Rahul Gandhi: ದೇಶದಲ್ಲಿ ಕಷ್ಟದ ಪರಿಸ್ಥಿತಿ ಉಂಟಾಗಲು ಯಾರು ಕಾರಣ ಎಂಬುದು ಜನರಿಗೆ ಗೊತ್ತು; ರಾಹುಲ್ ಗಾಂಧಿ ಟ್ವೀಟ್
ಗಾಲ್ವಾನ್ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮತ್ತೆ ವಾಗ್ವಾದ ನಡೆಯುತ್ತಿದೆ ಎಂಬ ಮಾಧ್ಯಮಗಳ ವರದಿಯ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಗಾಂಧಿ ಈ ಟ್ವೀಟ್ ಮಾಡಿದ್ದಾರೆ.
ದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಟ್ವೀಟ್ ಮೂಲಕ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ, ಹಲವು ವಿಚಾರಗಳನ್ನಿಟ್ಟುಕೊಂಡು ಕಿಡಿಕಾರಿದ್ದಾರೆ. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ದರ, ಕೊರೊನಾ ಲಸಿಕೆ ಕೊರತೆ, ಚೀನಾ-ಭಾರತ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಬಿಕ್ಕಟ್ಟು, ರೈತರ ಹೋರಾಟಗಳಿಗೆಲ್ಲ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದ್ದಾರೆ. ಶತಮಾನಗಳಷ್ಟು ಸಮಯ ತೆಗೆದುಕೊಂಡು ಕಟ್ಟಲ್ಪಟ್ಟಿದ್ದೆಲ್ಲ ಸೆಕೆಂಡ್ಗಳಲ್ಲಿ ನಾಶವಾಗಿದೆ. ದೇಶಕ್ಕೆ ಇಂಥ ಕಷ್ಟದ ಸಮಯ ತಂದವರು ಯಾರು ಎಂಬುದು ಎಲ್ಲರಿಗೂ ಗೊತ್ತು ಎಂದು ಟ್ವೀಟ್ ಮಾಡಿದ್ದಾರೆ.
ಗಾಲ್ವಾನ್ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮತ್ತೆ ವಾಗ್ವಾದ ನಡೆಯುತ್ತಿದೆ ಎಂಬ ಮಾಧ್ಯಮಗಳ ವರದಿಯ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಜು.20ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಉಂಟಾಗಿ, 20 ಮಂದಿ ಭಾರತೀಯ ಯೋಧರು ಮೃತಪಟ್ಟಿದ್ದರು. ಆಗಿನಿಂದಲೂ ರಾಹುಲ್ ಗಾಂಧಿಯಾದಿಯಾಗಿ ಕಾಂಗ್ರೆಸ್ನ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದಾಗಿಯೂ ರಾಹುಲ್ ಗಾಂಧಿ ಅದಾಗಲೇ ತುಂಬ ಸಲ ಹೇಳಿದ್ದಾರೆ.
सदियों का बनाया पलों में मिटाया देश जानता है कौन ये कठिन दौर लाया।#VaccineShortage #LAC #Unemployment #PriceHike #PSU #Farmers #OnlyPR
— Rahul Gandhi (@RahulGandhi) July 15, 2021
ಇದನ್ನೂ ಓದಿ: ಲಿಯಾಂಡರ್ ಪೇಸ್ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್; ಮಾಜಿ ಬಾಯ್ಫ್ರೆಂಡ್ ಹೇಳಿದ್ದೇನು?
Congress leader Rahul Gandhi took a dig at the Central government Through Tweet