ರಾಜಸ್ಥಾನ ಸಿಎಂ ಆಯ್ಕೆ ಮಾಡುವ ಅಧಿಕಾರ ಕಾಂಗ್ರೆಸ್ ಅಧ್ಯಕ್ಷರಿಗಿದೆ: ಸಚಿನ್ ಪೈಲಟ್ ಬಣ

ಅದೇ ರೀತಿ 2008 ಮತ್ತು2018ರಲ್ಲಿ ಒಂದು ಸಾಲಿನ ನಿರ್ಣಯ ಅಂಗೀಕರಿಸಲಾಗಿತ್ತು.ಆದರೆ ಅದಕ್ಕೆ ಯಾವುದೇ ಆಕ್ಷೇಪಗಳಿರಲಿಲ್ಲ. ಆದರೆ ಈಗ ಗೆಹ್ಲೋಟ್ ನಿಷ್ಠಾವಂತರು ಅಂಥಾ ನಿರ್ಣಯವನ್ನು ತಿರಸ್ಕರಿಸಿ, ಷರತ್ತುಬದ್ಧ ನಿರ್ಣಯಕ್ಕಾಗಿ ಒತ್ತಾಯಿಸುತ್ತಿದ್ದಾರೆ

ರಾಜಸ್ಥಾನ ಸಿಎಂ ಆಯ್ಕೆ ಮಾಡುವ ಅಧಿಕಾರ ಕಾಂಗ್ರೆಸ್ ಅಧ್ಯಕ್ಷರಿಗಿದೆ: ಸಚಿನ್ ಪೈಲಟ್ ಬಣ
ಸಚಿನ್ ಪೈಲಟ್- ಗೆಹ್ಲೋಟ್
TV9kannada Web Team

| Edited By: Rashmi Kallakatta

Sep 27, 2022 | 7:12 PM

ದೆಹಲಿ: 1998 ರಿಂದ ಮೂರು ಬಾರಿ ರಾಜಸ್ಥಾನದಲ್ಲಿ (Rajasthan) ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರ ನಿಷ್ಠಾವಂತರು ಈಗ ಇದೇ ಕ್ರಮವನ್ನು ತಿರಸ್ಕರಿಸಿದ್ದಾರೆ ಎಂದು ಸಚಿನ್ ಪೈಲಟ್ (Sachin Pilot)ಬಣ ಹೇಳಿದೆ. ಭಾನುವಾರದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸೋನಿಯಾ ಗಾಂಧಿ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಬೇಕಿತ್ತು. ಆದರೆ ಪೈಲಟ್ ಅವರನ್ನು ಗೆಹ್ಲೋಟ್ ಅವರ ಉತ್ತರಾಧಿಕಾರಿಯಾಗಿ ಮಾಡುವುದನ್ನು ತಡೆಯಲು 92 ಶಾಸಕರು ಸ್ಪೀಕರ್ ಸಿಪಿ ಜೋಶಿ ಅವರಿಗೆ ಜಂಟಿ ರಾಜೀನಾಮೆ ಪತ್ರವನ್ನು ನೀಡಿದ್ದರಿಂದ ಸಭೆ ಗೊಂದಲಕ್ಕೊಳಗಾಯಿತು. 1998ರಲ್ಲಿ ಮೊದಲ ಬಾರಿ ಗೆಹ್ಲೋಟ್ ಮುಖ್ಯಮಂತ್ರಿ ಆದಾಗ ಶಾಸಕಾಂಗ ಗುಂಪು ಒಂದು ಸಾಲಿನ ನಿರ್ಣಯವೊಂದನ್ನು ಅಂಗೀಕರಿಸಿತ್ತು. ಕಾಂಗ್ರೆಸ್ ಅಧ್ಯಕ್ಷರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂಬುದಾಗಿತ್ತು ಆ ನಿರ್ಣಯ. 1998ರಲ್ಲಿ ಅವರು ಗೆಹ್ಲೋಟ್ ಮುಖ್ಯಮಂತ್ರಿಯಾದಾಗ ಅವರು ರಾಜಸ್ಥಾನದ ಅಧ್ಯಕ್ಷರಾಗಿರಲಿಲ್ಲ. ಅವರು ಶಾಸಕ ಕೂಡಾ ಆಗಿರಲಿಲ್ಲ. ಅವರು ಸಂಸದರಾಗಿದ್ದರು. ಆದರೂ ನಿರ್ಣಯ ಅಂಗೀಕಾರವಾಗಿ ಗೆಹ್ಲೋಟ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಸಚಿನ್ ಅವರ ಆಪ್ತ ನಾಯಕರು ಹೇಳಿದ್ದಾರೆ.

ಅದೇ ರೀತಿ 2008 ಮತ್ತು2018ರಲ್ಲಿ ಒಂದು ಸಾಲಿನ ನಿರ್ಣಯ ಅಂಗೀಕರಿಸಲಾಗಿತ್ತು.ಆದರೆ ಅದಕ್ಕೆ ಯಾವುದೇ ಆಕ್ಷೇಪಗಳಿರಲಿಲ್ಲ. ಆದರೆ ಈಗ ಗೆಹ್ಲೋಟ್ ನಿಷ್ಠಾವಂತರು ಅಂಥಾ ನಿರ್ಣಯವನ್ನು ತಿರಸ್ಕರಿಸಿ, ಷರತ್ತುಬದ್ಧ ನಿರ್ಣಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದು ಸಚಿನ್ ಪೈಲಟ್ ವಿರುದ್ಧದ ಸಂಚು ಅಲ್ಲ.ಇದು ಕಾಂಗ್ರೆಸ್ ಅಧ್ಯಕ್ಷರ ಅಧಿಕಾರವನ್ನು ಕ್ಷೀಣಿಸುವಂತೆ ಮಾಡುವ ನಡೆ ಎಂದಿದ್ದಾರೆ ಪೈಲಟ್  ಬಣದ ಮುಖಂಡರು.

ಇದೀಗ ಹೊಸ ಗೆಹ್ಲೋಟ್ ಆಗಿದ್ದಾರೆ. ವರ್ಷಗಳಿಂದ ಅವರನ್ನು ಬಲ್ಲವರು ಈ ರೀತಿ ಆಗುತ್ತಿರುವುದನ್ನು ಒಪ್ಪಲಾರರು ಎಂದು ಮತ್ತೊಬ್ಬ ನಾಯಕರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಪೈಲಟ್ ಕಳೆದ ವಾರ ಕೇರಳಕ್ಕೆ ತೆರಳಿದ್ದರು. ಪೈಲಟ್ ಗಾಂಧಿ ಕುಟುಂಬದ ವಿಶ್ವಾಸವನ್ನು ಹೊಂದಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಅವರು ನಾಮನಿರ್ದೇಶಿತರಾಗಬಹುದು ಎಂಬುದನ್ನು ಇದು ತೋರಿಸುತ್ತದೆ ಎಂಬುದು ಗೆಹ್ಲೋಟ್ ಬಣ ನಂಬಿದೆ.

ಪೈಲಟ್‌ಗಾಗಿ ಒಮ್ಮತವನ್ನು ಪಡೆಯಲು ಕೇಂದ್ರ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್ ರಾಜಸ್ಥಾನದಲ್ಲಿಲ್ಲ ಎಂದು ಪೈಲಟ್ ಶಿಬಿರವು ಹೇಳಿಕೊಂಡಿದೆ. ಇಬ್ಬರು ವೀಕ್ಷಕರು ಶಾಸಕರು ಬರಲು ಐದು ಗಂಟೆಗಳ ಕಾಲ ಕಾಯುತ್ತಿದ್ದರು. ಆದರೆ 90ಕ್ಕೂ ಹೆಚ್ಚು ಶಾಸಕರು ಬಂದಿಲ್ಲ. ಖರ್ಗೆ ಮತ್ತು ಮಾಕೆನ್ ಅವರು ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಯಾವತ್ತೂ ಹೇಳಿಲ್ಲ. ಇದು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡಲು ಮಾತ್ರ ಎಂದು ನಾಯಕರೊಬ್ಬರು ಹೇಳಿದ್ದಾರೆ.

ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ನಡೆದ ಸಮಾನಾಂತರ ಸಭೆಗೆ ಗೆಹ್ಲೋಟ್ ಜವಾಬ್ದಾರರಾಗಿರಬೇಕು ಎಂದು  ನಾಯಕರೊಬ್ಬರು ಹೇಳಿದ್ದು ಅವರು ಮುಖ್ಯಮಂತ್ರಿ. ಶಾಸಕರು ತನಗೆ ನಿಷ್ಠರಾಗಿದ್ದರೆ, ಅವರು (ಸಿಎಲ್‌ಪಿ) ಸಭೆಗೆ ಏಕೆ ಬಂದಿಲ್ಲ ಎಂದು ಅವರು ಉತ್ತರಿಸಬೇಕು ಎಂದಿದ್ದಾರೆ.

ಗೆಹ್ಲೋಟ್ ಆರಂಭದಲ್ಲಿ ಎರಡೂ ಜವಾಬ್ದಾರಿಗಳನ್ನು ನಿಭಾಯಿಸಲು ಉತ್ಸುಕರಾಗಿದ್ದರು. ಆದರೆ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕಾಂಗ್ರೆಸ್ ಒಂದು ವ್ಯಕ್ತಿ, ಒಂದು ಹುದ್ದೆಯ ನಿಯಮಕ್ಕೆ ಬದ್ಧ  ಪುನರುಚ್ಚರಿಸಿದ ನಂತರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಒಪ್ಪಿದರು.

ಭಾನುವಾರ ಮಾಕನ್ ಮತ್ತು ಖರ್ಗೆ ಅವರು ಸಿಎಲ್‌ಪಿ ಸಭೆ ನಡೆಸಲು ಜೈಪುರಕ್ಕೆ ಬಂದಿಳಿದಾಗ 92 ಶಾಸಕರು  ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಗೆಹ್ಲೋಟ್ ನಿಷ್ಠಾವಂತ ಧರಿವಾಲ್ ಅವರ ನಿವಾಸದಲ್ಲಿ ಸೇರಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada