ಉತ್ತರಾಖಂಡ್​​ನಲ್ಲಿ ಮೇಘಸ್ಫೋಟ; ರಸ್ತೆ, ಮನೆಗಳಿಗೆ ಅಪಾರ ಹಾನಿ

2013ರ ಜೂನ್​ನಲ್ಲಿ ಉತ್ತರಾಖಂಡ್​ನಲ್ಲಿ ಕೆಲವುದಿನಗಳು ನಿರಂತರವಾಗಿ ಮೇಘಸ್ಫೋಟಗೊಂಡು ದೊಡ್ಡಮಟ್ಟದ ಪ್ರವಾಹ ಉಂಟಾಗಿತ್ತು. ಆಗ ಏನಿಲ್ಲವೆಂದರೆ 5700 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಅಂದಾಜಿಸಿತ್ತು.

  • TV9 Web Team
  • Published On - 21:20 PM, 3 May 2021
ಉತ್ತರಾಖಂಡ್​​ನಲ್ಲಿ ಮೇಘಸ್ಫೋಟ; ರಸ್ತೆ, ಮನೆಗಳಿಗೆ ಅಪಾರ ಹಾನಿ
ಉತ್ತರಾಖಂಡ್​ನಲ್ಲಿ ಮೇಘಸ್ಫೋಟ

ಡೆಹ್ರಾಡೂನ್: ಉತ್ತರಾಖಂಡ್​​ನ ಉತ್ತರಕಾಶಿ, ರುದ್ರಪ್ರಯಾಗ ಮತ್ತು ತೆಹ್ರಿ ಜಿಲ್ಲೆಗಳಲ್ಲಿ ಇಂದು ಮೇಘಸ್ಫೋಟವಾದ ಪರಿಣಾಮ ಅಪಾರ ಹಾನಿಯಾಗಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಮೇಘಸ್ಫೋಟದಿಂದ ಸುರಿದ ಮಳೆಗೆ ಹಲವು ರಸ್ತೆಗಳು, ಮನೆಗಳಿಗೆ ತುಂಬ ಹಾನಿಯಾಗಿದ್ದು, ಸ್ಥಳದಲ್ಲಿ ಪೊಲೀಸರು, ರಕ್ಷಣಾ ತಂಡಗಳು, ಜಿಲ್ಲಾಡಳಿತದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಅಂದರೆ ಏಪ್ರಿಲ್​ 23ರಂದು ಚಮೋಲಿ ಘರ್​ವಾಲ್ ಜಿಲ್ಲೆಯ ಸುಮ್ನಾ ಗ್ರಾಮದಲ್ಲಿ ಹಿಮನದಿ ಕುಸಿತವಾಗಿತ್ತು. ಇದರಲ್ಲಿ ಸುಮಾರು 25ಮಂದಿ ಮೃತಪಟ್ಟಿದ್ದರು. ಅದಕ್ಕೂ ಹಿಂದೆ ಕೂಡ ಒಮ್ಮೆ ಇದೇ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡು ನೂರಾರು ಮಂದಿ ಸಾವನ್ನಪ್ಪಿದ್ದರು.

2013ರ ಜೂನ್​ನಲ್ಲಿ ಉತ್ತರಾಖಂಡ್​ನಲ್ಲಿ ಕೆಲವುದಿನಗಳು ನಿರಂತರವಾಗಿ ಮೇಘಸ್ಫೋಟಗೊಂಡು ದೊಡ್ಡಮಟ್ಟದ ಪ್ರವಾಹ ಉಂಟಾಗಿತ್ತು. ಆಗ ಏನಿಲ್ಲವೆಂದರೆ 5700 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಅಂದಾಜಿಸಿತ್ತು. ಅದೊಂದು ಭೀಕರ ವಿನಾಶ ಎಂದೇ ಹೇಳಲಾಗಿತ್ತು.

ಇದನ್ನೂ ಓದಿ: ಮನೆಯಲ್ಲೇ ಐಸಿಯು ಈಗ ದೇಶವ್ಯಾಪಿ ಕಂಡು ಬರುತ್ತಿರುವ ಹೊಸ ಟ್ರೆಂಡ್: ಇದು ಕೊರೊನಾ 2ನೇ ಅಲೆ ಹೊಡೆತದ ಪರಿಣಾಮ

Covid-19 Karnataka Update: ಕರ್ನಾಟಕದಲ್ಲಿ 44,438 ಮಂದಿಗೆ ಕೊರೊನಾ ಸೋಂಕು, 239 ಸಾವು