ಮಹಾರಾಷ್ಟ್ರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ; 34ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

TV9 Digital Desk

| Edited By: Sushma Chakre

Updated on: Oct 13, 2021 | 8:10 AM

Ambernath Gas Leak: ಅಂಬರ್‌ನಾಥ್ ಪಟ್ಟಣದ ಎಂಐಡಿಸಿ ಪ್ರದೇಶದ ರಾಸಾಯನಿಕ ಕಾರ್ಖಾನೆಯಿಂದ ಅನಿಲ ಸೋರಿಕೆ ವರದಿಯಾದ ನಂತರ 34ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾರಾಷ್ಟ್ರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ; 34ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
ಮಹಾರಾಷ್ಟ್ರದಲ್ಲಿ ಗ್ಯಾಸ್ ಸೋರಿಕೆಯಾದ ಫ್ಯಾಕ್ಟರಿ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್ ನಗರದ ರಾಸಾಯನಿಕ ಕಾರ್ಖಾನೆಯಲ್ಲಿ ಮಂಗಳವಾರ ವಿಷಕಾರಿ ಅನಿಲ ಸೋರಿಕೆಯಾಗಿದೆ. ಗ್ಯಾಸ್ ಸೋರಿಕೆಯಿಂದ 34ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಅಂಬರ್‌ನಾಥ್ ಪಟ್ಟಣದ ಎಂಐಡಿಸಿ ಪ್ರದೇಶದ ರಾಸಾಯನಿಕ ಕಾರ್ಖಾನೆಯಿಂದ ಅನಿಲ ಸೋರಿಕೆ ವರದಿಯಾದ ನಂತರ 34ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆ, ಕಣ್ಣು, ಮೂಗು ಉರಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಅಂಬರನಾಥ್ ಪಶ್ಚಿಮದಲ್ಲಿರುವ ಆರ್.ಕೆ ಕೆಮಿಕಲ್ ಪ್ಲಾಂಟ್‌ನಿಂದ ಸಲ್ಫ್ಯೂರಿಕ್ ಅನಿಲ ಸೋರಿಕೆಯಾಗಿದೆ. ಕಂಪನಿಯ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಜನರು ಸೇರಿದಂತೆ 34 ಜನರು ತೊಂದರೆಗೀಡಾಗಿದ್ದಾರೆ. ಅಗ್ನಿಶಾಮಕ ದಳ ಮತ್ತು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೋರಿಕೆಯಾದ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿದರು.

ಉಸಿರಾಟದ ತೊಂದರೆ ಮತ್ತು ಇತರೆ ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ 34 ಜನರನ್ನು ಉಲ್ಲಾಸ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಎಲ್​ಜಿ ಪಾಲಿಮರ್ಸ್ ರಾಸಾಯನಿಕ ಸ್ಥಾವರದಿಂದ ರಾತ್ರಿಯಿಡೀ ಗ್ಯಾಸ್​ ಸೋರಿಕೆಯಾಗಿತ್ತು. ಇದರಿಂದ ಮಗು ಮತ್ತು 8 ಜನರು ಮೃತಪಟ್ಟಿದ್ದರು, 1000ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Maharashtra Bandh: ಲಖಿಂಪುರ ಖೇರಿಯ ರೈತರ ಹತ್ಯೆ ವಿರೋಧಿಸಿ ಇಂದು ಮಹಾರಾಷ್ಟ್ರ ಬಂದ್

Maharashtra Bandh ಮಹಾರಾಷ್ಟ್ರ ಬಂದ್ ಯಶಸ್ವಿಯಾಗಿದೆ ಎಂದ ಶಿವಸೇನಾ ಸಂಸದ; 8 ಬೆಸ್ಟ್ ಬಸ್ ಧ್ವಂಸ, ಎಂವಿಎ ವಿರುದ್ಧ ಫಡ್ನವಿಸ್ ವಾಗ್ದಾಳಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada