ಭಾರತದಲ್ಲಿ 2021ರ ಜನವರಿ 16ರಿಂದ ಶುರುವಾದ ಕೊವಿಡ್ 19 ಲಸಿಕೆ (Covid 19 Vaccination) ಅಭಿಯಾನ ಹೊಸದೊಂದು ಮೈಲಿಗಲ್ಲು ಸ್ಥಾಪನೆಯೆಡೆಗೆ ಸಾಗಿದೆ. ಇದುವರೆಗೆ 99 ಕೋಟಿ ಡೋಸ್ಗಳನ್ನು ಜನರಿಗೆ ನೀಡಲಾಗಿದ್ದು, 100 ಕೋಟಿ ಡೋಸ್ ಲಸಿಕೆ ನೀಡಕೆಗೆ ಬಹಳ ಹತ್ತಿರ ಬಂದಿದೆ. ಈ ವಾರದಲ್ಲೇ 100 ಕೋಟಿ ಡೋಸ್ ನೀಡಿ, ದಾಖಲೆ ನಿರ್ಮಿಸಲಿದೆ. ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ, ನಾವಿಂದು 99 ಕೋಟಿಯಲ್ಲಿದ್ದೇವೆ..100 ಕೋಟಿ ಕೊವಿಡ್ ಲಸಿಕೆ ದಾಖಲೆಯತ್ತ ಹೀಗೆ ಮುನ್ನುಗ್ಗು ಭಾರತ ಎಂದು ಹೇಳಿದ್ದಾರೆ. ಹಾಗೇ ಕೊವಿಡ್ 19 ವ್ಯಾಕ್ಸಿನೇಶನ್ ಎಂಬ ಹ್ಯಾಷ್ಟ್ಯಾಗ್ ಕೂಡ ನೀಡಿದ್ದಾರೆ.
We are at 99 crores ?
Go for it India, continue to rapidly march towards our milestone of 100 crore #COVID19 vaccinations. pic.twitter.com/jq9NKnw8tF
— Dr Mansukh Mandaviya (@mansukhmandviya) October 19, 2021
ಜನವರಿ 16ರಂದು ಕೊವಿಡ್ 19 ಲಸಿಕೆ ಅಭಿಯಾನ ಶುರುವಾದಾಗ ಮೊದಲು ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆರೋಗ್ಯ ಸಿಬ್ಬಂದಿ, ಪೊಲೀಸ್, ಸ್ವಚ್ಛತಾ ಕಾರ್ಮಿಕರಿಗೆ ನೀಡಲಾಗಿತ್ತು. ನಂತರ ಲಸಿಕೆ ಅಭಾವದಿಂದ ಅಭಿಯಾನಕ್ಕೆ ಹಿನ್ನಡೆಯಾಗಿತ್ತು. ಆದರೆ ನಂತರ ಒಮ್ಮೆಲೇ ಮುನ್ನುಗ್ಗಿದ ಭಾರತ ಈಗ 100 ಕೋಟಿ ಡೋಸ್ ಲಸಿಕೆಯ ದಾಖಲೆಯತ್ತ ಬಂದು ನಿಂತಿದೆ. ಅದೂ ಕೂಡ ಕೇಂದ್ರ ಸರ್ಕಾರವೇ ಎಲ್ಲರಿಗೂ ಉಚಿತವಾಗಿ ನೀಡುತ್ತಿದೆ. ಸದ್ಯ ದೇಶದಲ್ಲಿ ಕೊವಿಡ್ 19 ಸಾಂಕ್ರಾಮಿಕದ ಅಬ್ಬರ ಕೂಡ ಸ್ವಲ್ಪ ಕಡಿಮೆಯಾಗುತ್ತಿದ್ದು, ಚೇತರಿಕೆ ಪ್ರಮಾಣ ಶೇ.98ಕ್ಕೂ ಜಾಸ್ತಿಯಿದೆ.
ಇದನ್ನೂ ಓದಿ: ‘ಅನ್ನ ಕೊಡುವ ಚಿತ್ರೋದ್ಯಮ ಮುಚ್ಚಬಾರದು, ಪೈರಸಿಗೆ ಅಂತ್ಯ ಹಾಡ್ತೀವಿ’: ಆರಗ ಜ್ಞಾನೇಂದ್ರ ಭರವಸೆ
ಉತ್ತರಾಖಂಡ್ ಮಳೆಗೆ 5 ಮಂದಿ ಬಲಿ; ಸಿಎಂಗೆ ಕರೆ ಮಾಡಿ ಪರಿಸ್ಥಿತಿಯ ವರದಿ ಕೇಳಿದ ಪ್ರಧಾನಿ ಮೋದಿ
Published On - 1:19 pm, Tue, 19 October 21