಬ್‌ನಲ್ಲಿ ಭಾರಿ ಗೆಲುವಿನ ನಂತರ, ಪಕ್ಷವು ತನ್ನ ಬಾಹುಗಳನ್ನು ದೇಶದ ಇತರ ಭಾಗಗಳಿಗೆ ವಿಸ್ತರಿಸಲು ನೋಡುತ್ತಿದೆ.

ಗುಜರಾತಿನ ಜನರನ್ನು ತಲುಪುವ ಪ್ರಯತ್ನದಲ್ಲಿ, ಕೇಜ್ರಿವಾಲ್ ಅವರು ಬಿಜೆಪಿಯ 27 ವರ್ಷಗಳ ಆಡಳಿತವನ್ನು ಟೀಕಿಸುತ್ತಾ ರಾಜ್ಯಕ್ಕೆ ಅನೇಕ ಬಾರಿ ಭೇಟಿ ನೀಡಿದ್ದಾರೆ. ಅದೇ ವೇಳೆ ಎಎಪಿ ಪಕ್ಷ ಅಧಿಕಾರಕ್ಕೆ ಬಂದರೆ ದೆಹಲಿ ಮಾಡೆಲ್ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇದಕ್ಕೂ ಮುನ್ನ ಸೆಪ್ಟೆಂಬರ್ 13 ರಂದು ಅಹಮದಾಬಾದ್‌ಗೆ ಭೇಟಿ ನೀಡಿದ್ದ ಕೇಜ್ರಿವಾಲ್, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು “ಹಿಂಬಾಗಿಲ ಮೂಲಕ ಪ್ರಧಾನಿ” ಮತ್ತು “ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ” ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕರ ಪ್ರಶ್ನೆಗೆ ಕೇಜ್ರಿವಾಲ್ ಈ ರೀತಿ ಪ್ರತಿಕ್ರಿಯಿಸಿದ್ದರು. ‘ಪಿಎಂ ಮೋದಿ ನಂತರ ಬಿಜೆಪಿ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದು ನಾನು ಕೇಳಿದ್ದೇನೆ. ಈ ಬಗ್ಗೆ ಅವರೇ ಏನು ಹೇಳುತ್ತಾರೆಂದು ಅವರನ್ನೇ ಕೇಳಿ. ನೀವು ಸೋನಿಯಾ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಮತ್ತು ಪ್ರಧಾನಿ ಮೋದಿ ಉತ್ತರಾಧಿಕಾರಿಯನ್ನಾಗಿ ಮಾಡಲಿದ್ದೀರಾ ಎಂದು ಎಂದು ಅವರನ್ನು ಕೇಳಿ. ರಾಷ್ಟ್ರಮಟ್ಟದಲ್ಲಿ, ಈ ಬಗ್ಗೆ ಅವರು ಏನು ಹೇಳುತ್ತಾರೆ? ಬಿಜೆಪಿಯು ಸೋನಿಯಾ ಗಾಂಧಿ ಅವರನ್ನು ಹಿಂಬಾಗಿಲ ಮೂಲಕ ದೇಶದ ಪ್ರಧಾನಿ ಮಾಡಲು ಪ್ರಯತ್ನಿಸುತ್ತಿದೆ, ಅವರಿಗೆ ಈ ಪ್ರಶ್ನೆಯನ್ನು ಕೇಳಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಗುಜರಾತ್‌ನ ಅಭಿವೃದ್ಧಿಗೆ ಬಿಜೆಪಿ “ಏನೂ ಮಾಡಿಲ್ಲ” ಎಂದು ಆರೋಪಿಸಿದ ಕೇಜ್ರಿವಾಲ್, “ಮುಂದಿನ ಐದು ವರ್ಷಗಳವರೆಗೆ ಅವರಿಗೆ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದ್ದಾರೆ.

Published On - 7:47 pm, Tue, 20 September 22