AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಇಂದು 31,643 ಜನರಿಗೆ ಕೊರೊನಾ ದೃಢ; ಕರ್ನಾಟಕದ ನೆರೆಯ ರಾಜ್ಯಗಳ ಕೊವಿಡ್-19 ವಿವರ ಇಲ್ಲಿದೆ

India Covid-19 Update: ಮಹಾರಾಷ್ಟ್ರದಲ್ಲಿ ಇಂದು 31,643 ಜನರಿಗೆ ಕೊರೊನಾ ದೃಢವಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಕಂಡುಬರುತ್ತಿದೆ. ಈ ಮೂಲಕ, ಸೋಂಕಿತರ ಸಂಖ್ಯೆ 27,45,518ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಇಂದು 31,643 ಜನರಿಗೆ ಕೊರೊನಾ ದೃಢ; ಕರ್ನಾಟಕದ ನೆರೆಯ ರಾಜ್ಯಗಳ ಕೊವಿಡ್-19 ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on:Apr 05, 2022 | 1:04 PM

Share

ದೆಹಲಿ: ಭಾರತದಲ್ಲಿ ಇಂದು (ಮಾರ್ಚ್ 29) ಒಟ್ಟು 68,020 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ, 32,231 ಮಂದಿ ಕೊವಿಡ್-19 ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 291 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ, ದೇಶದಲ್ಲಿ ಒಟ್ಟು 1,20,39,644 ಪ್ರಕರಣಗಳು ದಾಖಲಾದಂತಾಗಿದೆ. ಅದರಲ್ಲಿ 1,13,55,993 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಸದ್ಯ 5,21,808 ಪ್ರಕರಣಗಳು ಸಕ್ರಿಯವಾಗಿದ್ದು, 1,61,843 ಜನರು ಮರಣಿಸಿದ್ದಾರೆ. ಈವರೆಗೆ 6,05,30,435 ಜನರಿಗೆ ಲಸಿಕೆ ವಿತರಣೆ ಮಾಡಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 1,904 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತನ್ಮೂಲಕ ಕೊರೊನಾ ಪೀಡಿತರ ಸಂಖ್ಯೆ 6,59,619ಕ್ಕೆ ಏರಿಕೆಯಾಗಿದೆ. ಆ ಪೈಕಿ 6,40,575 ಜನ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,411 ಸೋಂಕಿತರು ಗುಣಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿಗೆ 6 ಜನ ಬಲಿಯಾಗಿದ್ದು, ಈವರೆಗೆ ಕೊರೊನಾದಿಂದ 11,012 ಜನ ಸಾವು ಸಂಭವಿಸಿದೆ. 8,032 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ನೆರೆಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೇಗಿವೆ? ಮಹಾರಾಷ್ಟ್ರದಲ್ಲಿ ಇಂದು 31,643 ಜನರಿಗೆ ಕೊರೊನಾ ದೃಢವಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಕಂಡುಬರುತ್ತಿದೆ. ಈ ಮೂಲಕ, ಸೋಂಕಿತರ ಸಂಖ್ಯೆ 27,45,518ಕ್ಕೆ ಏರಿಕೆಯಾಗಿದೆ. ಅದರಲ್ಲಿ 23,53,307 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 20,854 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಇಂದು ಕೊರೊನಾ ಸೋಂಕಿಗೆ 102 ಜನರು ಬಲಿಯಾಗಿದ್ದು, ಇದುವರೆಗೆ ಕೊರೊನಾ ಸೋಂಕಿನಿಂದ 54,283 ಜನರ ಸಾವು ಸಂಭವಿಸಿದೆ. 3,36,584 ಜನರಲ್ಲಿ ಸೋಂಕು ಸಕ್ರಿಯವಾಗಿದೆ.

ಕೊರೊನಾ ಸ್ಫೋಟ ಕಂಡುಬಂದ ಮತ್ತೊಂದು ರಾಜ್ಯ ಕೇರಳದಲ್ಲಿ ಇಂದು 1,549 ಜನರಿಗೆ ಕೊರೊನಾ ದೃಢವಾಗಿದೆ. ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 1,897 ಜನ ಗುಣಮುಖರಾಗಿದ್ದಾರೆ. ಆ ಮೂಲಕ, ಈವರೆಗೆ 10,90,419 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 24,223 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದ್ದು, ಇಂದು 11 ಜನರ ಸಾವು ಸಂಭವಿಸಿದೆ. ಈವರೆಗೆ ಕೊರೊನಾ ಸೋಂಕಿಗೆ 4,590 ಜನ ಬಲಿಯಾಗಿದ್ದಾರೆ.

ತಮಿಳುನಾಡು ರಾಜ್ಯದಲ್ಲಿ 2,279 ಜನರಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 8,81,752ಕ್ಕೆ ಏರಿಕೆಯಾಗಿದೆ. ಆ ಪೈಕಿ 8,55,085 ಜನ ಗುಣಮುಖರಾಗಿದ್ದಾರೆ. ಇಂದು 1,352 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಕೊರೊನಾ ಸೋಂಕಿಗೆ 14 ಜನರ ಬಲಿಯಾಗಿದ್ದು, ಈವರೆಗೆ ಕೊರೊನಾಗೆ 12,684 ಜನ ಸಾವನ್ನಪ್ಪಿದ್ದಾರೆ. ಒಟ್ಟು 13,983 ಜನರಲ್ಲಿ ಸೋಂಕು ಸಕ್ರಿಯವಾಗಿದೆ.

ಆಂಧ್ರಪ್ರದೇಶದಲ್ಲಿ ಇಂದು 997 ಜನರಿಗೆ ಕೊರೊನಾ ದೃಢವಾಗಿದೆ. ಆಂಧ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 8,99,812ಕ್ಕೆ ಏರಿಕೆಯಾಗಿದೆ. ಆ ಪೈಕಿ 8,86,498 ಜನ ಸೋಂಕಿನಿಂದ ಗುಣ ಹೊಂದಿದ್ದಾರೆ. ಕಳೆದ 24 ಗಂಟೆಯಲ್ಲಿ 282 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಕೊರೊನಾಗೆ ಐವರು ಬಲಿಯಾಗಿದ್ದು, ಈವರೆಗೆ ಕೊರೊನಾ ಸೋಂಕಿಗೆ 7,210 ಜನ ಸಾವನ್ನಪ್ಪಿದ್ದಾರೆ. ಆಂಧ್ರದಲ್ಲಿ 6,104 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಒಂದೇ ದಿನ 3082 ಮಂದಿಗೆ ಪಾಸಿಟಿವ್, 14 ಸಾವು, ಕಳೆದ 5 ತಿಂಗಳಲ್ಲೇ ಗರಿಷ್ಠ

ಅಪ್​ಗ್ರೇಡ್​ ಆಗಿದೆ CoWIN: ದಿನಕ್ಕೆ 1 ಕೋಟಿ ನೋಂದಣಿ ಸಾಮರ್ಥ್ಯ, ಲಸಿಕೆ ಅಭಿಯಾನದ ಅಂಕಿಅಂಶ ಇಲ್ಲಿದೆ

Published On - 11:34 pm, Mon, 29 March 21