Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?

ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಪರಾವಲಂಬಿಗಳಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದ್ದಾರೆ.ಪ್ರಮುಖ ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ನಿರುದ್ಯೋಗಿ ಯುವಕರ ಬಗ್ಗೆ ಮಾತನಾಡಿದ್ದರು. ನಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಉದ್ಯೋಗ ಮತ್ತು ಸ್ಥಾನಮಾನ ಸಿಗದಿದ್ದಾಗ ಅವರು ಆರ್‌ಟಿಐ (RTI) ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರ ಸೋಗಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಿಕೊಂಡಿದೆ.

Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?
ಅಭಿಜೀತ್ ದಿಪ್ಕೆ
Image Credit source: The Hindu
Edited By:

Updated on: May 21, 2026 | 12:11 PM

ನವದೆಹಲಿ, ಮೇ 21: ರಾಜಕೀಯದಲ್ಲಿ ಪಕ್ಷಾಂತರ, ಸಿದ್ಧಾಂತಗಳ ತ್ಯಾಗ ಮತ್ತು ಅಧಿಕಾರದ ಆಸೆ ಹೊಸದೇನಲ್ಲ. ಆದರೆ ನಿರುದ್ಯೋಗಿ ಯುವಕರನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿಭಿನ್ನವಾದ ಶಬ್ದಗಳಲ್ಲಿ ಟೀಕಿಸಿದಾಗ ಬಂದ ಪ್ರತಿಸ್ಪಂದನೆಯ ಫಲವೇ ಈ ‘ಕಾಕ್ರೋಚ್ ಜನತಾ ಪಾರ್ಟಿ’. ಪ್ರಮುಖ ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ನಿರುದ್ಯೋಗಿ ಯುವಕರ ನ್ಯಾಯಮೂರ್ತಿ ಸೂರ್ಯಕಾಂತ್​ ಮಾತನಾಡಿದ್ದರು. ಮಾತಿನ ಭರದಲ್ಲಿ ಕೆಲವು ನಿರುದ್ಯೋಗಿ ಯುವಕರು ಜಿರಳೆ(Cockroach )ಗಳಿದ್ದಂತೆ. ಉದ್ಯೋಗ ಮತ್ತು ಸ್ಥಾನಮಾನ ಸಿಗದಿದ್ದಾಗ ಅವರು ಆರ್‌ಟಿಐ (RTI) ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರ ಸೋಗಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಿರುದ್ಯೋಗಿ ಯುವಕರನ್ನು ಹೀಗೆ ಕರೆಯುವುದು ಸ್ವೀಕಾರಾರ್ಹವಲ್ಲ ಎಂದು ಹಲವು ನಾಯಕರು ಟೀಕಿಸಿದ್ದರು. ನಂತರ ಸ್ಪಷ್ಟನೆ ನೀಡಿದ ಸಿಜೆಐ, ಭಾರತೀಯ ಯುವಕರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೆ ನೀಡಿದ್ದರು.

ಕಳೆದ ಕೆಲವು ವರ್ಷಗಳಿಂದ, ಉದ್ಯೋಗ ಕೊರತೆ, ಸ್ಪರ್ಧಾತ್ಮಕ ಪರೀಕ್ಷೆಯ ಒತ್ತಡ, ಹೆಚ್ಚುತ್ತಿರುವ ಆರ್ಥಿಕ ಆತಂಕ, ಭ್ರಷ್ಟಾಚಾರ ಮತ್ತು ಸಾಂಸ್ಥಿಕ ಅಪನಂಬಿಕೆಗಳ ಕುರಿತು ಆನ್‌ಲೈನ್ ಸಂಭಾಷಣೆಗಳು ಯುವ ಭಾರತೀಯರಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಇದನ್ನೇ ಮೂಲವಾಗಿಟ್ಟುಕೊಂಡು ಈಗ, ಹೊಸದೊಂದು ಚಳವಳಿಯೇ ಹುಟ್ಟಿಕೊಂಡಿದೆ.

ಕಾಕ್ರೋಚ್ ಪಾರ್ಟಿಗೆ ಯಾವ್ಯಾವ ಪಕ್ಷಗಳ ಬೆಂಬಲ ಇದೆ?
ಮುಖ್ಯ ನ್ಯಾಯಮೂರ್ತಿಗಳ ಈ ಹೇಳಿಕೆ ಹೊರಬೀಳುತ್ತಿದ್ದಂತೆ, ದೇಶದ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಮತ್ತು ಕೆಸರೆರಚಾಟ ಆರಂಭವಾಯಿತು. ಯಾರಿಗೂ ಯಾವುದೇ ನಿರ್ದಿಷ್ಟ ‘ಕಾಕ್ರೋಚ್ ಪಾರ್ಟಿ’ ಎಂಬ ಅಧಿಕೃತ ಪಕ್ಷದ ಬೆಂಬಲ ಇಲ್ಲದಿದ್ದರೂ, ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳು ಈ ಹೆಸರನ್ನು ಪರಸ್ಪರ ಟೀಕಿಸಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ.

ಮತ್ತಷ್ಟು ಓದಿ: ಬೆಂಗಳೂರಿನ ಆಚಾರ್ಯ ಸಂಸ್ಥೆಯಲ್ಲಿ ಓಪನ್ ಆಯ್ತು ಮೊದಲ ‘ಜೆನ್ ಝೀ’ ಅಂಚೆ ಕಚೇರಿ!

 

ವಿರೋಧ ಪಕ್ಷಗಳ ವಾದ: ಆಡಳಿತ ಪಕ್ಷವು ತನಿಖಾ ಸಂಸ್ಥೆಗಳ ಭಯ ಹುಟ್ಟಿಸಿ ಇತರ ಪಕ್ಷಗಳ ನಾಯಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಹೀಗೆ ಪಕ್ಷಾಂತರ ಮಾಡಿ ಬರುವ ನಾಯಕರಿಂದಲೇ ಆಡಳಿತ ಪಕ್ಷವು ‘ಕಾಕ್ರೋಚ್ ಪಾರ್ಟಿ’ಯಾಗಿ ಬದಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

ಆಡಳಿತ ಪಕ್ಷದ ತಿರುಗೇಟು: ಸಿದ್ಧಾಂತಗಳಿಲ್ಲದ, ಕೇವಲ ಅಧಿಕಾರ ಹಿಡಿಯಲು ಮಾತ್ರ ಒಂದಾಗಿರುವ ವಿರೋಧ ಪಕ್ಷಗಳ ಮಹಾಘಟಬಂಧನ್ (ಮಹಾ ಮೈತ್ರಿ) ನಿಜವಾದ ‘ಕಾಕ್ರೋಚ್ ಪಾರ್ಟಿ’ ಎಂದು ಆಡಳಿತಾರೂಢ ನಾಯಕರು ಪ್ರತಿ ವಾದ ಮಾಡುತ್ತಿದ್ದಾರೆ.

ಈ ಕಾಕ್ರೋಚ್ ಜನತಾ ಪಾರ್ಟಿ ಹಿಂದೆ ಇರುವ ಅಭಿಜೀತ್ ದೀಪ್ಕೆ ಯಾರು?
ಆದರೆ ಸಾಮಾಜಿಕ ಜಾಲತಾಣದಲ್ಲಿ, ಅಧಿಕೃತವಾಗಿ ಕಾಕ್ರೋಚ್​ ಜನತಾ ಪಾರ್ಟಿ ಎಂಬುದನ್ನು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿದ್ಯಾರ್ಥಿಯಾಗಿರುವ ಅಭಿಜೀತ್ ದೀಪ್ಕೆ ಪ್ರಾರಂಭಿಸಿದ್ದಾರೆ. ಈ ವ್ಯಕ್ತಿ ಈ ಹಿಂದೆ 2020 ಮತ್ತು 2023 ರ ನಡುವೆ ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧಿಸಿದ ರಾಜಕೀಯ ಪ್ರಚಾರಗಳು ಮತ್ತು ಸಾಮಾಜಿಕ ಮಾಧ್ಯಮ ಸ್ಥಳಗಳಲ್ಲಿ ಕೆಲಸ ಮಾಡಿದ್ದರು.

ಈ ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿರುವ ಅಭಿಜೀತ್ ದೀಪ್ಕೆಗೆ ಇನ್​ಸ್ಟಾಗ್ರಾಂನಲ್ಲಿ 9 ಮಿಲಿಯನ್ ಫಾಲೋವರ್ಸ್​ ಇದ್ದಾರೆ.ಅಭಿಜೀತ್ ದೀಪ್ಕೆ ಎಕ್ಸ್ ಜಾಲತಾಣದಲ್ಲಿ ಸಕ್ರಿಯರಾಗಿರುವ ಒಬ್ಬ ಭಾರತೀಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮತ್ತು ರಾಜಕೀಯ ವಿಡಂಬನಾಕಾರ (Satirist). ಈತ ದೇಶದ ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಲೇವಡಿ ಮಾಡುತ್ತಾ ಪೋಸ್ಟ್‌ಗಳನ್ನು ಹಾಕುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಜೆನ್ ಝೀ ಪ್ರತಿಭಟನೆಯ ರೂಪ ತಾಳುತ್ತಿದೆಯೇ ಈ ಕಾಕ್ರೋಚ್ ಜನತಾ ಪಾರ್ಟಿ

ಕಾಕ್ರೋಚ್ ಜನತಾ ಪಾರ್ಟಿ ಪ್ರಸ್ತುತ ಭಾರತದಲ್ಲಿ ಕೇವಲ ಒಂದು ತಮಾಷೆಯ ಮೀಮ್ ಆಗಿ ಉಳಿಯದೆ, ಜೆನ್ ಝೀ (Gen Z – ಯುವ ಪೀಳಿಗೆ) ಯುವಕರ ಅತ್ಯಂತ ಶಕ್ತಿಶಾಲಿ ಡಿಜಿಟಲ್ ಪ್ರತಿಭಟನೆಯಾಗಿ ಮಾರ್ಪಡುತ್ತಿದೆ. ಕೇವಲ ಮೇ 16, 2026 ರಂದು ಆರಂಭವಾದ ಈ ಆನ್‌ಲೈನ್ ಮೂವ್‌ಮೆಂಟ್, ಕೆಲವೇ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ದೇಶದ ಯುವಜನತೆಯ ಅಸಮಾಧಾನ ಮತ್ತು ಆಕ್ರೋಶವನ್ನು ಹೊರಹಾಕುವ ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ.

ಆಮ್ ಆದ್ಮಿ ಪಕ್ಷದ ಬೆಂಬಲ
ಆಮ್ ಆದ್ಮಿ ಪಕ್ಷದ ಮಾಜಿ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡಿದ್ದ ಅಭಿಜೀತ್ ದೀಪ್ಕೆ ಆರಂಭಿಸಿದ ಈ ‘ಕಾಕ್ರೋಚ್ ಜನತಾ ಪಾರ್ಟಿ’, ಜೆನ್-ಝೀ ಯುವಕರಿಗೆ ಕನೆಕ್ಟ್ ಆಗುವ ಭಾಷೆಯಲ್ಲೇ ಮಾತನಾಡಲಾರಂಭಿಸಿತು. ಇತ್ತೀಚೆಗೆ ನಡೆದ NEET ಪರೀಕ್ಷೆಯ ಪೇಪರ್ ಲೀಕ್ ಹಗರಣದಿಂದ ಬೇಸತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಈ ಮೂವ್‌ಮೆಂಟ್‌ನೊಂದಿಗೆ ಕೈಜೋಡಿಸಿದ್ದಾರೆ. ದೇಶದಲ್ಲಿ ಪದವೀಧರರ ನಿರುದ್ಯೋಗ ದರ ಹೆಚ್ಚುತ್ತಿರುವುದರ ವಿರುದ್ಧ ಯುವಕರು ಈ ವೇದಿಕೆಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕೀರ್ತಿ ಆಜಾದ್, ನಾನು ಕಾಕ್ರೋಚ್ ಜನತಾ ಪಾರ್ಟಿಗೆ ಸೇರಲು ಬಯಸುತ್ತೇನೆ. ಇದಕ್ಕೆ ಅಗತ್ಯವಿರುವ ಅರ್ಹತೆಗಳೇನು? ಎಂದು ಪೋಸ್ಟ್ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:00 am, Thu, 21 May 26

Follow Us