ಕೋಲ್ಕತ್ತಾದ ದುರ್ಗಾ ಪೂಜೆ ಪೆಂಡಾಲ್​​ನಲ್ಲಿ ಮಹಿಷಾಸುರ ಬದಲು ಗಾಂಧೀಜಿಯನ್ನು ಹೋಲುವ ವಿಗ್ರಹ

ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಜಕೀಯ ಪಕ್ಷಗಳು ಕೂಡ ಗಾಂಧಿಯನ್ನು 'ಮಹಿಷಾಸುರ' ಎಂದು ಬಿಂಬಿಸಿದ್ದನ್ನು  ಟೀಕಿಸಿವೆ.

ಕೋಲ್ಕತ್ತಾದ ದುರ್ಗಾ ಪೂಜೆ ಪೆಂಡಾಲ್​​ನಲ್ಲಿ ಮಹಿಷಾಸುರ ಬದಲು ಗಾಂಧೀಜಿಯನ್ನು ಹೋಲುವ ವಿಗ್ರಹ
ದುರ್ಗಾ ಪೆಂಡಾಲ್​​ನಲ್ಲಿ ಕಂಡ ಗಾಂಧಿ (ಎರಡನೇ ಚಿತ್ರ) ಗಾಂಧಿಯಂತೆ ಕಾಣುವ ವಿಗ್ರಹವನ್ನು ಬದಲಿಸಿರುವುದು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 03, 2022 | 2:16 PM

ಕೋಲ್ಕತ್ತಾ: ಇಲ್ಲಿನ ದುರ್ಗಾ ಪೂಜೆ ಪೆಂಡಾಲ್​ವೊಂದರಲ್ಲಿ (Durga Puja Pandal) ದುರ್ಗಾಮಾತೆಯ ಬಳಿ ಮಹಿಷಾಸುರನ (Mahisasur) ಬದಲು ಗಾಂಧೀಜಿಯನ್ನು (Mahatma Gandhi) ಹೋಲುವ ವಿಗ್ರಹ ಇಟ್ಟಿದ್ದು ವಿವಾದವಾಗಿದೆ. ನೈಋತ್ಯ ಕೋಲ್ಕತ್ತಾದ ರೂಬಿ ಕ್ರಾಸಿಂಗ್ ಬಳಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಆಯೋಜಿಸಿದ ದುರ್ಗಾ ಪೂಜೆಯಲ್ಲಿ ಮಹಿಷಾಸುರನ ಬದಲಿಗೆ ಗಾಂಧೀಜಿ ವಿಗ್ರಹವಿರಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಆದಾಗ್ಯೂ, ಈ ರೀತಿ ಹೋಲಿಕೆ ಕಂಡುಬಂದಿರುವುದು ಕಾಕತಾಳೀಯ ಎಂದು ಹೇಳಿದ್ದಾರೆ. ಪುರಾಣದ ಪ್ರಕಾರ, ದುರ್ಗಾದೇವಿ ಮಹಿಷಾಸುರನನ್ನು ಕೊಂದು ದುಷ್ಟ ಶಕ್ತಿಯನ್ನು ನಿಗ್ರಹ ಮಾಡುತ್ತಾಳೆ. ಇಲ್ಲಿ ಪೂಜಿಸಲ್ಪಟ್ಟ ದುರ್ಗಾ ವಿಗ್ರಹವು ಆರಂಭದಲ್ಲಿ ಮಹಿಷಾಸುರನನ್ನು ಹೊಂದಿದ್ದು, ಅವರ ಮುಖವು ಮಹಾತ್ಮ ಗಾಂಧಿಯವರ ಮುಖವನ್ನು ಹೋಲುತ್ತದೆ. ಸಾಮ್ಯತೆಗಳು ಕೇವಲ ಕಾಕತಾಳೀಯವಾಗಿದೆ. ಅದರ ಫೋಟೋಗಳು ವೈರಲ್ ಆದ ನಂತರ, ಪೋಲೀಸ್ ತಂಡವು ಪೆಂಡಾಲ್ ಗೆ ಭೇಟಿ ನೀಡಿ ಮುಖವನ್ನು ಬದಲಾಯಿಸುವಂತೆ ಹೇಳಿದೆ ಎಂದ ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ .

ಈ ಹಿಂದೆ ಪತ್ರಕರ್ತರೊಬ್ಬರು ಕೊಲ್ಕತ್ತಾ ಪೊಲೀಸರನ್ನು ಟ್ಯಾಗ್ ಮಾಡಿ ದುರ್ಗಾ ವಿಗ್ರಹದ ಛಾಯಾಚಿತ್ರವನ್ನು ಟ್ವೀಟ್ ಮಾಡಿದ್ದರು. ಹಬ್ಬದ ಸಮಯದಲ್ಲಿ ಉದ್ವಿಗ್ನತೆ ಉಂಟಾಗಬಹುದು ಎಂದು ನನ್ನಲ್ಲಿ ಪೊಲೀಸರು ಪೋಸ್ಟ್ ಅಳಿಸುವಂತೆ ಹೇಳಿದ್ದಾರೆ ಎಂದು ಅವರು ಆ ಪೋಸ್ಟ್ ಡಿಲೀಟ್ ಮಾಡಿದ್ದರು. ಹಬ್ಬದ ಹೊತ್ತಲ್ಲಿ ಗಲಭೆಗೆ ಕಾರಣವಾಗಬಹುದು ಎಂದು ಕೊಲ್ಕತ್ತಾ ಪೊಲೀಸರು ಹೇಳಿರುವುದರಿಂದ, ಜವಾಬ್ದಾರಿಯುತ ನಾಗರಿಕನಾಗಿ ನಾನು ಪೋಸ್ಟ್ ಅಳಿಸಿದ್ದೇನೆ ಎಂದು ಆಲ್ಟ್ ನ್ಯೂಸ್ ಹಿರಿಯ ಸಂಪಾದಕ ಇಂದ್ರದೀಪ್ ಭಟ್ಟಾಚಾರ್ಯ ಹೇಳಿದ್ದಾರೆ.

ಈ ಸಂಘಟನೆಯು ಯಾರ ಭಾವನೆಗಳಿಗೂ ಧಕ್ಕೆ ತರಲು ಉದ್ದೇಶಿಸಿಲ್ಲ ಎಂದು  ಗೋಸ್ವಾಮಿ ಹೇಳಿದ್ದಾರೆ. ಪೊಲೀಸರು ಅದನ್ನು ಬದಲಾಯಿಸಲು ಕೇಳಿದರು. ನಾವು ಮಹಿಷಾಸುರನ ವಿಗ್ರಹಕ್ಕೆ ಮೀಸೆ ಮತ್ತು ಕೂದಲು ಹಾಕಿದ್ದೇವೆ” ಎಂದು ಅವರು ಹೇಳಿದರು. ಈ ಕ್ರಮಕ್ಕೆ ವಿವಿಧ ವಲಯಗಳಿಂದ ಖಂಡನೆ ವ್ಯಕ್ತವಾಗಿತ್ತು.

ಅಖಿಲ ಭಾರತೀಯ ಹಿಂದೂ ಮಹಾಸಭಾ ಮಾಡಿದ್ದನ್ನು ನಾವು ಬೆಂಬಲಿಸುವುದಿಲ್ಲ. ನಾವು ಅದನ್ನು ಖಂಡಿಸುತ್ತೇವೆ. ನಮಗೂ ಗಾಂಧೀಜಿಯವರ ಅಭಿಪ್ರಾಯಗಳೊಂದಿಗೆ ಭಿನ್ನಾಭಿಪ್ರಾಯಗಳಿವೆ, ಆದರೆ ಅದರ ವಿರುದ್ಧ ಪ್ರತಿಭಟಿಸಲು ಇದು ಒಂದು ಮಾರ್ಗವಲ್ಲ ಎಂದು ಬಂಗಿಯ ಪರಿಷತ್ತು ಹಿಂದೂ ಮಹಾಸಭಾದ ಅಧ್ಯಕ್ಷ ಸಂದೀಪ್ ಮುಖರ್ಜಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಜಕೀಯ ಪಕ್ಷಗಳು ಕೂಡ ಗಾಂಧಿಯನ್ನು ‘ಮಹಿಷಾಸುರ’ ಎಂದು ಬಿಂಬಿಸಿದ್ದನ್ನು  ಟೀಕಿಸಿವೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ರಾಜ್ಯ ವಕ್ತಾರ ಕುನಾಲ್ ಘೋಷ್, ಇದನ್ನು ನಿಜವಾಗಿಯೂ ಮಾಡಿದ್ದರೆ, ಅದು ಅವಮಾನ ಅಲ್ಲದೆ ಮತ್ತೇನಲ್ಲ.

“ಇದು ರಾಷ್ಟ್ರಪಿತನಿಗೆ ಮಾಡಿದ ಅವಮಾನ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಅವಮಾನ. ಇಂತಹ ಅವಮಾನದ ಬಗ್ಗೆ ಬಿಜೆಪಿ ಏನು ಹೇಳುತ್ತದೆ? ಗಾಂಧೀಜಿಯ ಹಂತಕ ಯಾವ ಸೈದ್ಧಾಂತಿಕ ಶಿಬಿರಕ್ಕೆ ಸೇರಿದವನು ಎಂದು ನಮಗೆ ತಿಳಿದಿದೆ” ಎಂದು ಘೋಷ್ ಹೇಳಿದರು.

ರಾಜ್ಯ ಬಿಜೆಪಿ ಕೂಡ ಇಂತಹ ಪ್ರಾತಿನಿಧ್ಯವನ್ನು ಟೀಕಿಸಿದೆ. “ಇಂತಹ ಕ್ರಮ ಕೈಗೊಂಡಿದ್ದರೆ ಅದು ದುರದೃಷ್ಟಕರ, ನಾವು ಅದನ್ನು ಖಂಡಿಸುತ್ತೇವೆ. ಇದು ಕಳಪೆ ಅಭಿರುಚಿಯಾಗಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿ ವರ್ಷ, ಪೂಜಾ ಸಂಘಟಕರು ಒಂದು ಥೀಮ್ ಅನ್ನು ಆಯ್ಕೆ ಮಾಡುತ್ತಾರೆ, ಮುಖ್ಯವಾಗಿ ಸಾಮಾಜಿಕ ಸಮಸ್ಯೆಗಳು ಮತ್ತು ಅದನ್ನು ಚಿತ್ರಿಸಲು ತಮ್ಮ ಪಂಗಡಗಳು, ವಿಗ್ರಹಗಳು ಮತ್ತು ಬೆಳಕಿನ ವ್ಯವಸ್ಥೆಗಳನ್ನು ಬಳಸುತ್ತಾರೆ. ಅನೇಕ ಬಾರಿ, ಸಾಂಪ್ರದಾಯಿಕ ಮಹಿಸಾಸುರನನ್ನು ಸಾಮಾಜಿಕ ಅನಿಷ್ಟವನ್ನು ಪ್ರತಿನಿಧಿಸುವ ಯಾವುದನ್ನಾದರೂ  ರೂಪವನ್ನು ಬಳಸಲಾಗುತ್ತದೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ