ರಾಜೀವ್ ಗಾಂಧಿ ಖೇಲ್ ರತ್ನ ಹೆಸರು ಬದಲಿಸಿದ್ದಕ್ಕೆ ಕಾಂಗ್ರೆಸ್ ಟೀಕೆ: ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ದಿಗ್ವಿಜಯ್ ಸಿಂಗ್
ಕ್ರೀಡಾ ಸಾಧಕರಿಗೆ ನೀಡುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.
ದೆಹಲಿ: ಕ್ರೀಡಾ ಸಾಧಕರಿಗೆ ನೀಡುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಕುರಿತು ಟ್ವಿಟರ್ನಲ್ಲಿ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ‘ಅಹಮದಾಬಾದ್ನ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣದ ಹೆಸರು ಬದಲಿಸಿದಂತೆ ಖೇಲ್ ರತ್ನ ಹೆಸರನ್ನೂ ಮೋದಿ ತಮ್ಮ ಹೆಸರು ಕೊಟ್ಟುಕೊಳ್ಳುತ್ತಾರೆ ಎಂದುಕೊಂಡಿದ್ದೆ’ ಎಂದು ವ್ಯಂಗ್ಯವಾಡಿದ್ದಾರೆ.
ಮೊದಲಿಗೆ ಅಹಮದಾಬಾದ್ನ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿತ್ತು. ಅವರು ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೂ ತಮ್ಮ ಹೆಸರು ಕೊಟ್ಟುಕೊಳ್ಳುತ್ತಾರೆ ಎಂದುಕೊಂಡಿದ್ದೆ. ಅದಕ್ಕೆ ಮೇಜರ್ ಧ್ಯಾನ್ ಚಂದ್ ಹೆಸರು ನೀಡಿದ್ದು ತಿಳಿದು ಅಚ್ಚರಿಯಾಯಿತು ಎಂದು ದಿಗ್ವಿಜಯ ಸಿಂಗ್ ಟ್ವೀಟ್ನಲ್ಲಿ ಹೇಳಿದ್ದಾರೆ.
Rajiv Gandhi Khel Ratna Award renamed Major Dhyan Chand Khel Ratna Award, announces PM https://t.co/Md1ADCEduG -via @inshorts
पहले अहमदाबाद के सरदार पटेल क्रिकेट स्टेडियम का नाम बदल कर नरेंद्र मोदी स्टेडियम किया। मुझे आश्चर्य हुआ जब उन्होंने मेजर ध्यानचंद जी के नाम से किया।
— digvijaya singh (@digvijaya_28) August 6, 2021
ಮೋದಿ ವಿರುದ್ಧ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಕಾಂಗ್ರೆಸ್ ನಾಯಕರು ದನಿಯೆತ್ತಿದ್ದಾರೆ. ಲೋಕಸಭೆ ಸದಸ್ಯ ಗೌರವ್ ಗೊಗೊಯ್ ಸಹ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಮತ್ತೆ ಅದರ ಮೂಲ ಹೆಸರು ಇರಿಸಬೇಕು ಎಂದು ಆಗ್ರಹಿಸಿದ್ದಾರೆ. ಮೇಜರ್ ಧ್ಯಾನ್ ಚಂದ್ ಹಲವು ಯುವ ಭಾರತೀಯರಿಗೆ ಸ್ಫೂರ್ತಿ ನೀಡಿದ್ದರು. ನಮ್ಮ ಈಗಿನ ಒಲಿಂಪಿಕ್ ತಂಡವೂ ಯುವ ಜನರನ್ನು ಹಾಕಿಯತ್ತ ಸೆಳೆಯಲಿದೆ. ಮೇಜರ್ ಧ್ಯಾನ್ ಚಂದ್ಗೆ ಸರ್ಕಾರವು ಭಾರತರತ್ನ ಪುರಸ್ಕಾರ ನೀಡಲಿದೆ ಎಂದು ನಾನು ಆಶಿಸುತ್ತೇನೆ ಎಂದು ಗೊಗೊಯ್ ಟ್ವಿಟರ್ನಲ್ಲಿ ಹೇಳಿದ್ದಾರೆ.
Major Dhyanchand has inspired many young Indians. Our current Olympic teams will continue bringing the necessary attention to hockey. I hope the Government will also award the Bharat Ratna to Major Dhyanchand and rename Narendra Modi stadium to its original Sardar Patel Stadium.
— Gaurav Gogoi (@GauravGogoiAsm) August 6, 2021
ಕ್ರೀಡಾ ಸಾಧಕರಿಗೆ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಪುರಸ್ಕಾರ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಘೋಷಿಸಿದ್ದರು. ಹಲವಾರು ಜನರು ಖೇಲ್ ರತ್ನ ಪುರಸ್ಕಾರಕ್ಕೆ ಮೇಜರ್ ಧ್ಯಾನ್ ಚಂದ್ ಹೆಸರು ಇರಿಸುವಂತೆ ಕೋರಿದ್ದ ಬಗ್ಗೆ ಪ್ರಸ್ತಾಪಿಸಿದ್ದ ಮೋದಿ, ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವನ್ನು ಧ್ಯಾನ್ ಚಂದ್ ಹೆಸರಿನಲ್ಲಿ ನೀಡುವುದು ಖುಷಿಯ ವಿಚಾರ ಎಂದು ಹೇಳಿದ್ದರು.
ಟೊಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡವು 4ನೇ ಸ್ಥಾನ ಪಡೆದ ಕೆಲವೇ ಗಂಟೆಗಳ ನಂತರ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. 2016ರಲ್ಲಿ ಚಿನ್ನದ ಪದಕ ಪಡೆದಿದ್ದ ಇಂಗ್ಲೆಂಡ್ ತಂಡದ ಎದುರು ಭಾರತದ ಮಹಿಳಾ ಹಾಕಿತಂಡವು 4-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಒಂದು ವೇಳೆ ಭಾರತದ ಮಹಿಳಾ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರೆ, ಭಾರತ ಮಹಿಳಾ ತಂಡದ ಮೊದಲ ಒಲಿಂಪಿಕ್ ಪದ ಎನಿಸುತ್ತಿತ್ತು. ಭಾರತದ ಪುರುಷರ ತಂಡವು ಜರ್ಮನಿ ತಂಡವನ್ನು 5-4 ಅಂತರದಲ್ಲಿ ಮಣಿಸುವ ಮೂಲಕ ಕಳೆದ 41 ವರ್ಷಗಳಲ್ಲಿ ಮೊದಲ ಬಾರಿಗೆ ಪದಕ ಗಳಿಸಿತು.
1991-92ರಲ್ಲಿ ಖೇಲ್ ರತ್ನ ಪುರಸ್ಕಾರವನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ಆರಂಭಿಸಲಾಗಿತ್ತು. ಅಹಮದಾಬಾದ್ನಲ್ಲಿ ಆಧುನೀಕರಣಗೊಂಡ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರನ್ನು ಇರಿಸಲಾಗಿದೆ. ಕಳೆದ ಫೆಬ್ರುವರಿಯಲ್ಲಿ ಈ ಕ್ರೀಡಾಂಗಣವನ್ನು ಉದ್ಘಾಟಿಸಲಾಗಿತ್ತು. ಈ ಕ್ರೀಡಾಂಗಣದಲ್ಲಿ 1,30,000 ಜನರು ಕುಳಿತುಕೊಳ್ಳಬಹುದಾಗಿದೆ. ಇದು ಆಸ್ಟ್ರೇಲಿಯಾದ ಮೆಲ್ಬೊರ್ನ್ ಕ್ರಿಕೆಟ್ ಕ್ರೀಡಾಂಗಣಕ್ಕಿಂತಲೂ ದೊಡ್ಡದು.
(Congress condemns Narendra Modis decision to rename Rajiv Gandhi Khel Ratna Award after Major Dhyan Chand)