Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸ್​ಕ್ರೀಂನಲ್ಲಿ ಬೆರಳು ಪತ್ತೆ ಪ್ರಕರಣ: ನೂರಕ್ಕೂ ಹೆಚ್ಚು ಐಸ್​ಕ್ರೀಂಗಳು ಸೋಂಕು ಹೊಂದಿರಬಹುದು

ಐಸ್​ಕ್ರೀಂನಲ್ಲಿ ಬೆರಳು ಪತ್ತೆಯಾಗಿರುವ ಸುದ್ದಿ ಎಲ್ಲೆಡೆ ಆತಂಕ ಸೃಷ್ಟಿಯಾಗಿತ್ತು, ಇದೀಗ ಒಂದೊಮ್ಮೆ ಆ ವ್ಯಕ್ತಿಗೆ ಯಾವುದಾದರೂ ಸೋಂಕು ಇದ್ದರೆ ಅದು ಸುಮಾರು 100ಕ್ಕೂ ಹೆಚ್ಚು ಐಸ್​ಕ್ರೀಂಗಳಿಗೂ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

ಐಸ್​ಕ್ರೀಂನಲ್ಲಿ ಬೆರಳು ಪತ್ತೆ ಪ್ರಕರಣ: ನೂರಕ್ಕೂ ಹೆಚ್ಚು ಐಸ್​ಕ್ರೀಂಗಳು ಸೋಂಕು ಹೊಂದಿರಬಹುದು
ಐಸ್​ಕ್ರೀಂ
Follow us
ನಯನಾ ರಾಜೀವ್
|

Updated on:Jun 21, 2024 | 2:36 PM

ಮುಂಬೈನಲ್ಲಿ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದ ಕೋನ್​ ಐಸ್​ಕ್ರೀಂ(Ice-Cream)ನಲ್ಲಿ ಮಾನವನ ಬೆರಳು ಪತ್ತೆಯಾಗಿ ಆತಂಕ ಮೂಡಿಸಿತ್ತು, ಈಗ ಆ ಕತ್ತರಿಸಿದ ಬೆರಳು 100 ಕ್ಕೂ ಹೆಚ್ಚು ಐಸ್​ಕ್ರೀಂನ್ನು ಕಲುಷಿತಗೊಳಿಸಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ, ಬೆರಳು ಕತ್ತರಿಸಿಕೊಂಡ ಸಿಬ್ಬಂದಿಯ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಗೆ ಯಾವುದೇ ಗಂಭೀರ ಕಾಯಿಲೆ ಇದೆಯೇ ಎಂದು ಪತ್ತೆ ಮಾಡಲಾಗುತ್ತಿದೆ. ಬೆರಳು ಕಟ್​ ಆಗುವಾಗ ರಕ್ತ ಐಸ್ ಕ್ರೀಮ್ ಮೇಲೆ ಬಿದ್ದಿದ್ದರೆ, ಅದು 100 ಕ್ಕೂ ಹೆಚ್ಚು ಐಸ್ ಕ್ರೀಂಗಳನ್ನು ಕಲುಷಿತಗೊಳಿಸಿರುವ ಸಾಧ್ಯತೆ ಇರುತ್ತಿದೆ.

ಆತನಿಗೆ ಗಂಭೀರ ಕಾಯಿಲೆ ಇರುವುದು ಕಂಡುಬಂದರೆ, ಆ 100-ಪ್ಲಸ್ ಐಸ್ ಕ್ರೀಮ್ ತಿನ್ನುವವರು ಸಹ ಅಪಾಯಕ್ಕೆ ಒಳಗಾಗಬಹುದು. ಜೂನ್ 13 ರಂದು, ಮುಂಬೈನ ಮಲಾಡ್‌ನಲ್ಲಿ ವೈದ್ಯರೊಬ್ಬರು ಆನ್‌ಲೈನ್ ಅಪ್ಲಿಕೇಶನ್ ಮೂಲಕ ತಿನ್ನಲು 3 ಐಸ್ ಕ್ರೀಂಗಳನ್ನು ಆರ್ಡರ್ ಮಾಡಿದ್ದರು.

ಮತ್ತಷ್ಟು ಓದಿ: ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

ಐಸ್​ಕ್ರೀಂನ್ನು ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಅವರಿಗೆ ಅದರಲ್ಲಿ ಬೆರಳು ಕಾಣಿಸಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ, ಕಂಪನಿಯ ಪರವಾನಗಿ ರದ್ದು ಎಫ್​ಎಸ್​ಎಸ್​ಎಐ ಕಚೇರಿಯ ತಂಡವು ಕಂಪನಿಯ ಆವರಣವನ್ನು ಪರಿಶೀಲಿಸಿದೆ ಮತ್ತು ಪರವಾನಗಿ ರದ್ದುಗೊಳಿಸಿದೆ. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೇ ಬರಬೇಕಿದೆ. ಐಸ್​ಕ್ರೀಂ(Ice-Cream)ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು ಆನ್‌ಲೈನ್‌ನಲ್ಲಿ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಅವರು ಬಹಳ ಆಸಕ್ತಿಯಿಂದ ಐಸ್​ಕ್ರೀಂ ತೆಗೆದು ನೋಡಿ ದಿಗ್ಭ್ರಮೆಗೊಂಡಿದ್ದಾರೆ.

ಆ ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಮೊದಲು ವಾಲ್ನಟ್​ ಎಂದುಕೊಂಡೆವು ಬಳಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಇದು ಬೆರಳು ಎಂಬುದು ಅರಿವಾಗಿದೆ ಎಂದಿದ್ದಾರೆ. ನಾನು ಮೂರು ಐಸ್​ಕ್ರೀಂಗಳನ್ನು ಆರ್ಡರ್​ ಮಾಡಿದ್ದೆ, ನಾನು ಬಟರ್​ಸ್ಕಾಚ್​ ಐಸ್ಕ್ರೀಂ ತಿನ್ನುತ್ತಿದ್ದೆ ಆಗ ಇದ್ದಕ್ಕಿದ್ದಂತೆ ಹಲ್ಲಿಗೇನೋ ತಾಗಿದಂತಾಯಿತು ನಾನು ವಾಲ್ನಟ್ ಅಥವಾ ಚಾಕೊಲೇಟ್​ ಇರಬೇಕು ಎಂದುಕೊಂಡೆ, ಬಳಿಕ ಉಗುಳಿದಾಗ ಅದು ವಾಲ್ನಟ್ ಆಗಿರಲಿಲ್ಲ, ಮನುಷ್ಯನ ಬೆರಳಾಗಿದ್ದು, ಅದನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡೆ.

ನಾನು ವೈದ್ಯನಾಗಿರುವ ಕಾರಣ ಇದು ಹೆಬ್ಬರಳಿನ ಭಾಗ ಎಂಬುದು ನಾನು ಅರ್ಥಮಾಡಿಕೊಂಡೆ ಅದರಲ್ಲಿ ಉಗುರು ಕೂಡ ಇದೆ ಎಂದರು. ನಾನು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ವೈದ್ಯ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:29 pm, Fri, 21 June 24