ದೇಶದ್ರೋಹಿಗಳನ್ನು ಇತಿಹಾಸ ಎಂದಿಗೂ ಕ್ಷಮಿಸದು; ಸಿಂಧಿಯಾ ವಿರುದ್ಧ ದಿಗ್ವಿಜಯ್ ಸಿಂಗ್ ಟೀಕೆ

ಸಿಂಧಿಯಾ ಕಾಂಗ್ರೆಸ್‌ಗೆ ದ್ರೋಹ ಮಾಡದಿದ್ದರೆ ಇಂದಿಗೂ ಕಮಲ್‌ನಾಥ್ ಸರ್ಕಾರ ಉಳಿಯುತ್ತಿತ್ತು, ರೈತರ ಸಾಲ ಮನ್ನಾ ಆಗುತ್ತಿತ್ತು. ದೇಶದ್ರೋಹಿಯನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ದೇಶದ್ರೋಹಿಗಳನ್ನು ಇತಿಹಾಸ ಎಂದಿಗೂ ಕ್ಷಮಿಸದು; ಸಿಂಧಿಯಾ ವಿರುದ್ಧ ದಿಗ್ವಿಜಯ್ ಸಿಂಗ್ ಟೀಕೆ
ದಿಗ್ವಿಜಯ್ ಸಿಂಗ್- ಜ್ಯೋತಿರಾದಿತ್ಯ ಸಿಂಧಿಯಾ

ನವದೆಹಲಿ: ಕಾಂಗ್ರೆಸ್​ನಲ್ಲಿ ಮತ್ತೆ ಹಳೆಯ ಜಗಳ ಭುಗಿಲೆದ್ದಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ‘ಮಹಾರಾಜ್’ ಸಿಂಧಿಯಾ ಅವರು ಬಿಜೆಪಿಗೆ ಹಾರದಿದ್ದರೆ ಕಮಲನಾಥ್ (Kamal Nath) ಸರ್ಕಾರ ಉಳಿಯುತ್ತಿತ್ತು. ಸಿಂಧಿಯಾ ಅವರಂತಹ ದೇಶದ್ರೋಹಿಗಳನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ. ಸಿಂಧಿಯಾ ಅವರನ್ನು ಮುಂದಿನ ಪೀಳಿಗೆಗಳು ಕೂಡ ಕ್ಷಮಿಸುವುದಿಲ್ಲ. ಸಿಂಧಿಯಾ ಕುಟುಂಬವು ಹಿಂದೂಗಳನ್ನು ಬೆಂಬಲಿಸಿದ್ದರೆ ಅಹ್ಮದ್ ಶಾ ಪಾಣಿಪತ್ ಕದನದಲ್ಲಿ ಸೋಲುತ್ತಿದ್ದರು ಎಂದು ಅವರು ಕಿಡಿ ಕಾರಿದ್ದಾರೆ.

ಮಹಾರಾಜ್ ಸಿಂಧಿಯಾ ಕಾಂಗ್ರೆಸ್‌ಗೆ ದ್ರೋಹ ಮಾಡದಿದ್ದರೆ ಇಂದಿಗೂ ಕಮಲ್‌ನಾಥ್ ಸರ್ಕಾರ ಉಳಿಯುತ್ತಿತ್ತು, ರೈತರ ಸಾಲ ಮನ್ನಾ ಆಗುತ್ತಿತ್ತು. ದೇಶದ್ರೋಹಿಯನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ. ದ್ರೋಹ ಮಾಡಿದವನನ್ನು ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ. ಇಂದಿಗೂ, ಝಾನ್ಸಿಯ ರಾಣಿಯ ವಿಷಯಕ್ಕೆ ಬಂದರೆ ಅದು ಸಿಂಧಿಯಾ ಕುಟುಂಬದ ದ್ರೋಹಕ್ಕೆ ಬರುತ್ತದೆ. ಪಾಣಿಪತ್ ಕದನದಲ್ಲಿ ಸಿಂಧಿಯಾ ಕುಟುಂಬವು ಹಿಂದೂ ರಾಜರನ್ನು ಬೆಂಬಲಿಸಿದ್ದರೆ, ಅಹ್ಮದ್ ಶಾ ಪಾಣಿಪತ್ ಯುದ್ಧದಲ್ಲಿ ಸೋಲನುಭವಿಸುತ್ತಿದ್ದರು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ದಿಗ್ವಿಜಯ ಸಿಂಗ್ ಅವರು ಒಸಾಮಾ ಬಿನ್ ಲಾಡೆನ್ ಅವರನ್ನು ಒಸಾಮಾ ಜೀ ಎಂದು ಕರೆದಿದ್ದರು. ಅವರ ಮಟ್ಟಕ್ಕೆ ಇಳಿಯಲು ನನಗೆ ಇಷ್ಟವಿಲ್ಲ. ಯಾರು ದೇಶದ್ರೋಹಿ ಎಂಬುದನ್ನು ಇತಿಹಾಸವು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಐತಿಹಾಸಿಕ ದಾಖಲೆಗಳ ಪ್ರಕಾರ, ಸಿಂಧಿಯಾ ಕುಟುಂಬವು 1857 ರ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರೊಂದಿಗೆ ಕೈಜೋಡಿಸಿ, ರಾಣಿ ಲಕ್ಷ್ಮೀಬಾಯಿಗೆ ದ್ರೋಹ ಬಗೆದಿತ್ತು.

ನಾನು ದಿಗ್ವಿಜಯ ಸಿಂಗ್ ಅವರ ಮಟ್ಟಕ್ಕೆ ಇಳಿಯಲು ಬಯಸುವುದಿಲ್ಲ. ಇವರು ಒಸಾಮಾ ಬಿನ್ ಲಾಡೆನ್​ಗೆ ‘ಒಸಾಮಾ ಜೀ’ ಎಂದು ಕರೆದಿದ್ದರು. ತಾವು ಅಧಿಕಾರಕ್ಕೆ ಬಂದಾಗ 370ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳಿದ್ದರು. ಯಾರು ದೇಶದ್ರೋಹಿ, ಯಾರು ಅಲ್ಲ ಎಂಬುದನ್ನು ಸಾರ್ವಜನಿಕರು ನಿರ್ಧರಿಸುತ್ತಾರೆ ಎಂದು ಸಿಂಧಿಯಾ ಹೇಳಿದ್ದಾರೆ.

ಇದನ್ನೂ ಓದಿ: ತಾವು ಧರಿಸಿದ್ದ ಮಾಸ್ಕ್​​ನ್ನೇ ತೆಗೆದು ಮಾಜಿ ಎಂಪಿಗೆ ತೊಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ; ‘ಇದೆಂತಾ ವರ್ತನೆ ಕೇಂದ್ರ ಸಚಿವರೇ’ ಎನ್ನುತ್ತಿದ್ದಾರೆ ಜನ !

ಕೇಂದ್ರಮಂತ್ರಿಯಾಗುತ್ತಿದ್ದಂತೆ ಮಧ್ಯಪ್ರದೇಶಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಿದ ಜ್ಯೋತಿರಾದಿತ್ಯ ಸಿಂಧಿಯಾ..!

Published On - 4:04 pm, Mon, 6 December 21

Click on your DTH Provider to Add TV9 Kannada