Combat Helicopter: ಭಾರತೀಯ ವಾಯುಪಡೆಗೆ ಸ್ವದೇಶಿ ನಿರ್ಮಿತ 15 ಹೊಸ ಯುದ್ಧ ಹೆಲಿಕಾಪ್ಟರ್ ಸೇರ್ಪಡೆ

| Updated By: ಸುಷ್ಮಾ ಚಕ್ರೆ

Updated on: Oct 03, 2022 | 12:46 PM

ಈ ಯುದ್ಧ ಹೆಲಿಕಾಪ್ಟರ್​ಗಳು ಹೆಚ್​ಎಎಲ್​​ನಿಂದ ನಿರ್ಮಿತವಾಗಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್​​ಗಳ ಮೊದಲ ಬ್ಯಾಚ್ ಇಂದು ವಾಯುಪಡೆಗೆ ಸೇರ್ಪಡೆಯಾಗಿವೆ.

Combat Helicopter: ಭಾರತೀಯ ವಾಯುಪಡೆಗೆ ಸ್ವದೇಶಿ ನಿರ್ಮಿತ 15 ಹೊಸ ಯುದ್ಧ ಹೆಲಿಕಾಪ್ಟರ್ ಸೇರ್ಪಡೆ
ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಲಘು ಯುದ್ಧ ವಿಮಾನಗಳು
Follow us on

ಜೋಧ್​ಪುರ: ಭಾರತೀಯ ವಾಯುಪಡೆಗೆ (Indian Air Force) 15 ಹೊಸ ಯುದ್ಧ ಹೆಲಿಕಾಪ್ಟರ್​​ಗಳು ಸೇರ್ಪಡೆಯಾಗಿವೆ. ಜೋಧ್​ಪುರದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ (Minister Rajnath Singh) ಅವರ ಸಮ್ಮುಖದಲ್ಲಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿರುವ ಈ ಯುದ್ಧ ಹೆಲಿಕಾಪ್ಟರ್​ಗಳು (Combat Helicopter) ಸೇರ್ಪಡೆಯಾಗಿವೆ. ಈ ಯುದ್ಧ ಹೆಲಿಕಾಪ್ಟರ್​ಗಳು ಹೆಚ್​ಎಎಲ್​​ನಿಂದ (HAL) ನಿರ್ಮಿತವಾಗಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್​​ಗಳ ಮೊದಲ ಬ್ಯಾಚ್ ಇಂದು ವಾಯುಪಡೆಗೆ ಸೇರ್ಪಡೆಯಾಗಿವೆ.

5.8 ಟನ್ ತೂಕದ ಅವಳಿ ಎಂಜಿನ್ ಹೆಲಿಕಾಪ್ಟರ್ ಈಗಾಗಲೇ ವಿವಿಧ ಶಸ್ತ್ರಾಸ್ತ್ರಗಳ ಗುಂಡಿನ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಕ್ಯಾಬಿನೆಟ್ ಸಮಿತಿ (ಸಿಸಿಎಸ್) 3,887 ಕೋಟಿ ರೂ. ವೆಚ್ಚದಲ್ಲಿ 15 ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸೀಮಿತ ಸರಣಿ ಉತ್ಪಾದನೆ (ಎಲ್‌ಎಸ್‌ಪಿ) ಎಲ್‌ಸಿಎಚ್ ಖರೀದಿಗೆ ಅನುಮೋದನೆ ನೀಡಿತ್ತು. 10 ಹೆಲಿಕಾಪ್ಟರ್‌ಗಳನ್ನು ಐಎಎಫ್‌ಗೆ ಮತ್ತು 5 ಭಾರತೀಯ ಸೇನೆಗೆ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.

LCH ಲಘು ಹೆಲಿಕಾಪ್ಟರ್ ಶಸ್ತ್ರಸಜ್ಜಿತ ರಕ್ಷಣಾ ವ್ಯವಸ್ಥೆಗಳು, ರಾತ್ರಿ ವೇಳೆ ದಾಳಿ ನಡೆಸುವ ಸಾಮರ್ಥ್ಯ, ಯೋಗ್ಯ ಲ್ಯಾಂಡಿಂಗ್ ಗೇರ್ ಅನ್ನು ಹೊಂದಿದೆ. ಐಎಎಫ್ ಮತ್ತು ಭಾರತೀಯ ಸೇನೆಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸಲು ಇದು ಪ್ರಬಲ ವೇದಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರು ಟ್ರಾಫಿಕ್​ನಿಂದ ಮುಕ್ತಿ ಪಡೆಯಲು ಹೆಲಿಕಾಪ್ಟರ್ ಸೇವೆ, ಎಲ್ಲೆಲ್ಲೆ ಲಭ್ಯ, ದರ ಎಷ್ಟು?

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತಿಯಲ್ಲಿ ವಾಯುಪಡೆಯಲ್ಲಿ ಇಂದು ಮೊದಲ ಮೇಡ್ ಇನ್ ಇಂಡಿಯಾ ಲಘು ಯುದ್ಧ ಹೆಲಿಕಾಪ್ಟರ್‌ಗಳ ಸೇರ್ಪಡೆಗೆ ಭಾರತ ಸಾಕ್ಷಿಯಾಗಿದೆ. ಇದು ಐಎಎಫ್‌ನ ಯುದ್ಧ ಪರಾಕ್ರಮಕ್ಕೆ ದೊಡ್ಡ ವರ್ಧಕ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಆತ್ಮ ನಿರ್ಭರ್ ಭಾರತ್ ಅಭಿಯಾನ ಅಥವಾ ಮೇಕ್-ಇನ್-ಇಂಡಿಯಾ ಯೋಜನೆಯ ಅಡಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತವು ಹೆಚ್ಚಿನ ಗಮನಹರಿಸುತ್ತಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: Russia- Ukraine War: ಯುದ್ಧದಿಂದ ತಪ್ಪಿಸಿಕೊಳ್ಳಲು ಕೈ ಕಾಲು ಮುರಿದುಕೊಳ್ಳಲು ಮುಂದಾಗುತ್ತಿರುವ ಯುವಕರು, ಗಡಿ ತೊರೆಯುತ್ತಿರುವ ಜನರು

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಇತರ ಹಿರಿಯ ಮಿಲಿಟರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜೋಧ್‌ಪುರ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಸಮಾರಂಭದಲ್ಲಿ 4 ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುವ ಫ್ಲೀಟ್ ಅನ್ನು ಐಎಎಫ್‌ಗೆ ಸೇರ್ಪಡೆಗೊಳಿಸಲಾಯಿತು.

ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಮಹತ್ವದ ಸಂದರ್ಭ ಇದಾಗಿದೆ ಎಂದು ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ. ಎತ್ತರದ ಪ್ರದೇಶಗಳಲ್ಲಿ ಶತ್ರುಗಳ ಕಾಲಾಳುಪಡೆ, ಟ್ಯಾಂಕ್‌ಗಳು, ಬಂಕರ್‌ಗಳು, ಡ್ರೋನ್‌ಗಳನ್ನು ಹೊಡೆಯಲು LCH ಪರಿಣಾಮಕಾರಿಯಾಗಿರುತ್ತದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ