Oxygen emrgencey: ಸಿಂಗಾಪುರದಿಂದ ಭಾರತಕ್ಕೆ 4 ಆಕ್ಸಿಜನ್ ಟ್ಯಾಂಕರ್‌ಗಳು ಏರ್‌ಲಿಫ್ಟ್, ವಿಮಾನ ಇಳಿದಿದ್ದು ಎಲ್ಲಿ?

|

Updated on: Apr 24, 2021 | 3:08 PM

ಈ ನಾಲಕ್ಕೂ ದ್ರವೀಕೃತ ಆಕ್ಸಿಜನ್ ಕಂಟೈನರ್​ಗಳು ಭಾರತೀಯ ವಾಯುಪಡೆಯ ವಿಮಾನದಲ್ಲಿ ಸಿಂಗಾಪುರದ ಚಂಗೀ ವಿಮಾನ ನಿಲ್ದಾಣದಿಂದ ಸಾಗಾಟವಾಗಿವೆ.

Oxygen emrgencey: ಸಿಂಗಾಪುರದಿಂದ ಭಾರತಕ್ಕೆ 4 ಆಕ್ಸಿಜನ್ ಟ್ಯಾಂಕರ್‌ಗಳು ಏರ್‌ಲಿಫ್ಟ್, ವಿಮಾನ ಇಳಿದಿದ್ದು ಎಲ್ಲಿ?
ಸಿಂಗಾಪುರದಿಂದ ಭಾರತಕ್ಕೆ ಬಂದ ಆಕ್ಸಿಜನ್ ಟ್ಯಾಂಕರ್‌ಗಳು
Follow us on

ನವದೆಹಲಿ: ಕೊರೊನಾ ಮಹಾಮಾರೊಯ ರುದ್ರ ನರ್ತನದಿಂದಾಗಿ ಭಾರತದಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದ್ದು, ಅದನ್ನು ನೀಗಿಸಲು ಭಾರತ ಸರ್ಕಾರ ಇತರೆ ದೇಶಗಳ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರದಿಂದ ಮೆಡಿಕಲ್ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗಿದೆ. ಕೇಂದ್ರ ಗೃಹ ಇಲಾಖೆಯು ಆಕ್ಸಿಜನ್ ಆಮದು ಮಾಡಿಕೊಂಡಿದ್ದು, ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಿ, 4 ಆಕ್ಸಿಜನ್ ಕಂಟೈನರ್​ಗಳು ಏರ್‌ಲಿಫ್ಟ್ ಮೂಲಕ ತರಿಸಿಕೊಂಡಿದೆ.

ಈ ನಾಲಕ್ಕೂ ದ್ರವೀಕೃತ ಆಕ್ಸಿಜನ್ ಕಂಟೈನರ್​ಗಳು (liquid O2 containers) ಭಾರತೀಯ ವಾಯುಪಡೆಯ (IAF C-17 aircraft) ವಿಮಾನದಲ್ಲಿ ಸಿಂಗಾಪುರದ ಚಂಗೀ ವಿಮಾನ ನಿಲ್ದಾಣದಿಂದ (Changi International Airport, Singapore) ಸಾಗಾಟವಾಗಿವೆ. C-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ಏರ್‌ಲಿಫ್ಟ್ ಆಗಿದ್ದು, ಪಶ್ಚಿಮ ಬಂಗಾಳದ ಪನಗಾರಾ ಏರ್‌ಬೇಸ್​ಗೆ (Panagarh Air Base) ಆ ಆಕ್ಸಿಜನ್ ಕಂಟೈನರ್​ಗಳು ಬಂದಿಳಿದಿವೆ.
(covid 19 Oxygen emergency: 4 Oxygen tankers air lifted from singapur to west bengal panagarh air base)