ಪಂಜಾಬ್ ಗಡಿಯಲ್ಲಿ ಕ್ರೈಸ್ತ ಮಿಷನರಿಗಳಿಂದ ಬಲವಂತದ ಮತಾಂತರ; ಅಕಲ್ ತಖ್ತ್ ಜತೇದಾರ್ ಆರೋಪ

TV9 Digital Desk

| Edited By: Sushma Chakre

Updated on:Oct 13, 2021 | 10:02 AM

ಕ್ರಿಶ್ಚಿಯನ್ ಮಿಷನರಿಗಳು ಕಳೆದ ಕೆಲವು ವರ್ಷಗಳಿಂದ ಬಲವಂತದ ಮತಾಂತರಕ್ಕಾಗಿ ಗಡಿ ಪ್ರದೇಶದಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಪಂಜಾಬ್ ಗಡಿಯಲ್ಲಿ ಮುಗ್ಧ ಜನರನ್ನು ವಂಚಿಸಲಾಗುತ್ತಿದೆ ಎಂದು ಅಕಲ್ ತಖ್ತ್ ಜತೇದಾರ್ ಗಿಯಾನಿ ಹರಪ್ರೀತ್ ಸಿಂಗ್ ಹೇಳಿದ್ದಾರೆ.

ಪಂಜಾಬ್ ಗಡಿಯಲ್ಲಿ ಕ್ರೈಸ್ತ ಮಿಷನರಿಗಳಿಂದ ಬಲವಂತದ ಮತಾಂತರ; ಅಕಲ್ ತಖ್ತ್ ಜತೇದಾರ್ ಆರೋಪ
ಸಾಂದರ್ಭಿಕ ಚಿತ್ರ

ನವದೆಹಲಿ: ಕ್ರಿಶ್ಚಿಯನ್ ಮಿಷನರಿಗಳು ಪಂಜಾಬ್‌ನ ಗಡಿ ಪ್ರದೇಶಗಳಲ್ಲಿ ಬಲವಂತದ ಮತಾಂತರಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ. ಶಿರೋಮಣಿ ಗುರುದ್ವಾರಾ ಪರ್ಬಂಧಕ್ ಸಮಿತಿಯು (SGPC) ಇದಕ್ಕೆ ಪ್ರತಿಯಾಗಿ ಅಭಿಯಾನವನ್ನು ಆರಂಭಿಸಿದೆ ಎಂದು ಅಕಲ್ ತಖ್ತ್ ಜತೇದಾರ್ ಗಿಯಾನಿ ಹರಪ್ರೀತ್ ಸಿಂಗ್ ಹೇಳಿದ್ದಾರೆ.

ಕ್ರಿಶ್ಚಿಯನ್ ಮಿಷನರಿಗಳು ಕಳೆದ ಕೆಲವು ವರ್ಷಗಳಿಂದ ಬಲವಂತದ ಮತಾಂತರಕ್ಕಾಗಿ ಗಡಿ ಪ್ರದೇಶದಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಪಂಜಾಬ್ ಗಡಿಯಲ್ಲಿ ಮುಗ್ಧ ಜನರನ್ನು ವಂಚಿಸಲಾಗುತ್ತಿದೆ ಮತ್ತು ಮತಾಂತರಕ್ಕೆ ಆಮಿಷ ಒಡ್ಡಲಾಗುತ್ತಿದೆ. ಇಂತಹ ಅನೇಕ ವರದಿಗಳನ್ನು ನಾವು ಸ್ವೀಕರಿಸಿದ್ದೇವೆ ಎಂದು ಸಿಖ್ ಸಮುದಾಯದ ಅತ್ಯುನ್ನತ ತಾತ್ಕಾಲಿಕ ಸ್ಥಾನದ ಮುಖ್ಯ ಅರ್ಚಕರಾಗಿರುವ ಅಕಲ್ ತಖ್ತ್ ಜತೇದಾರ್ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಶಿರೋಮಣಿ ಗುರುದ್ವಾರಾ ಪರ್ಬಂಧಕ್ ಸಮಿತಿಯು ಬಲವಂತದ ಮತಾಂತರವನ್ನು ಎದುರಿಸಲು ‘ಘರ್ ಘರ್ ಅಂದರ್ ಧರ್ಮಶಾಲ್’ ಅಭಿಯಾನವನ್ನು ಆರಂಭಿಸಿದೆ. ಇದು ಸಿಖ್ ಧರ್ಮದ ಮೇಲೆ ಅಪಾಯಕಾರಿ ದಾಳಿಯಾಗಿದೆ. ಈ ಅಭಿಯಾನದ ಅಡಿಯಲ್ಲಿ ಸಿಖ್ ಬೋಧಕರು ತಮ್ಮ ಧರ್ಮದ ಕುರಿತು ಪ್ರಚಾರ ಮಾಡಲು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಧರ್ಮವು ಆಧ್ಯಾತ್ಮಿಕತೆಯ ವಿಷಯವಾಗಿದೆ. ಬಲವಂತದ ಮತಾಂತರ ಅಥವಾ ಯಾರನ್ನಾದರೂ ಆಮಿಷವೊಡ್ಡುವುದನ್ನು ಎಂದಿಗೂ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಲವಂತದ ಮತಾಂತರದ ವಿರುದ್ಧದ ಅಭಿಯಾನವನ್ನು ಬಲಪಡಿಸುವಲ್ಲಿ ಎಲ್ಲಾ ಸಿಖ್ಖರು ಎಸ್‌ಜಿಪಿಸಿಯನ್ನು ಬೆಂಬಲಿಸಬೇಕು. ನಾವೆಲ್ಲರೂ ಒಂದಾಗಿ ಈ ಸವಾಲನ್ನು ಎದುರಿಸಬೇಕು ಎಂದು ಜತೇದಾರ್ ಗಿಯಾನಿ ಹರ್​ಪ್ರೀತ್ ಸಿಂಗ್ ಹೇಳಿದ್ದಾರೆ.

ಇಂತಹ ಮತಾಂತರದ ಹಿಂದೆ ಹಲವು ಕಾರಣಗಳಿವೆ. ಹಳ್ಳಿಗಳಲ್ಲಿ ದಲಿತರು ಎದುರಿಸುತ್ತಿರುವ ತಾರತಮ್ಯ ಇದಕ್ಕೆ ಮುಖ್ಯ ಕಾರಣ. ದಲಿತರಲ್ಲಿ ಅನಕ್ಷರತೆ ಮತ್ತು ಬಡತನವೂ ಇದೆ. ಇದನ್ನೇ ಗುರಿಯಾಗಿಸಿಕೊಂಡು ಅವರನ್ನು ಮತಾಂತರಕ್ಕೆ ಒಳಪಡಿಸಲಾಗುತ್ತಿದೆ. ಮಿಷನರಿಗಳಿಂದ ದಲಿತರ ಮನವೊಲಿಸಲು ಅವರ ಮನೆಗಳಿಗೆ ತೆರಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಧಾರವಾಡ: ಮತಾಂತರಕ್ಕೆ ಯತ್ನ ಆರೋಪ; ಮನೆ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ

ಮತಾಂತರ ಆರೋಪಿಸಿ ರೂರ್ಕಿ ಚರ್ಚ್ ಮೇಲೆ ದಾಳಿ: 200 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಉತ್ತರಾಖಂಡ್ ಪೊಲೀಸರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada