AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid India Update: ಮತ್ತೆ ಕೊರೊನಾ ಆತಂಕ; 2593 ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 44 ಜನರ ಸಾವು

ಚೀನಾದಲ್ಲಿ ಕೊರೊನಾ 4ನೇ (Coronavirus 4th Wave) ಅಲೆ ಕಾಣಿಸಿಕೊಂಡ ನಂತರ ಭಾರತದಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

Covid India Update: ಮತ್ತೆ ಕೊರೊನಾ ಆತಂಕ; 2593 ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 44 ಜನರ ಸಾವು
ಸಾಂಕೇತಿಕ ಚಿತ್ರ
TV9 Web
| Edited By: |

Updated on: Apr 25, 2022 | 7:42 AM

Share

ದೆಹಲಿ: ಚೀನಾದಲ್ಲಿ ಕೊರೊನಾ 4ನೇ (Coronavirus 4th Wave) ಅಲೆ ಕಾಣಿಸಿಕೊಂಡ ನಂತರ ಭಾರತದಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಭಾನುವಾರ ಭಾರತದಲ್ಲಿ ಒಟ್ಟು 2,593 ಮಂದಿಯಲ್ಲಿ ಹೊಸದಾಗಿ ಸೋಂಕು ವರದಿಯಾಗಿದ್ದು, 44 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ 15,873 ಸಕ್ರಿಯ ಪ್ರಕರಣಗಳಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 4,30,57,545ಕ್ಕೆ ಮುಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನಾದಿಂದ ದೇಶದಲ್ಲಿ ಈವರೆಗೆ 5,22,193 ಮಂದಿ ಸಾವನ್ನಪ್ಪಿದ್ದಾರೆ. ದೇಶದ ಸರಾಸರಿ ಪಾಸಿಟಿವಿಟಿ ಪ್ರಮಾಣ ಶೇ 0.04 ಇದ್ದರೆ, ಚೇತರಿಕೆ ಪ್ರಮಾಣ ಶೇ 98.75 ಇದೆ.

ದೇಶದ ರಾಜಧಾನಿ ದೆಹಲಿಯಲ್ಲಿ ಭಾನುವಾರ 1,083 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ಪ್ರಮಾಣ ಶೇ 4.48 ಇದೆ. ಸೋಂಕಿನಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಶನಿವಾರ 25,177 ಮಾದರಿಗಳನ್ನು ಕೊರೊನಾಗಾಗಿ ಪರೀಕ್ಷೆ ಮಾಡಲಾಗಿತ್ತು. ಫೆಬ್ರುವರಿ 10ರ ನಂತರ ಸತತವಾಗಿ ಇಳಿಕೆ ಕಂಡಿದ್ದ ಸೋಂಕಿನ ಪ್ರಮಾಣ ಕಳೆದ ಶನಿವಾರ (ಏಪ್ರಿಲ್ 23) ಒಮ್ಮೆಲೆ ಹೆಚ್ಚಾಗಿದೆ. ಶನಿವಾರ 1,94 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 1000 ದಾಟುತ್ತಿದೆ.

ಕಳೆದ 15 ದಿನಗಳಿಂದ ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಪ್ರಕರಣಗಳ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಏಪ್ರಿಲ್ 27) ಉನ್ನತ ಮಟ್ಟದ ಸಭೆ ಕರೆದಿದ್ದು ಪರಿಸ್ಥಿತಿಯ ಪರಾಮರ್ಶೆ ನಡೆಸಲಿದ್ದಾರೆ.

ಕರ್ನಾಟಕದಲ್ಲಿ ಭಾನುವಾರ (ಏಪ್ರಿಲ್ 24) ಒಟ್ಟು 8263 ಜನರ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. 60 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಪ್ರಸ್ತುತ 1676 ಸಕ್ರಿಯ ಪ್ರಕರಣಗಳಿವೆ. ನಿನ್ನೆ 63 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಸರ್ಕಾರ ಸಹ ಈ ವಿದ್ಯಮಾನ ಗಮನಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್ ಇದೆ. ಅವರು ನೀಡುವ ಸಲಹೆ, ಸೂಚನೆ ಮೇರೆಗೆ ಕೊರೊನಾ ನಿಯಂತ್ರಣದ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೊರೊನಾ 4ನೇ ಅಲೆ ಭೀತಿ; ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರ ಹಿಂದೇಟು, ಪ್ರವೇಶ ಪ್ರಮಾಣ ಶೇ 20ರಷ್ಟು ಇಳಿಕೆ

ಇದನ್ನೂ ಓದಿ: IPL 2022: ಸೋಲಿನ ಸುಳಿಯಲ್ಲಿರುವ ಡೆಲ್ಲಿ ತಂಡಕ್ಕೆ ಕೊರೊನಾ ಕಾಟ; ತಂಡದ ಮತ್ತೊಬ್ಬ ಆಟಗಾರನಲ್ಲಿ ಸೋಂಕು ಪತ್ತೆ!