ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ; ಎಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

| Updated By: ಸುಷ್ಮಾ ಚಕ್ರೆ

Updated on: Mar 19, 2022 | 5:02 PM

ಹಿಂದಿನ ಕೊರೊನಾ ಅಲೆಗಳ ಸಮಯದಲ್ಲಿ ಹೆಚ್ಚು ಪೀಡಿತ ರಾಜ್ಯವಾಗಿದ್ದ ಮಹಾರಾಷ್ಟ್ರವು ಈಗಾಗಲೇ ಕೊವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಜನರನ್ನು ಒತ್ತಾಯಿಸುವ ಮೂಲಕ ಮಹಾರಾಷ್ಟ್ರದ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.

ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ; ಎಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ಕೊವಿಡ್-19
Follow us on

ನವದೆಹಲಿ: ಏಷ್ಯಾ ಮತ್ತು ಯುರೋಪಿಯನ್ ದೇಶಗಳಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳ (Covid-19 Cases) ಮಧ್ಯೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೆಲವು ದಿನಗಳ ಹಿಂದೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಮುಂತಾದ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊವಿಡ್ ಪ್ರಕರಣಗಳ (Coronavirus) ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಮಾರ್ಚ್ 27ರಿಂದ ಅಂತಾರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸುವ ನಿರ್ಧಾರದ ಪರಿಶೀಲನೆಯೊಂದಿಗೆ ಭಾರತದ ಕೊವಿಡ್ ಲಸಿಕೆಯನ್ನು ಸಹ ಪರಿಶೀಲಿಸಲಾಗಿದೆ. Omicron BA.2 ಯುರೋಪ್ ಮತ್ತು ಏಷ್ಯಾದ ಭಾಗಗಳಲ್ಲಿ ಭಾರಿ ಕೋವಿಡ್ ಉಲ್ಬಣಕ್ಕೆ ಕಾರಣವಾಗುತ್ತಿದೆ. ಈ ರೂಪಾಂತರವು ಭಾರತದಲ್ಲಿ 4 ನೇ ಕೊವಿಡ್ ಅಲೆಯನ್ನು ಉಂಟುಮಾಡಬಹುದೇ ಎಂಬ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಿಂದಿನ ಕೊರೊನಾ ಅಲೆಗಳ ಸಮಯದಲ್ಲಿ ಹೆಚ್ಚು ಪೀಡಿತ ರಾಜ್ಯವಾಗಿದ್ದ ಮಹಾರಾಷ್ಟ್ರವು ಈಗಾಗಲೇ ಕೊವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಜನರನ್ನು ಒತ್ತಾಯಿಸುವ ಮೂಲಕ ಮಹಾರಾಷ್ಟ್ರದ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.

ಕೆಲವು ವಾರಗಳ ಹಿಂದೆ ಐಐಟಿ ಕಾನ್ಪುರ ತಂಡ, ಭಾರತವು ಮುಂದಿನ ಜೂನ್‌ನಲ್ಲಿ 4ನೇ ಕೊವಿಡ್ ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಜೂನ್​ನಿಂದ ಮುಂದಿನ 4 ತಿಂಗಳವರೆಗೆ ಈ ಅಲೆ ಮುಂದುವರಿಯುತ್ತದೆ ಎಂದು ಹೇಳಿತ್ತು. ಜೂನ್ ಮಧ್ಯದಿಂದ ಅಂತ್ಯದ ವೇಳೆಗೆ ಭಾರತವು ನಾಲ್ಕನೇ ಹಂತದ ಕೊವಿಡ್ ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಐಐಟಿ- ಕಾನ್ಪುರದ ತಜ್ಞರ ತಂಡವು ಇತ್ತೀಚೆಗೆ ನಡೆಸಿದ ಅಧ್ಯಯನ ತಿಳಿಸಿತ್ತು. ಕೊರೊನಾವೈರಸ್ ಕೇಸುಗಳ ಉಲ್ಬಣವು ಸುಮಾರು 4 ತಿಂಗಳವರೆಗೆ ಮುಂದುವರಿಯುತ್ತದೆ. ಕೊರೊನಾವೈರಸ್ ನಾಲ್ಕನೇ ತರಂಗವು 2022ರ ಜೂನ್ 22ರಿಂದ ಪ್ರಾರಂಭವಾಗುತ್ತದೆ. ಹಾಗೇ, ಆಗಸ್ಟ್ 23ರಂದು ಉತ್ತುಂಗವನ್ನು ತಲುಪುತ್ತದೆ, ಅಕ್ಟೋಬರ್ 24ರಂದು ಕೊನೆಗೊಳ್ಳುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: Covid Vaccine: 12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ನಿರೋಧಕ ಲಸಿಕೆ

Covid 4th Wave: ಕೊವಿಡ್ 4ನೇ ಅಲೆ ಡೆಲ್ಟಾದಷ್ಟೇ ಅಪಾಯಕಾರಿಯಾಗಿರುತ್ತಾ?; ವಿಜ್ಞಾನಿಗಳ ಉತ್ತರ ಹೀಗಿದೆ