Tribal Schools: ಛತ್ತೀಸ್ಗಡದಲ್ಲಿ 68 ಏಕಲವ್ಯ ವಸತಿ ಶಾಲೆಗಳಿಗೆ ಕೋಲ್ ಇಂಡಿಯಾ ಕಂಪನಿ ನೆರವು
CIL Commits ₹10 Cr to Strengthen Ekalavya schools in Chhattisgarh: ಛತ್ತೀಸ್ಗಡದಲ್ಲಿ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಏಕಲವ್ಯ ಮಾದರಿ ವಸತಿಗಳಿಗೆ ಕೋಲ್ ಇಂಡಿಯಾ ನೆರವು ನೀಡುತ್ತಿದೆ. ಬುಡಕಟ್ಟು ಸಚಿವಾಲಯದ ಸಹಯೋಗದಲ್ಲಿ ಕೋಲ್ ಇಂಡಿಯಾ ಸಂಸ್ಥೆ 68 ಏಕಲವ್ಯ ಶಾಲೆಗಳ ಅಭಿವೃದ್ಧಿಗೆ ನಿಂತಿದೆ. ಸದ್ಯ ತನ್ನ ಸಿಎಸ್ಆರ್ ಬಜೆಟ್ನಲ್ಲಿ ಇದಕ್ಕಾಗಿ 10 ಕೋಟಿ ರೂ ತೆಗೆದಿರಿಸಿದೆ.

ನವದೆಹಲಿ, ಜುಲೈ 18: ಭಾರತದ ಅತ್ಯಂತ ಸಂಪದ್ಭರಿತ ರಾಜ್ಯಗಳಲ್ಲಿ ಒಂದೆನಿಸಿರುವ ಜೊತೆ ಜೊತೆಗೆ, ಅತ್ಯಂತ ಬಡ ರಾಜ್ಯಗಳಲ್ಲಿ ಒಂದೆನಿಸಿರುವ ಛತ್ತೀಸ್ಗಡದಲ್ಲಿ ಬುಡಕಟ್ಟು ಮಕ್ಕಳ ಏಳ್ಗೆಗೆಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಕೋಲ್ ಇಂಡಿಯಾ ಲಿಮಿಟೆಡ್ ಕಂಪನಿ ಕೈಜೋಡಿಸಿದ್ದು ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಬದ್ಧವಾಗಿವೆ. ಕೋಲ್ ಇಂಡಿಯಾ ಸಂಸ್ಥೆ ತನ್ನ ಸಿಎಸ್ಆರ್ ಕೋಟಾದಲ್ಲಿ 68 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು (EMRS) ಬೆಂಬಲಿಸಲಿದೆ. ಇದು 28,000ಕ್ಕೂ ಮಿಗಿಲಾಗಿರುವ ಬುಡಕಟ್ಟು ವಿದ್ಯಾರ್ಥಿಗಳ ಏಳ್ಗೆಗೆ ಸಹಕರಿಸುವ ನಿರೀಕ್ಷೆ ಇದೆ.
ಏಕಲವ್ಯ ಮಾಡಲ್ ರೆಸಿಡೆನ್ಷಿಯಲ್ ಶಾಲೆಗಳು ಕೇಂದ್ರ ಬುಡಕಟ್ಟು ಸಚಿವಾಲಯದಿಂದ ನಿರ್ವಹಿಸಲ್ಪಡುತ್ತವೆ. ದೇಶಾದ್ಯಂತ ಸಕ್ರಿಯವಾಗಿರುವ ಏಕಲವ್ಯ ವಸತಿ ಶಾಲೆಗಳ ಸಂಖ್ಯೆ 479 ಇದೆ. ಈ ಶಾಲೆಗಳಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ವೃತ್ತಿಪರ ಮತ್ತು ಉನ್ನತ ಶಿಕ್ಷಣಕೋರ್ಸ್ಗಳನ್ನು ಪಡೆಯಲು ಅವಕಾಶ ನೀಡಲಾಗುತ್ತದೆ. ಇದರೊಂದಿಗೆ ಅವರ ಉದ್ಯೋಗಾವಕಾಶ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸಲಾಗುತ್ತಿದೆ.
ಇದನ್ನೂ ಓದಿ: ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ
ಕೋಲ್ ಇಂಡಿಯಾ ಸಂಸ್ಥೆ ತನ್ನ ಸಿಎಸ್ಆರ್ನ ಭಾಗವಾಗಿ, ಅಂದರೆ, ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ 68 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಬೆಂಬಲಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ 10 ಕೋಟಿ ರೂ ಅನ್ನು ನೀಡಿದೆ.
ಎಲ್ಲಾ 68 ಏಕಲವ್ಯ ವಸತಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ಗಳನ್ನು ಸ್ಥಾಪಿಸಲಾಗುತ್ತದೆ. ಈ ಲ್ಯಾಬ್ಗಳಲ್ಲಿ 3,200 ಕಂಪ್ಯೂಟರುಗಳು ಹಾಗೂ 300 ಟ್ಯಾಬ್ಲೆಟ್ಗಳಿರುತ್ತವೆ. ಈ ಶಾಲೆಗಳಲ್ಲಿ 1,200 ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಷೀನ್ಗಳಿರುತ್ತವೆ. ಹೆಣ್ಮಕ್ಕಳ ಶುಚಿತ್ವಕ್ಕೆ ಇದು ಸಹಾಯವಾಗಲಿದೆ.
ಈ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಗ್ರವಾದ ಮೆಂಟಾರ್ಶಿಪ್ ಅನ್ನು ಒದಗಿಸುವುದು, ಉದ್ಯಮಶೀಲ ಬೂಟ್ ಕ್ಯಾಂಪ್ಗಳನ್ನು ಆಯೋಜಿಸುವುದು ಇವೇ ಮುಂತಾದ ಕಾರ್ಯಗಳನ್ನು ಕೋಲ್ ಇಂಡಿಯಾ ತನ್ನ ಸಿಎಸ್ಆರ್ ಯೋಜನೆಯಲ್ಲಿ ಹಮ್ಮಿಕೊಂಡಿದೆ.
ಇದನ್ನೂ ಓದಿ: ಒಂದು ಕಾಲದ ಗ್ಲೋಬಲ್ ಸೂಪರ್ ಬ್ರ್ಯಾಂಡ್ ಕೆಲ್ವಿನೇಟರ್ ಈಗ ರಿಲಾಯನ್ಸ್ ಪಾಲು
ತಲೆತಲಾಂತರಗಳಿಂದ ಶಿಕ್ಷಣದಿಂದ ವಂಚಿತವಾಗಿರುವ ಈ ವರ್ಗದ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಮತ್ತು ಸಮಾನ ಅವಕಾಶ ಕೊಡುವುದು ಈ ಉಪಕ್ರಮದ ಉದ್ದೇಶ. ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯ ಚೌಕಟ್ಟಿನಲ್ಲಿ ಈ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ