- Kannada News National ತಮಿಳುನಾಡಿನಲ್ಲಿ ರಾಹುಲ್ ಗಾಂಧಿ: ಕೇಂದ್ರದ ವಿರುದ್ಧ ಹರಿಹಾಯ್ದು, ರೈತಪರ ಘೋಷಣೆ ಮೊಳಗಿಸಿದ ಕೈ ನಾಯಕ
ತಮಿಳುನಾಡಿನಲ್ಲಿ ರಾಹುಲ್ ಗಾಂಧಿ: ಕೇಂದ್ರದ ವಿರುದ್ಧ ಹರಿಹಾಯ್ದು, ರೈತಪರ ಘೋಷಣೆ ಮೊಳಗಿಸಿದ ಕೈ ನಾಯಕ
ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ದಿನಗಳ ತಮಿಳುನಾಡು ಪ್ರವಾಸ ಕೈಗೊಂಡರು. ಕೇಂದ್ರದ ನೀತಿ, ಪ್ರಧಾನಿ ಮೋದಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.
Updated on:Apr 06, 2022 | 8:40 PM

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.

ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಕಾರ್ಯಕರ್ತರು, ತಮಿಳುನಾಡಿನ ಜನರು ಸ್ವಾಗತಿಸಿದರು. ಬಾಲಕಿಯೊಬ್ಬಳನ್ನು ರಾಹುಲ್ ಎತ್ತಿಕೊಂಡಿರುವ ದೃಶ್ಯ ಈ ಸಂದರ್ಭ ಕಂಡುಬಂತು.

ರಾಹುಲ್ ಗಾಂಧಿ ಧರಪುರಂನಲ್ಲಿ ಪ್ರಚಾರದ ವೇಳೆ, ಬಾಲಕಿಯೊಬ್ಬಳನ್ನು ತಮ್ಮ ಕಾರ್ ಮೇಲೆ ಹತ್ತಿಸಿಕೊಂಡು ಸಂಭ್ರಮಪಟ್ಟರು. ಈ ಸನ್ನಿವೇಶ ವಿಶೇಷವಾಗಿ ಜನರ ಮನಸೆಳೆಯಿತು.

ತಮಿಳುನಾಡಿನ ಧರಪುರಂನಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಾಲಕಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡರು

ಸೆಲ್ಫೀ ಕ್ಲಿಕ್ಕಿಸಿಕೊಂಡ ಬಳಿಕ ರಾಹುಲ್ ಗಾಂಧಿ ಹಾಗೂ ಬಾಲಕಿಯ ಮಂದಹಾಸ

ರಾಹುಲ್ ಗಾಂಧಿ ಮೂರು ದಿನಗಳ ತಮಿಳುನಾಡು ಪ್ರವಾಸದಲ್ಲಿ ಇದ್ದಾರೆ. ಮೂರನೇ ದಿನವಾದ ಇಂದು ರೈತರ ಜೊತೆ ಸಮಯ ಕಳೆದರು.

ರೈತರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದರು.

ಕೇಂಧ್ರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದರು. ಈ ಕಾಯ್ದೆಗಳು ಕೃಷಿಯನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಹೇಳಿದರು.

ತಮಿಳುನಾಡಿನ ಧರಪುರಂ ಹಾಗೂ ಡಿಂಡಿಗುಲ್ನಲ್ಲೂ ರಾಹುಲ್ ಗಾಂಧಿ ರೋಡ್ ಶೋ ನಡೆಸಿದರು. ಈ ಮೂಲಕ ಮೂರು ದಿನಗಳ ತಮಿಳುನಾಡು ಪ್ರವಾಸವನ್ನು ರಾಹುಲ್ ಗಾಂಧಿ ಇಂದು ಮುಕ್ತಾಯಗೊಳಿಸಿದರು.
Published On - 9:43 pm, Mon, 25 January 21




