AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamal Nath: ಕೇಸರಿ ಧ್ವಜ, ಆಂಜನೇಯನ ಚಿತ್ರವಿರುವ ದೇಗುಲದ ಆಕಾರದ ಕೇಕ್ ಕತ್ತರಿಸಿದ ಕಮಲನಾಥ್; ಬಿಜೆಪಿ ಆಕ್ರೋಶ

ಕೇಸರಿ ಧ್ವಜ ಮತ್ತು ಹನುಮಂತನ ಚಿತ್ರವಿರುವ ದೇವಾಲಯದ ಆಕಾರದ ಕೇಕ್ ಅನ್ನು ಕಮಲ್ ನಾಥ್ ಕತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Kamal Nath: ಕೇಸರಿ ಧ್ವಜ, ಆಂಜನೇಯನ ಚಿತ್ರವಿರುವ ದೇಗುಲದ ಆಕಾರದ ಕೇಕ್ ಕತ್ತರಿಸಿದ ಕಮಲನಾಥ್; ಬಿಜೆಪಿ ಆಕ್ರೋಶ
ಕೇಸರಿ ಧ್ವಜ, ಆಂಜನೇಯನ ಚಿತ್ರವಿರುವ ದೇಗುಲದ ಆಕಾರದ ಕೇಕ್ ಕತ್ತರಿಸಿದ ಕಮಲನಾಥ್
TV9 Web
| Updated By: ಸುಷ್ಮಾ ಚಕ್ರೆ|

Updated on:Nov 17, 2022 | 10:59 AM

Share

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ (Congress Leader) ಹಾಗೂ ಮಾಜಿ ಸಿಎಂ ಕಮಲ್ ನಾಥ್ (Kamal Nath) ತಮ್ಮ ಹುಟ್ಟುಹಬ್ಬದಂದು ದೇವಸ್ಥಾನದ ಆಕಾರದಲ್ಲಿರುವ, ಹನುಮಂತನ ಚಿತ್ರವಿರುವ ಕೇಕ್ ಕತ್ತರಿಸುವ ವಿಡಿಯೋ ವೈರಲ್ (Video Viral) ಆಗಿದ್ದು, ಇದು ವಿವಾದಕ್ಕೀಡಾಗಿದೆ. ಕಮಲ್ ನಾಥ್ ಅವರ ಈ ವರ್ತನೆ ಹಿಂದೂಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಟೀಕಿಸಿದೆ.

ಕೇಸರಿ ಧ್ವಜ ಮತ್ತು ಹನುಮಂತನ ಚಿತ್ರವಿರುವ ದೇವಾಲಯದ ಆಕಾರದ ಕೇಕ್ ಅನ್ನು ಕಮಲ್ ನಾಥ್ ಕತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕಮಲನಾಥ್ ಅವರ ಹುಟ್ಟೂರಾದ ಚಿಂದ್ವಾರಾಕ್ಕೆ 3 ದಿನಗಳ ಕಾಲ ಭೇಟಿ ನೀಡಿದ್ದಾಗ ಕಮಲನಾಥ್ ಅವರ ಬೆಂಬಲಿಗರು ಅವರ ಜನ್ಮದಿನವನ್ನು ಆಚರಿಸಲು ಕೇಕ್ ತರಿಸಿದ್ದರು. ಮಂಗಳವಾರ ಸಂಜೆ ಚಿಂದ್ವಾರಾದಲ್ಲಿರುವ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯಿತು.

ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆ ವೇಳೆ ರಾಷ್ಟ್ರಗೀತೆ ಹಾಕುವಾಗ ಎಡವಟ್ಟು; ರಾಹುಲ್ ಗಾಂಧಿಗೆ ಬಿಜೆಪಿ ತರಾಟೆ

ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಕಮಲನಾಥ್ ಕತ್ತರಿಸಿದ ಕೇಕ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವಾರು ಧಾರ್ಮಿಕ ಚಿಹ್ನೆಗಳಿರುವ ಕೇಕ್ ಕತ್ತರಿಸುವ ಮೂಲಕ ಕಮಲ್ ನಾಥ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.

ಕಮಲ್ ನಾಥ್ ಮತ್ತು ಕಾಂಗ್ರೆಸ್ ಪಕ್ಷದವರು ನಕಲಿ ದೈವಭಕ್ತರು. ಅವರಿಗೆ ದೇವರೊಂದಿಗೆ ಯಾವುದೇ ಸಂಬಂಧವಿಲ್ಲ. ರಾಮಮಂದಿರದ ನಿರ್ಮಾಣವನ್ನು ವಿರೋಧಿಸಿದ್ದ ಅವರು ಅದೇ ಚುನಾವಣೆಯಲ್ಲಿ ತಮಗೆ ಹಾನಿಯಾಗುತ್ತಿದೆ ಎಂದು ಅರಿತುಕೊಂಡಿದ್ದಾರೆ. ಹೀಗಾಗಿ, ಈಗ ಹನುಮಂತನ ಭಕ್ತರಾಗಿದ್ದಾರೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಮಲನಾಥ್​ ರಾಜೀನಾಮೆ; ಹೊಸ ನಾಯಕನ ನೇಮಕ ಮಾಡಿದ ಕಾಂಗ್ರೆಸ್​

ಕೇಕ್ ಮೇಲೆ ಹನುಮಂತನ ಫೋಟೋವನ್ನು ಹಾಕಿ, ನಂತರ ಅದನ್ನು ಕತ್ತರಿಸಲಾಗಿದೆ. ಇದು ಹಿಂದೂ ಧರ್ಮ ಮತ್ತು ಸನಾತನ ಸಂಪ್ರದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಕಮಲ್ ನಾಥ್ ಇಂದು (ಗುರುವಾರ) 76ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಮಂಗಳವಾರವೇ ಮುಂಚಿತವಾಗಿ ಅವರ ವಿಧಾನಸಭಾ ಕ್ಷೇತ್ರ ಚಿಂದ್ವಾರಾ ಜಿಲ್ಲೆಯ ಅವರ ಮನೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:57 am, Thu, 17 November 22