AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪತಿಯವರು ಕೂಡಾ ತಲೆ ಮೇಲೆ ಸೆರಗು ಹೊದ್ದುಕೊಳ್ಳುತ್ತಾರೆ, ಅದು ಪಿಎಫ್ಐ ಪಿತೂರಿಯೇ?: ಜೆಡಿಎಸ್ ನಾಯಕ ಸಿಎಂ ಇಬ್ರಾಹಿಂ

ಇಂದಿರಾ ಗಾಂಧಿ ತಲೆ ಮೇಲೆ ಸೆರಗುಹಾಕುತ್ತಾರೆ. ರಾಷ್ಟ್ರಪತಿಗಳು ತಲೆಗೆ ಸೆರಗು ಹೊದ್ದುಕೊಳ್ಳುತ್ತಾರೆ. ಆದ್ದರಿಂದ ಮುಖವನ್ನು ಸೆರಗಿನಿಂದ ಮುಚ್ಚುವವರೆಲ್ಲರೂ ಪಿಎಫ್ಐನಿಂದ ಬೆಂಬಲಿತರಾಗಿದ್ದಾರೆಯೇ?

ರಾಷ್ಟ್ರಪತಿಯವರು ಕೂಡಾ ತಲೆ ಮೇಲೆ ಸೆರಗು ಹೊದ್ದುಕೊಳ್ಳುತ್ತಾರೆ, ಅದು ಪಿಎಫ್ಐ ಪಿತೂರಿಯೇ?: ಜೆಡಿಎಸ್ ನಾಯಕ ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 20, 2022 | 6:41 PM

Share

ದೆಹಲಿ: ಸುಪ್ರೀಂಕೋರ್ಟ್‌ನಲ್ಲಿ (Supreme Court) ಕರ್ನಾಟಕ ಹಿಜಾಬ್ ನಿಷೇಧ (hijab ban )ಪ್ರಕರಣದಲ್ಲಿ ವಿಚಾರಣೆ ಇಂದು ನಡೆದಿದೆ. ಈ ಹೊತ್ತಲ್ಲೇ ಜನತಾ ದಳದ(ಜಾತ್ಯತೀತ) ಕರ್ನಾಟಕ ಮುಖ್ಯಸ್ಥ ಸಿಎಂ ಇಬ್ರಾಹಿಂ (CM Ibrahim)ಹಿಜಾಬ್​​ನ್ನು ಮಹಿಳೆಯರು ತಲೆ ಮೇಲೆ ಹೊದ್ದುಕೊಳ್ಳುವ ಸೆರೆಗಿನ ಜತೆ ಹೋಲಿಕೆ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ತಲೆ ಮೇಲೆ ಸೆರಗು (ಪಲ್ಲು) ಹಾಕಿಕೊಳ್ಳುತ್ತಾರೆ. ಅದು ಕೂಡಾ ಪಿಎಫ್‌ಐ ಪಿತೂರಿಯೇ ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಹಿಜಾಬ್ ನಿಷೇಧದ ವಿರುದ್ಧದ ಭಾರಿ ಪ್ರತಿಭಟನೆಯ ಹಿಂದೆ ಪಿಎಫ್ಐ ಪಿತೂರಿ ಇದೆ ಎಂಬ ಆರೋಪಗಳಿಗೆ ಇಬ್ರಾಹಿಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇಂದಿರಾ ಗಾಂಧಿ ತಲೆ ಮೇಲೆ ಸೆರಗುಹಾಕುತ್ತಾರೆ. ರಾಷ್ಟ್ರಪತಿಗಳು ತಲೆಗೆ ಸೆರಗು ಹೊದ್ದುಕೊಳ್ಳುತ್ತಾರೆ. ಆದ್ದರಿಂದ ಮುಖವನ್ನು ಸೆರಗಿನಿಂದ ಮುಚ್ಚುವವರೆಲ್ಲರೂ ಪಿಎಫ್ಐನಿಂದ ಬೆಂಬಲಿತರಾಗಿದ್ದಾರೆಯೇ? ತಲೆಗೆ ಸೆರಗು ಮುಚ್ಚುವುದು ಭಾರತದ ಇತಿಹಾಸ. ಇದು ಭಾರತದ ಸಂಸ್ಕಾರ ಎಂದಿದ್ದಾರೆ ಇಬ್ರಾಹಿಂ.

ಹಿಜಾಬ್ ಪ್ರತಿಭಟನೆಯ ಹಿಂದೆ ಪಿಎಫ್‌ಐ ಕೈವಾಡವಿದೆ ಎಂದು ಕರ್ನಾಟಕ ಸರ್ಕಾರ ಇಂದು ನ್ಯಾಯಾಲಯಕ್ಕೆ ತಿಳಿಸಿದೆ. 2021 ರವರೆಗೆ ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗಳು ಹಿಜಾಬ್ ಧರಿಸಿರಲಿಲ್ಲ ಎಂದು ಅದು ಹೇಳಿದೆ. ಫೆಬ್ರವರಿ 5, 2022ರ ಕರ್ನಾಟಕ ಸರ್ಕಾರದ ಆದೇಶವು ಶಾಲೆಗಳು ಮತ್ತು ಕಾಲೇಜುಗಳಲ್ಲಿ “ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಬಟ್ಟೆಗಳನ್ನು” ಧರಿಸುವುದನ್ನು ನಿಷೇಧಿಸಿದೆ.

ರಾಜಸ್ಥಾನದ ಸಾಂಪ್ರದಾಯಿಕ ಉಡುಗೆಯನ್ನು ಉಲ್ಲೇಖಿಸಿದ ಇಬ್ರಾಹಿಂ ಅಲ್ಲಿ ಮಹಿಳೆಯರು ತಮ್ಮ ತಲೆ ಮತ್ತು ಮುಖವನ್ನು ಪಲ್ಲುನಿಂದ ಮುಚ್ಚಿಕೊಳ್ಳುತ್ತಾರೆ. ರಾಜಸ್ಥಾನದಲ್ಲಿ ಯಾವುದೇ ರಜಪೂತ ಮಹಿಳೆ ತನ್ನ ಮುಖವನ್ನು ಕಾಣಿಸುವುದಿಲ್ಲ. ಅವರಿಗೆ ಘೂಂಘಾಟ್ ಇದೆ. ಇದು ಮುಸ್ಲಿಂ ಆಚರಣೆ ಎಂದು ನೀವು ಅದನ್ನು ನಿಷೇಧಿಸಬಹುದೇ? ಹಿಜಾಬ್ ಮತ್ತು ಪಲ್ಲು ನಡುವಿನ ವ್ಯತ್ಯಾಸವು ಕೇವಲ ಭಾಷೆಯ ವ್ಯತ್ಯಾಸವಾಗಿದೆ, ಆದರೆ ಅದು ಮಾಡುವ ಕಾರ್ಯ ಒಂದೇ ಎಂದು ಜೆಡಿಎಸ್ ನಾಯಕ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿದ ಅರ್ಜಿದಾರರು, ಹಿಜಾಬ್ ಮುಸ್ಲಿಮರ ಅಸ್ಮಿತೆ ಎಂದು ವಾದಿಸಿದ್ದಾರೆ. ಕರ್ನಾಟಕ ರಾಜ್ಯ ಅಧಿಕಾರಿಗಳ ಲೋಪ ಮತ್ತು ಆಯೋಗದ ವಿವಿಧ ಕಾರ್ಯಗಳು ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುವ ಮಾದರಿಯನ್ನು ತೋರಿಸಿದೆ ಎಂದು ಹಿರಿಯ ವಕೀಲ ದುಷ್ಯಂತ್ ದವೆ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದರು.

ಧಾರ್ಮಿಕ ಆಚರಣೆಯನ್ನು ಸಮುದಾಯವು ತನ್ನ ಧಾರ್ಮಿಕ ನಂಬಿಕೆಯ ಭಾಗವಾಗಿ ಆಚರಿಸುತ್ತದೆ ಎಂದು ದವೆ ಹೇಳಿದ್ದಾರೆ. ಸಾಂಪ್ರದಾಯಿಕವಾಗಿ, ಒಬ್ಬ ವ್ಯಕ್ತಿಯು ಗೌರವಾನ್ವಿತ ಸ್ಥಳಕ್ಕೆ ಹೋದಾಗ, ಅವನು ಅಥವಾ ಅವಳು ತಮ್ಮ ತಲೆಯನ್ನು ಮುಚ್ಚಿಕೊಳ್ಳುತ್ತಾರೆ ಎಂದು ಪೀಠವು ಗಮನಿಸಿತು. ಶಾಲೆಯು ಅತ್ಯಂತ ಗೌರವಾನ್ವಿತ ಸ್ಥಳವಾಗಿದೆ. ಅದು ಪೂಜ್ಯನೀಯ ಸ್ಥಳ ಎಂದ ದವೆ ಆಗಸ್ಟ್ 15 ರಂದು ಪ್ರಧಾನಿ ಕೂಡ ತಲೆ ಮೇಲೆ ಪೇಟ ಧರಿಸುತ್ತಾರೆ ಎಂದಿದ್ದಾರೆ.

ಜನವರಿಯಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜು ಹಿಜಾಬ್ ಧರಿಸಿದ ಆರು ವಿದ್ಯಾರ್ಥಿನಿಯರನ್ನು ಕ್ಯಾಂಪಸ್‌ಗೆ ಪ್ರವೇಶಿಸದಂತೆ ನಿರ್ಬಂಧಿಸಿದಾಗ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ವಿವಾದ ಪ್ರಾರಂಭವಾಯಿತು.

Published On - 6:40 pm, Tue, 20 September 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?