ಇತ್ತೀಚೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi)ಯವರ ಟ್ವಿಟರ್ ಅಕೌಂಟ್ (Twitter Account)ನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿತ್ತು. ಟ್ವಿಟರ್ನ ಈ ಕ್ರಮವನ್ನು ದೇಶಾದ್ಯಂತ ರಾಹುಲ್ ಬೆಂಬಲಿಗರು ವಿರೋಧಿಸುತ್ತಿದ್ದಾರೆ. ಟ್ವಿಟರ್ ಕೇಂದ್ರ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ (Central Government)ದ ಮಾತು ಕೇಳಿ ರಾಹುಲ್ ಗಾಂಧಿಯವರ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡಿದೆ ಎಂಬಿತ್ಯಾದಿ ಆರೋಪಗಳನ್ನೂ ಮಾಡಲಾಗಿದೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದು ಆಂಧ್ರಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು (Congress Workers) !
ರಾಹುಲ್ ಗಾಂಧಿಯವರ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧ ಮಾಡಿದ್ದನ್ನು ವಿರೋಧಿಸಿ ಆಂಧ್ರಪ್ರದೇಶ ಕಾಂಗ್ರೆಸ್ ಕಾರ್ಯಕರ್ತರು ಟ್ವಿಟರ್ ಬರ್ಡ್ (ಟ್ವಿಟರ್ ಸಂಸ್ಥೆಯ ಗುರುತಾದ ಚಿಕ್ಕ ಹಕ್ಕಿ)ನ್ನು ಫ್ರೈ ಮಾಡಿದ್ದಾರೆ. ಅಂದರೆ ಎಣ್ಣೆಯಲ್ಲಿ ಹಾಕಿ ಕರಿದಿದ್ದಾರೆ. ಅಂದರೆ ಅದೇನೋ ಹಿಟ್ಟಿನಲ್ಲಿ ಪುಟ್ಟ ಹಕ್ಕಿಯಾಕಾರ ಸೃಷ್ಟಿಸಿ, ಅದನ್ನು ಎಣ್ಣೆಯಲ್ಲಿ ಹಾಕಿ ಕರಿದಿದ್ದಾರೆ ಮತ್ತು ಟ್ವಿಟರ್ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
‘ಟ್ವಿಟರ್, ನೀನು ರಾಹುಲ್ ಗಾಂಧಿಯವರ ಖಾತೆ ಲಾಕ್ ಮಾಡುವ ಮೂಲಕ ದೊಡ್ಡ ಪ್ರಮಾದ ಮಾಡಿರುವೆ. ಅದರೊಂದಿಗೆ ನಮ್ಮ ಅಂದರೆ ಕಾಂಗ್ರೆಸ್ಸಿಗರ ಟ್ವೀಟ್ಗಳನ್ನೂ ಪ್ರಮೋಟ್ ಮಾಡುತ್ತಿಲ್ಲ. ಹಾಗಾಗಿ ನಾವು ಈ ಟ್ವಿಟರ್ ಬರ್ಡ್ನ್ನು ಫ್ರೈ ಮಾಡುತ್ತಿದ್ದೇವೆ. ಹಾಗೇ ಈ ಬರ್ಡ್ ಫ್ರೈನ್ನು ಗುರುಗ್ರಾಮ ಮತ್ತು ದೆಹಲಿಯಲ್ಲಿರುವ ಟ್ವಿಟರ್ನ ಪ್ರಧಾನ ಕಚೇರಿಗೆ ಕಳಿಸುತ್ತೇವೆ. ನಿಮ್ಮ ತಿನಿಸನ್ನು ನೀವು ಖಂಡಿತ ಎಂಜಾಯ್ ಮಾಡುತ್ತೀರೆಂಬ ನಂಬಿಕೆ ಇದೆ ಎಂದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
Don’t miss this hilarious video were Congress karyakartas of AP fry” Twitter Bird” as protest against Twitter for blocking Rahul Gandhi’s acct & also couriered it to Twitter office.
yatha raja tatha praja??? pic.twitter.com/e4p4YmiEZE
— Sheetal Chopra ?? (@SheetalPronamo) August 17, 2021
ಕಳೆದ ಕೆಲವು ದಿನಗಳ ಹಿಂದೆ ದೆಹಲಿ ಚಿತಾಗಾರವೊಂದರಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಆಗಿತ್ತು. ತಣ್ಣೀರು ತರಲು ಹೋಗಿದ್ದ 9 ವರ್ಷದ ಬಾಲಕಿ ಮೇಲೆ ಆ ಚಿತಾಗಾರದ ಅರ್ಚಕ ಮತ್ತು ಆತನ ಸಹಾಯಕರು ರೇಪ್ ಮಾಡಿದ್ದರು. ಸಂತ್ರಸ್ತೆಯ ಪಾಲಕರಿಗೆ ಸಮಾಧಾನ ಹೇಳಲು ಹೋಗಿದ್ದ ರಾಹುಲ್ ಗಾಂಧಿ, ಅವರ ಫೋಟೋಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಕಾನೂನು ಪ್ರಕಾರ ಇದು ತಪ್ಪು. ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋ ಹಾಕಿದ್ದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಟ್ವಿಟರ್ ಇಂಡಿಯಾಕ್ಕೆ ತಿಳಿಸಿತ್ತು. ಹಾಗೇ, ದೆಹಲಿ ಮೂಲದ ವಕೀಲರೊಬ್ಬರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಅದಾದ ಬಳಿಕ ಟ್ವಿಟರ್ ರಾಹುಲ್ ಗಾಂಧಿಯವರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿತ್ತು.
ಇದನ್ನೂ ಓದಿ: ತಾಲಿಬಾನ್ನಿಂದ ನಿರ್ವಹಿಸಲ್ಪಡುವ, ಉಗ್ರಸಂಘಟನೆಗೆ ಬೆಂಬಲ ಸೂಚಿಸುವ ಖಾತೆಗಳನ್ನು ನಿಷೇಧಿಸುವುದಾಗಿ ಫೇಸ್ಬುಕ್ ಘೋಷಣೆ
ಬೆಂಗಳೂರಿನ ಸಿಂಪಲ್ ಎನರ್ಜಿ ಕಂಪನಿಯೂ ತನ್ನ ಸಿಂಪಲ್ ವನ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ