ತಡರಾತ್ರಿ ತಮ್ಮ ಪಕ್ಷದ ಶಾಸಕರ ಸಭೆ ಕರೆದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್; ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಪೂರ್ವ ಸಿದ್ಧತೆ?
ಗೆಹ್ಲೋಟ್ ರಾಷ್ಟ್ರೀಯ ಹಂತಕ್ಕೆ ಬಡ್ತಿ ಪಡೆದರೆ ಅವರ ಪ್ರತಿಸ್ಪರ್ಧಿ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಗೆಹ್ಲೋಟ್ ಸ್ಥಾನಕ್ಕೆ ಬರಲಿದ್ದಾರೆ. ಇದು ಗೆಹ್ಲೋಟ್ ಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ಗೆಹ್ಲೋಟ್ ತನ್ನ ಶಾಸಕರನ್ನು...
ಜೈಪುರ: ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ತಮ್ಮ ಪ್ರತಿಸ್ಪರ್ಧಿ ಸಚಿನ್ ಪೈಲಟ್ (Sachin Pilot) ನಗರದಿಂದ ಹೊರಗಿರುವ ಸಮಯದಲ್ಲಿ ತಡರಾತ್ರಿ ತಮ್ಮ ಪಕ್ಷದ ಶಾಸಕರ ಸಭೆಯನ್ನು ಕರೆದಿದ್ದಾರೆ. ಜೈಪುರದಲ್ಲಿ ಇಂದು ರಾತ್ರಿ 10 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರೊಂದಿಗಿನ ಭೋಜನ ಕೂಟದ ನಂತರ ಕಾಂಗ್ರೆಸ್ ಶಾಸಕರು ಅಲ್ಲೇ ಇದ್ದು ಸಭೆಗೆ ಹಾಜರಾಗುವಂತೆ ಹೇಳಲಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ. ಈ ಸಭೆಯಲ್ಲಿ 20 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಗೆಹ್ಲೋಟ್ ಶಾಸಕರಿಗೆ ವಿವರಿಸುವ ಸಾಧ್ಯತೆಯಿದೆ. ರಾಹುಲ್ ಗಾಂಧಿಯವರ “ಭಾರತ್ ಜೋಡೋ ಯಾತ್ರೆ” ಗಾಗಿ ಕೇರಳದಲ್ಲಿರುವ ಸಚಿನ್ ಪೈಲಟ್ ಈ ಸಭೆಗೆ ಗೈರು ಹಾಜರಾಗಲಿದ್ದಾರೆ. 71ರ ಹರೆಯದ ಗೆಹ್ಲೋಟ್ ಕಾಂಗ್ರೆಸ್‌ನ ನಾಯಕತ್ವಕ್ಕಾಗಿ ಗಾಂಧಿಯವರ ಆಯ್ಕೆಯಾಗಿದ್ದಾರೆ. ಅವರು ಬಹಳ ಹಿಂದಿನಿಂದಲೂ ಪಕ್ಷದಲ್ಲಿ ಇದ್ದಾರೆ. ಆದರೆ ಅವರಿಗೆ ತಮ್ಮ ರಾಜಸ್ಥಾನದ ಪಾತ್ರವನ್ನು ತ್ಯಜಿಸಲು ಇಷ್ಟವಿಲ್ಲ ಎಂದು ವರದಿಯಾಗಿದೆ.
ಗೆಹ್ಲೋಟ್ ರಾಷ್ಟ್ರೀಯ ಹಂತಕ್ಕೆ ಬಡ್ತಿ ಪಡೆದರೆ ಅವರ ಪ್ರತಿಸ್ಪರ್ಧಿ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಗೆಹ್ಲೋಟ್ ಸ್ಥಾನಕ್ಕೆ ಬರಲಿದ್ದಾರೆ. ಇದು ಗೆಹ್ಲೋಟ್ ಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ಗೆಹ್ಲೋಟ್ ತನ್ನ ಶಾಸಕರನ್ನು ಒಟ್ಟುಗೂಡಿಸುವ ಮತ್ತು ಜತೆಯಾಗಿಇರಿಸುವ ಇಟ್ಟುಕೊಳ್ಳುವ ಸಮಯದಲ್ಲಿ ದೊಡ್ಡ ಬದಲಾವಣೆಗಳು ಮುಂದೆ ಇರಬಹುದು ಎಂದು ಹೇಳಲಾಗಿದೆ.
ಗೆಹ್ಲೋಟ್ ಸೋಮವಾರ ತಮ್ಮ ನಾಮನಿರ್ದೇಶನವನ್ನು ಸಲ್ಲಿಸಲು ಒಪ್ಪಿಕೊಂಡಿದ್ದರೂ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ಅವರ ಮನವೊಲಿಸುವ ಆಶಯವಿದೆ ಎಂದು ವರದಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷರಾದ ನಂತರವೂ ಸ್ವಲ್ಪ ಸಮಯದವರೆಗೆ ಮುಖ್ಯಮಂತ್ರಿಯಾಗಿ ಉಳಿಯಲು ಬಯಸುವುದಾಗಿ ಗೆಹ್ಲೋಟ್ ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳುತ್ತವೆ.
ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಾದರೆ, ರಾಜಸ್ಥಾನದಲ್ಲಿ ನಿಷ್ಠಾವಂತರು ತಮ್ಮ ಪ್ರಾಕ್ಸಿಯಾಗಿ ಆಡಳಿತ ನಡೆಸಬೇಕೆಂದು ಅವರು ಬಯಸುತ್ತಾರೆ ಎಂದು ಮೂಲಗಳು ಹೇಳುತ್ತವೆ. ಇಲ್ಲದಿದ್ದರೆ, ಸೋನಿಯಾ ಗಾಂಧಿ ಅವರನ್ನು ಪೂರ್ಣ ಸಮಯದ ಮುಖ್ಯಸ್ಥರಾಗಿ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಅವರು ಎರಡೂ ಪಾತ್ರಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ.
ಕಾಂಗ್ರೆಸ್ ಸೆಪ್ಟೆಂಬರ್ 30 ರವರೆಗೆ ನಾಮಪತ್ರಗಳನ್ನು ಸ್ವೀಕರಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ, ಅಗತ್ಯವಿದ್ದರೆ (ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ) ಅಕ್ಟೋಬರ್ 17 ರಂದು ನಡೆಯಲಿದೆ. ಅಕ್ಟೋಬರ್ 19 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.
ಗೆಹ್ಲೋಟ್ ಇಲ್ಲಿಯವರೆಗೆ ತಮ್ಮ ಹುದ್ದೆಯನ್ನು ಕಾಯ್ದುಕೊಂಡಿದ್ದಾರೆ, ಅವರ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಪ್ರಯತ್ನ ಮಾಡಿದ್ದು ಮಾತ್ರವಲ್ಲದೆ 2020 ರಲ್ಲಿ ಸಚಿನ್ ಪೈಲಟ್ ದಂಗೆಯಂತಹ ಬಿಕ್ಕಟ್ಟುಗಳನ್ನು ಎದುರಿಸಿದ್ದಾರೆ. 2020 ರಲ್ಲಿ ಸಚಿನ್ ಪೈಲಟ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದು 18 ಶಾಸಕರೊಂದಿಗೆ ದೆಹಲಿಗೆ ಹೋಗಿದ್ದರು. ಆಮೇಲೆ ಗಾಂಧಿಯವರ ಮಧ್ಯಪ್ರವೇಶದ ನಂತರ ಒಂದು ತಿಂಗಳ ಕಾಲದ ಬಿಕ್ಕಟ್ಟು ಪರಿಹಾರವಾಗಿತ್ತು. 2018 ರ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ಮುಖ್ಯಮಂತ್ರಿಯಾಗಲು ತೀವ್ರ ಪೈಪೋಟಿಯಲ್ಲಿದ್ದರು. ಕಾಂಗ್ರೆಸ್ ಮೂರನೇ ಬಾರಿಗೆ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತು ಮತ್ತು ಪೈಲಟ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ ಪೈಲಟ್ ದಂಗೆ ಎದ್ದ ನಂತರ ಆ ಸ್ಥಾನ ಕಳೆದುಕೊಂಡರು.
Published On - 8:39 pm, Tue, 20 September 22