ಜಿ-23 ಸಭೆಯ ನಂತರ ಕಾಂಗ್ರೆಸ್​​ನ ಹಿರಿಯ ನಾಯಕ ಭೂಪಿಂದರ್ ಸಿಂಗ್​​ ಹೂಡಾ ಭೇಟಿ ಮಾಡಿದ ರಾಹುಲ್​​ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Mar 17, 2022 | 6:14 PM

ಸಭೆಯ ನಂತರ  ಹರಿಯಾಣದ ಮಾಜಿ ಮುಖ್ಯಮಂತ್ರಿ ಹೂಡಾ ಅವರು ಜಿ -23 ರ ಭಾಗವಾಗಿರುವ ಗುಲಾಂ ನಬಿ ಆಜಾದ್ ಅವರ ನಿವಾಸಕ್ಕೆ ಭೇಟಿ ನೀಡಿದರು

ಜಿ-23 ಸಭೆಯ ನಂತರ ಕಾಂಗ್ರೆಸ್​​ನ ಹಿರಿಯ ನಾಯಕ ಭೂಪಿಂದರ್ ಸಿಂಗ್​​ ಹೂಡಾ ಭೇಟಿ ಮಾಡಿದ ರಾಹುಲ್​​ ಗಾಂಧಿ
ರಾಹುಲ್ ಗಾಂಧಿ- ಹೂಡಾ
Follow us on

ದೆಹಲಿ: G-23 ನಾಯಕರ ನಿರ್ಣಾಯಕ ಸಭೆಯ ಒಂದು ದಿನದ ನಂತರ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರು ಗುರುವಾರ ಭೂಪಿಂದರ್ ಸಿಂಗ್ ಹೂಡಾ (Bhupinder Singh Hooda) ಅವರನ್ನು ಭೇಟಿ ಮಾಡಿದರು. ಇವರಿಬ್ಬರು ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋತ ನಂತರ ಪಕ್ಷವನ್ನು ಪುನರುಜ್ಜೀವನಗೊಳಿಸುವ ಮತ್ತು ಮುಂದಿನ ಮಾರ್ಗದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಜಿ-23 ಎಂಬುದು ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ನಾಯಕರ ಗುಂಪಾಗಿದ್ದು, ಪಕ್ಷದೊಳಗಿನ ಕೂಲಂಕುಷ ಪರೀಕ್ಷೆಗೆ ಒತ್ತಾಯಿಸಿದ್ದಾರೆ.  ಸಭೆಯ ನಂತರ  ಹರಿಯಾಣದ ಮಾಜಿ ಮುಖ್ಯಮಂತ್ರಿ ಹೂಡಾ ಅವರು ಜಿ -23 ರ ಭಾಗವಾಗಿರುವ ಗುಲಾಂ ನಬಿ ಆಜಾದ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಬುಧವಾರ ಸಭೆ ಸೇರಿ ಜಂಟಿ ಹೇಳಿಕೆಗೆ ಸಹಿ ಹಾಕಿದ ಗುಂಪುಗಳ ಬೇಡಿಕೆಯಂತೆ ಕಾಂಗ್ರೆಸ್ ಅನ್ನು ಬಲಪಡಿಸಲು ಮತ್ತು ಸಾಮೂಹಿಕ ನಾಯಕತ್ವ ಮತ್ತು ನಿರ್ಧಾರ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹೂಡಾ ಮತ್ತು ಆಜಾದ್ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.  ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಮತ್ತು ಇನ್ನೊಬ್ಬ ಜಿ-23 ನಾಯಕ ಆನಂದ್ ಶರ್ಮಾ ಕೂಡ ಆಜಾದ್ ಅವರ ನಿವಾಸದಲ್ಲಿ ಹೂಡಾ ಅವರ ಜತೆಗಿದ್ದರುಎಂದು ಮೂಲಗಳು ತಿಳಿಸಿವೆ.

“ಕಾಂಗ್ರೆಸ್‌ನ ಮುಂದಿರುವ ಏಕೈಕ ಮಾರ್ಗವೆಂದರೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮೂಹಿಕ ನಾಯಕತ್ವ ಮತ್ತು ಎಲ್ಲಾ ಹಂತಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮಾದರಿಯನ್ನು ಅಳವಡಿಸಿಕೊಳ್ಳುವುದು” ಎಂದು ಗುಂಪು ಬುಧವಾರ ಹೇಳಿದೆ.

ಜಿ 23 ಮೂಲಗಳು ತಾವು ಕಾಂಗ್ರೆಸ್ ಅನ್ನು ಬಲಪಡಿಸಲು ಬಯಸುತ್ತಾರೆ ಮತ್ತು “ಯಾವುದೇ ರೀತಿಯಲ್ಲಿ ಅದನ್ನು ದುರ್ಬಲಗೊಳಿಸಬಾರದು” ಎಂದು ಹೇಳಿವೆ. ಜಿ 23 ಹೇಳಿಕೆ ಮತ್ತು ಆಜಾದ್ ಅವರು ಬುಧವಾರ ಸೋನಿಯಾ ಗಾಂಧಿ ಅವರೊಂದಿಗೆ ತಮ್ಮ ನಿವಾಸದಲ್ಲಿ ಭೇಟಿಯ ಉದ್ದೇಶಗಳನ್ನು ತಿಳಿಸಲು ದೂರವಾಣಿ ಸಂಭಾಷಣೆ ನಡೆಸಿದ ಹಿನ್ನೆಲೆಯಲ್ಲಿ ಹೂಡಾ ಅವರೊಂದಿಗಿನ ರಾಹುಲ್ ಗಾಂಧಿ ಅವರ ಭೇಟಿಯು ಮಹತ್ವದ್ದಾಗಿದೆ.

ಆಜಾದ್ ಅವರು ಶೀಘ್ರದಲ್ಲೇ ಪ್ರಸ್ತಾವನೆಗಳೊಂದಿಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಮತ್ತು ಪಕ್ಷದೊಳಗೆ ಪ್ರಮುಖ ತಿದ್ದುಪಡಿ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿರಾಜೀನಾಮೆ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್​​ಗೆ ಮುಜುಗರ ಉಂಟು ಮಾಡಿದ ನವಜೋತ್ ಸಿಂಗ್ ಸಿಧು; ಏನಿದು ಟ್ವೀಟ್ ಅರ್ಥ?