AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆಯಲ್ಲಿ NEET ಚರ್ಚೆಗೆ ಒತ್ತಾಯ; ರಾಹುಲ್ ಗಾಂಧಿಯ ಮೈಕ್ ಆಫ್ ಮಾಡಲಾಗಿದೆ: ಕಾಂಗ್ರೆಸ್ ಆರೋಪ

ಶುಕ್ರವಾರ ಬೆಳಿಗ್ಗೆ, ಇತರ ವ್ಯವಹಾರಗಳನ್ನು ಅಮಾನತುಗೊಳಿಸುವಂತೆ ಕೋರಿ ಉಭಯ ಸದನಗಳಲ್ಲಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿತು. ಅವರು NEET ಸಮಸ್ಯೆಗಳ ಬಗ್ಗೆ ತಕ್ಷಣದ ಚರ್ಚೆಯನ್ನು ಬಯಸಿದ್ದರು. ಆದರೆ ಸ್ಪೀಕರ್ ಓಂ ಬಿರ್ಲಾ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.

ಲೋಕಸಭೆಯಲ್ಲಿ NEET ಚರ್ಚೆಗೆ ಒತ್ತಾಯ; ರಾಹುಲ್ ಗಾಂಧಿಯ ಮೈಕ್ ಆಫ್ ಮಾಡಲಾಗಿದೆ: ಕಾಂಗ್ರೆಸ್ ಆರೋಪ
ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on: Jun 28, 2024 | 3:19 PM

Share

ದೆಹಲಿ ಜೂನ್ 28: ನೀಟ್ ಪ್ರಶ್ನೆ ಪತ್ರಿಕೆ (NEET Paper Leak) ಸೋರಿಕೆ ಪ್ರಕರಣ ಬಗ್ಗೆ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ (INDIA) ಒತ್ತಾಯಿಸಿದ್ದು, ಲೋಕಸಭೆಯಲ್ಲಿ (Loksabha) ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಪ್ರತಿಪಕ್ಷಗಳ ಗದ್ದಲದ ನಡುವೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಏತನ್ಮಧ್ಯೆ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮೈಕ್ ಸ್ವಿಚ್ ಆಫ್ ಆದ ನಂತರ ಗದ್ದಲ ಉಂಟಾಯಿತು ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿದ್ದಾರೆ.

”ದೇಶದಲ್ಲಿ ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಯುವಕರ ಭವಿಷ್ಯ ಹಾಳಾಗಿದೆ, ಹರಿಯಾಣದಲ್ಲಿ ಗರಿಷ್ಠ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಕಂಡು ಬಂದಿವೆ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ನಾವು ಈ ಬಗ್ಗೆ ಚರ್ಚೆಯನ್ನು ತಂದಿದ್ದೇವೆ. ಅದನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ವಿರೋಧ ಪಕ್ಷದ ನಾಯಕರ ಮೈಕ್ ಅನ್ನು ಸ್ವಿಚ್ ಆಫ್ ಮಾಡಿದರೆ, ಆಗ ಇತರ ವಿರೋಧ ಪಕ್ಷದ ಸಂಸದರಲ್ಲಿ ಕೋಪ ಬರುದೇ ಇರುತ್ತದೆಯೇ? ಸದನದಲ್ಲಿ ಅದೇ ಸಂಭವಿಸಿದೆ ಈ ವಿಷಯವನ್ನು ಚರ್ಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ ”ಎಂದು ಹೂಡಾ ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ, ಇತರ ವ್ಯವಹಾರಗಳನ್ನು ಅಮಾನತುಗೊಳಿಸುವಂತೆ ಕೋರಿ ಉಭಯ ಸದನಗಳಲ್ಲಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿತು. ಅವರು NEET ಸಮಸ್ಯೆಗಳ ಬಗ್ಗೆ ತಕ್ಷಣದ ಚರ್ಚೆಯನ್ನು ಬಯಸಿದ್ದರು. ಆದರೆ ಸ್ಪೀಕರ್ ಓಂ ಬಿರ್ಲಾ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕೆ ಧನ್ಯವಾದ ನಿರ್ಣಯವನ್ನು ಚರ್ಚಿಸಲು ಸದನವು ನಿಗದಿಯಾಗಿದೆ ಎಂದು ಹೇಳಿದಾಗ ಸದನದಲ್ಲಿ ಗದ್ದಲವುಂಟಾಗಿದೆ. 18 ನೇ ಲೋಕಸಭೆಯ ಅಧಿವೇಶನದಲ್ಲಿ ಬಿರ್ಲಾ ಅವರು ಆಯ್ಕೆಯು ಮೊದಲ ವಿವಾದವಾಗಿತ್ತು.

ಗದ್ದಲದ ನಡುವೆ ಸ್ಪೀಕರ್ ಕಲಾಪವನ್ನು ಮುಂದೂಡಿದ್ದು ಸದನವು ಕಾರ್ಯನಿರ್ವಹಿಸಲು ಕಾಂಗ್ರೆಸ್ ಬಯಸುವುದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ‘ಸರ್ಕಾರದ ಪರವಾಗಿ ನಾವು ಯಾವುದೇ ವಿಷಯ ಪ್ರಸ್ತಾಪಿಸಿದರೂ ವಿವರವಾದ ಮಾಹಿತಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದೇವೆ. ಸರ್ಕಾರ ಯಾವಾಗಲೂ ಚರ್ಚೆಗೆ ಸಿದ್ಧ ಎಂದು ಸದಸ್ಯರಿಗೆ ಮತ್ತೊಮ್ಮೆ ಭರವಸೆ ನೀಡುತ್ತೇವೆ. ಆದರೆ ಸದನದ ಕಲಾಪವನ್ನು ಸ್ಥಗಿತಗೊಳಿಸುವ ಮೂಲಕ ಪ್ರವೃತ್ತಿ ಕಾಂಗ್ರೆಸ್ ಪಕ್ಷವು ಸದನಕ್ಕೆ ಅವಕಾಶ ನೀಡದಿರುವುದು ಸರಿಯಲ್ಲ.  ಇನ್ನು ಮುಂದೆ ಹೀಗಾಗಬಾರದು  ಎಂದು ನಾನು ಮನವಿ ಮಾಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ನೀಟ್ ಕುರಿತು ಚರ್ಚೆಗೆ ಒತ್ತಾಯಿಸಿದ್ದು, ಚರ್ಚೆ “ಗೌರವಯುತವಾಗಿ” ನಡೆಯಬೇಕು ಎಂದು ಹೇಳಿದರು.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್ 1 ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವೇ ಕಾರಣ: ಮಲ್ಲಿಕಾರ್ಜುನ ಖರ್ಗೆ

“ನಿನ್ನೆ, ಎಲ್ಲಾ ವಿರೋಧ ಪಕ್ಷಗಳ ನಾಯಕರು ಸಭೆ ನಡೆಸಿದ್ದರು. ಇಂದು ನಾವು ನೀಟ್ ವಿಷಯದ ಬಗ್ಗೆ ಚರ್ಚೆಯನ್ನು ಬಯಸುತ್ತೇವೆ ಎಂದು ಸರ್ವಾನುಮತದಿಂದ ಹೇಳಲಾಗಿದೆ. ಇಲ್ಲಿ ಸದನದಲ್ಲಿ ನೀಟ್ ಬಗ್ಗೆ ಚರ್ಚೆ ನಡೆಯಬೇಕು. ನಾನು ಪ್ರಧಾನಿಯವರನ್ನು ವಿನಂತಿಸುತ್ತೇನೆ. ಯುವಕರ ಸಮಸ್ಯೆಯನ್ನು ಸರಿಯಾಗಿ ಚರ್ಚಿಸಬೇಕು ಮತ್ತು ನಾವು ಅದನ್ನು ಗೌರವಯುತವಾಗಿ ಮಾಡುತ್ತೇವೆ, ನೀವು ಸಹ ಭಾಗವಹಿಸಬೇಕು ಏಕೆಂದರೆ ಇದು ಯುವಜನರಿಗೆ ಸಂಬಂಧಿಸಿದ ವಿಷಯವಾಗಿದೆ. ಭಾರತ ಸರ್ಕಾರ ಮತ್ತು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಒಟ್ಟಾಗಿ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಿವೆ ಎಂಬ ಸಂದೇಶ ದೇಶದ ಜನರಿಗೆ ಹೋಗಬೇಕು ಎಂದು ಸಂಸತ್ ಪ್ರವೇಶಿಸುವ ಮೊದಲು ಎಎನ್ಐ ಜತೆ ಮಾತನಾಡಿದ ರಾಹುಲ್ ಹೇಳಿದ್ದಾರೆ.

NEET-UG ಮತ್ತು UGC-NET ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೇಂದ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ