AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ: ಗೋವಾದಲ್ಲಿ ಮೀನುಗಾರರ ಎದುರು ರಾಹುಲ್​ ಗಾಂಧಿ ಮಾತು

ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯ ಬಗ್ಗೆಯೂ ರಾಹುಲ್​ ಗಾಂಧಿ ಕಿಡಿ ಕಾರಿದರು. ಬಿಜೆಪಿ ಸರ್ಕಾರವನ್ನು ದೂಷಿಸಿದ ಅವರು, ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಕಚ್ಚಾ ತೈಲದ ಬೆಲೆ ಯಾವತ್ತೂ ಇಷ್ಟೊಂದು ಏರಿಕೆಯಾಗಿರಲಿಲ್ಲ ಎಂದು ಹೇಳಿದರು.

ನಾನು ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ: ಗೋವಾದಲ್ಲಿ ಮೀನುಗಾರರ ಎದುರು ರಾಹುಲ್​ ಗಾಂಧಿ ಮಾತು
ಗೋವಾದಲ್ಲಿ ಮೀನುಗಾರರ ಭೇಟಿಗೆ ಆಗಮಿಸಿದ ರಾಹುಲ್​ ಗಾಂಧಿ
TV9 Web
| Edited By: |

Updated on:Oct 30, 2021 | 4:25 PM

Share

ಪಣಜಿ: ಬರುವ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾ (Goa Assembly Election 2022)ದಲ್ಲಿ ಕಾಂಗ್ರೆಸ್​ ಕೂಡ ಪ್ರಚಾರ ಶುರು ಮಾಡಿದೆ. ಇಂದು ಕೇರಳ ಸಂಸದ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (Rahul Gandhi) ಅಲ್ಲಿಗೆ ಭೇಟಿ ನೀಡಿ, ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್​  ಕೇವಲ ಹೊಣೆ ನಿಭಾಯಿಸುವುದಕ್ಕೋಸ್ಕರ ಮಾತ್ರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಿಲ್ಲ. ಅದರಲ್ಲಿ ಏನೇನು ಹೇಳುತ್ತದೆಯೋ ಅದನ್ನು ನಿಶ್ಚಿತವಾಗಿ, ಖಾತರಿಯಾಗಿಯೂ ನಡೆಸಿಕೊಡುತ್ತದೆ ಎಂದು ಭರವಸೆ ನೀಡಿದ್ದಾರೆ.  

ದಕ್ಷಿಣ ಗೋವಾದಲ್ಲಿ ಮೀನುಗಾರರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಬಿಜೆಪಿ ಜನರ ಮಧ್ಯೆ ದ್ವೇಷ ಹುಟ್ಟಿಸುತ್ತಿದೆ. ಸಮುದಾಯಗಳನ್ನು ಇಬ್ಭಾಗ ಮಾಡುತ್ತಿದೆ ಎಂದು ಆರೋಪಿಸಿದರು.  ಕಾಂಗ್ರೆಸ್​ ಪ್ರೀತಿಯನ್ನು ಪ್ರಸರಿಸುತ್ತದೆ. ಜನರಲ್ಲಿ ಏಕತೆ ಮೂಡಿಸುವಲ್ಲಿ ಮತ್ತು ಎಲ್ಲರನ್ನೂ ಒಟ್ಟಾಗಿ ಮುಂದೆ ಕರೆದುಕೊಂಡು ಹೋಗುವಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.

ನಾನು ಗೋವಾಕ್ಕೆ ಬಂದಿರುವುದು ನಿಮ್ಮ ಸಮಯ ವ್ಯರ್ಥ ಮಾಡಲು ಅಲ್ಲ. ಹಾಗೇ, ನನ್ನ ಸಮಯ ಹಾಳು ಮಾಡಿಕೊಳ್ಳಲೂ ಇಲ್ಲಿಗೆ ಬಂದಿಲ್ಲ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ಕೇವಲ ನಮ್ಮ ಬದ್ಧತೆಯಲ್ಲ. ಅದನ್ನು ನಿಶ್ಚಿತವಾಗಿಯೂ ನಡೆಸಿಕೊಡುತ್ತೇವೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನನಗೆ ತುಂಬ ಮುಖ್ಯ. ಉಳಿದ ನಾಯಕರಂತೆ ನಾನೂ ಸಹ ಇರಲು ಸಾಧ್ಯವಿಲ್ಲ. ನಾನೇನಾದರೂ ಹೇಳಿದ್ದೇನೆ ಅಂದರೆ ಅದನ್ನು ಮಾಡುತ್ತೇನೆ ಎಂದೇ ಅರ್ಥ ಎಂದು ರಾಹುಲ್ ಗಾಂಧಿ ಹೇಳಿದರು.

ಗೋವಾವವನ್ನು ಕಲ್ಲಿದ್ದಲು ಗಣಿಗಾರಿಕೆ  ಹಬ್ ಮಾಡಲು ಅವಕಾಶ ಕೊಡುವುದಿಲ್ಲ. ಅದಕ್ಕೆ ನೀವು ಸಹಕರಿಸಬೇಕು. ನಾನೀಗ ಹೇಳಿದ್ದನ್ನು ಮಾಡುತ್ತೇನೆ..ಇಲ್ಲದೆ ಇದ್ದರೆ ನಾನು ಮುಂದೆ ಇನ್ನೊಮ್ಮೆ ಬರುವಷ್ಟರಲ್ಲಿ ನೀವೆಲ್ಲ ನನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುತ್ತೀರಿ ಎಂದು ಹೇಳಿದರು. ಈ ಮೂಲಕ ನೈಋತ್ಯ ರೈಲ್ವೆ ಹಳಿಯನ್ನು ಡಬಲ್​ ಮಾಡುವ ಯೋಜನೆಯನ್ನು ವಿರೋಧಿಸುತ್ತಿರುವ ಅಲ್ಲಿನ ಮೀನುಗಾರರಿಗೆ ಬೆಂಬಲಕ್ಕೆ ನೀಡುವ ಭರವಸೆಯನ್ನು ರಾಹುಲ್ ಗಾಂಧಿ ಕೊಟ್ಟಿದ್ದಾರೆ. ಈ ಯೋಜನೆಯನ್ನು ಮೀನುಗಾರರು ತೀವ್ರವಾಗಿ ವಿರೋಧಿಸುತ್ತಿದ್ದು, ಪ್ರಸ್ತುತ ಯೋಜನೆಯಿಂದ ಗೋವಾವನ್ನು ಕಲ್ಲಿದ್ದಲು ಹಬ್​ ಆಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯಮಿಗಳಿಗಷ್ಟೇ ಲಾಭ ಇದೇ ವೇಳೆ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯ ಬಗ್ಗೆಯೂ ರಾಹುಲ್​ ಗಾಂಧಿ ಕಿಡಿ ಕಾರಿದರು. ಬಿಜೆಪಿ ಸರ್ಕಾರವನ್ನು ದೂಷಿಸಿದ ಅವರು, ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಕಚ್ಚಾ ತೈಲದ ಬೆಲೆ ಯಾವತ್ತೂ ಇಷ್ಟೊಂದು ಏರಿಕೆಯಾಗಿರಲಿಲ್ಲ. ಆದರೆ ಈಗ ಗಗನಕ್ಕೇರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಹೆಚ್ಚುತ್ತಲೆ ಇದೆ. ಈ ಮೂಲಕ ಜನರಿಂದ ಹಣವನ್ನು ಬಲವಂತವಾಗಿ ಸುಲಿಯುತ್ತಿದ್ದಾರೆ.  ಹೀಗೆ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯಿಂದ 4-5 ಉದ್ಯಮಿಗಳಿಗೆ ಲಾಭವಾಗುತ್ತಿದೆ ಬಿಟ್ಟರೆ ಇನ್ನೇನಿನಲ್ಲ ಎಂದು ವ್ಯಂಗ್ಯವಾಡಿದರು.

ಗೋವಾದಲ್ಲಿ 2022ರ ಫೆಬ್ರವರಿ-ಮಾರ್ಚ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಿರುವ ಬಿಜೆಪಿ ಸರ್ಕಾರವನ್ನು ಹೇಗಾದರೂ ಇಳಿಸಬೇಕು ಎಂಬ ಪ್ರಯತ್ನದಲ್ಲಿ ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ಸೇರಿ ಇತರ ಪ್ರತಿಪಕ್ಷಗಳು ಪ್ರಯತ್ನ ಮಾಡುತ್ತಿವೆ. ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಗೋವಾ ಪ್ರವಾಸದಲ್ಲಿದ್ದಾರೆ. ಅವರಿಂದು ಗೋವಾ ಫಾರ್ವರ್ಡ್​ ಪಾರ್ಟಿ ಅಧ್ಯಕ್ಷ ವಿಜಯ್​ ಸರ್​ದೇಸಾಯ್​​ರೊಂದಿಗೆ ಮಾತುಕತೆ ನಡೆಸಿ, ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಪ್ರಾಬಲ್ಯ ಸಾಧಿಸುವ ಮೂಲಕ ಬಿಜೆಪಿಯನ್ನು ಸೋಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Puneeth Rajkumar: ಪುನೀತ್ ಸಾವಿಗೆ ಕಂಬನಿ ಮಿಡಿದ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು

ಬಿಜೆಪಿ ಸೋಲಿಸೋಣ ಬನ್ನಿ; ಗೋವಾ ಫಾರ್ವರ್ಡ್​ ಪಾರ್ಟಿ ಅಧ್ಯಕ್ಷನಿಗೆ ಮಮತಾ ಬ್ಯಾನರ್ಜಿ ನೇರ ಆಮಂತ್ರಣ

Published On - 4:23 pm, Sat, 30 October 21