ಕೊವಿಡ್-19 ಸೋಂಕಿಗೆ ಒಳಗಾಗುತ್ತಿರುವವರ ಪ್ರಮಾಣದಲ್ಲಿ ಇಳಿಕೆ
ಭಾರತದಲ್ಲಿ, ಕಳೆದ 24 ಗಂಟೆಯಲ್ಲಿ 19,299 ಜನರಿಗೆ ಕೊವಿಡ್-19 ದೃಢಪಟ್ಟಿದೆ. ಈ ಮೂಲಕ, ದೇಶದಲ್ಲಿ ಕೊವಿಡ್ ಪೀಡಿತರ ಸಂಖ್ಯೆ 1,04,50,284ಕ್ಕೆ ಏರಿಕೆಯಾಗಿದೆ.
ದೆಹಲಿ: ಕೆಲವು ದಿನಗಳಿಂದ ಕೊವಿಡ್-19ಗೆ ಒಳಗಾಗುತ್ತಿರುವವರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಡಿಸೆಂಬರ್ ಅಂತ್ಯದಿಂದ ಪ್ರತಿನಿತ್ಯ ಸುಮಾರು 20 ಸಾವಿರ ಅಥವಾ ಅದಕ್ಕಿಂತ ಕಡಿಮೆ ಜನರು ಕೊರೊನಾಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ, ಕಳೆದ 24 ಗಂಟೆಯಲ್ಲಿ 19,299 ಜನರಿಗೆ ಕೊವಿಡ್-19 ದೃಢಪಟ್ಟಿದೆ. ಈ ಮೂಲಕ, ದೇಶದಲ್ಲಿ ಕೊವಿಡ್ ಪೀಡಿತರ ಸಂಖ್ಯೆ 1,04,50,284ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ, ದೇಶದಲ್ಲಿ ಕೊರೊನಾ ಸೋಂಕಿಗೆ 201 ಜನರು ಬಲಿಯಾಗಿದ್ದಾರೆ. ಕೊರೊನಾದಿಂದ ಒಟ್ಟು ಸಾವಿನ ಸಂಖ್ಯೆ 1,50,999 ಆಗಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,00,75,950ಕ್ಕೆ ಏರಿಕೆಯಾಗಿದೆ. ತನ್ಮೂಲಕ, ಭಾರತದಲ್ಲಿ ಕೊವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 2,23,335 ಆಗಿದೆ.
ಭಾರತದಲ್ಲಿ ಕೊವಿಡ್ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಳವಾಗಿದೆ. ಕೊವಿಡ್ ಸೋಂಕಿತರ ಗುಣಮುಖ ಪ್ರಮಾಣ ಶೇ.96.42ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 9,26,767 ಆಗಿದ್ದು, ಅದರಲ್ಲಿ 9,452 ಪ್ರಕರಣಗಳು ಸಕ್ರಿಯವಾಗಿವೆ. 9,05,158 ಕೊವಿಡ್ ಸೋಂಕಿಂತರ ಕೊರೊನಾದಿಂದ ಗುಣಮುಖರಾಗಿದ್ದಾರೆ. 12,138 ಜನರು ಈ ವರೆಗೆ ಕೊರೊನಾದಿಂದ ಮೃತಪಟ್ಟಿದ್ದಾರೆ.
Published On - 10:40 am, Sun, 10 January 21