Covid India Update: ದೇಶದಲ್ಲಿ ಕೊವಿಡ್ ಎರಡನೇಯ ಅಲೆ ಹೆಚ್ಚಳ; ಸೋಂಕಿತರ ಸಂಖ್ಯೆ ದ್ವಿಗುಣ
ಭಾರತದಲ್ಲಿ 31,70,228 ಕೊರೊನಾ ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾದಿಂದ ದೇಶದಲ್ಲಿ ಈವರೆಗೆ 2,08,330 ಜನ ಪ್ರಾಣ ಕಳೆದುಕೊಂಡಿದ್ದಾರೆ.
ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಅತಿವೇಗವಾಗಿ ಹರಡುತ್ತಿದ್ದು, ಹಳೆ ದಾಖಲೆಗಳನ್ನೆಲ್ಲ ಮುರಿಯುತ್ತಿದೆ. ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆಯು ಕೂಡ ಈ ಮುಕೇನ ಏರುಗತಿಯಲ್ಲಿಯೇ ಸಾಗುತ್ತಿದೆ. ಭಾರತದಲ್ಲಿ 31,70,228 ಕೊರೊನಾ ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾದಿಂದ ದೇಶದಲ್ಲಿ ಈವರೆಗೆ 2,08,330 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ. ಆದರೆ ಸಾವಿನ ಪ್ರಮಾಣದಲ್ಲಾಗಲಿ ಸೋಂಕಿತರ ಸಂಖ್ಯೆಯಲ್ಲಾಗಲಿ ಇಳಿಕೆ ಕಂಡುಬಂದಿಲ್ಲ.
ವಿವಿಧ ರಾಜ್ಯಗಳ ಕೊರೊನಾ ಪ್ರಕರಣದ ಪಟ್ಟಿ: ಮಹಾರಾಷ್ಟ್ರ- 6,62,640ಸಕ್ರಿಯ ಪ್ರಕರಣಗಳು, 68,813 ಜನ ಬಲಿ ಕರ್ನಾಟಕ- 3,82,690 ಸಕ್ರಿಯ ಪ್ರಕರಣಗಳು, 15,523 ಜನ ಬಲಿ ಯುಪಿ- 3,09,237 ಸಕ್ರಿಯ ಪ್ರಕರಣಗಳು, 12238 ಜನ ಬಲಿ ಕೇರಳ- 2,84,424 ಸಕ್ರಿಯ ಪ್ರಕರಣಗಳು, 5,259 ಜನ ಬಲಿ ರಾಜಸ್ಥಾನ-1 ,69,519 ಸಕ್ರಿಯ ಪ್ರಕರಣಗಳು, 4,084 ಜನ ಬಲಿ ಗುಜರಾತ್- 1,37,794 ಸಕ್ರಿಯ ಪ್ರಕರಣಗಳು, 7,010 ಜನ ಬಲಿ ಛತ್ತೀಸ್ಗಢ- 1,18,958 ಸಕ್ರಿಯ ಪ್ರಕರಣಗಳು, 8,312 ಜನ ಬಲಿ ಆಂಧ್ರಪ್ರದೇಶ- 1,14,158 ಸಕ್ರಿಯ ಪ್ರಕರಣಗಳು, 7,928 ಜನ ಬಲಿ ತಮಿಳುನಾಡು- 1,12,556 ಸಕ್ರಿಯ ಪ್ರಕರಣಗಳು, 13,933 ಜನ ಬಲಿ ಪ.ಬಂಗಾಳ- 1,13,624 ಸಕ್ರಿಯ ಪ್ರಕರಣಗಳು, 11,344 ಜನ ಬಲಿ ಬಿಹಾರ- 1,00,822, ಸಕ್ರಿಯ ಪ್ರಕರಣಗಳು 2,480 ಜನ ಬಲಿ ದೆಹಲಿ- 99,361 ಸಕ್ರಿಯ ಪ್ರಕರಣಗಳು, 16,147 ಜನ ಬಲಿ ಹರಿಯಾಣ- 97,562 ಸಕ್ರಿಯ ಪ್ರಕರಣಗಳು, 4,216 ಜನ ಬಲಿ ಮಧ್ಯಪ್ರದೇಶ- 92,077 ಸಕ್ರಿಯ ಪ್ರಕರಣಗಳು, 5,519 ಜನ ಬಲಿ ತೆಲಂಗಾಣ- 77,727 ಸಕ್ರಿಯ ಪ್ರಕರಣಗಳು, 2,261 ಜನ ಬಲಿ ಉತ್ತರಾಖಂಡ್- 55,886 ಸಕ್ರಿಯ ಪ್ರಕರಣಗಳು, 2,624 ಜನ ಬಲಿ ಪಂಜಾಬ್- 55,798 ಸಕ್ರಿಯ ಪ್ರಕರಣಗಳು, 9,022 ಜನ ಬಲಿ ಜಾರ್ಖಂಡ್- 55,877 ಸಕ್ರಿಯ ಪ್ರಕರಣಗಳು, 2,540 ಜನ ಬಲಿ ಒಡಿಶಾ- 53,084 ಸಕ್ರಿಯ ಪ್ರಕರಣಗಳು, 2,029 ಜನ ಬಲಿ ಅಸ್ಸಾಂ- 23,826 ಸಕ್ರಿಯ ಪ್ರಕರಣಗಳು, 1,307 ಜನ ಬಲಿ ಗೋವಾ- 20,898 ಸಕ್ರಿಯ ಪ್ರಕರಣಗಳು, 1,146 ಜನ ಬಲಿ ಜಮ್ಮು ಕಾಶ್ಮೀರ- 26,144 ಸಕ್ರಿಯ ಪ್ರಕರಣಗಳು, 2,253 ಜನ ಬಲಿ ಹಿಮಾಚಲಪ್ರದೇಶ- 17,835 ಸಕ್ರಿಯ ಪ್ರಕರಣಗಳು, 1,460 ಜನ ಬಲಿ ಅರುಣಾಚಲಪ್ರದೇಶ- 1,112 ಸಕ್ರಿಯ ಪ್ರಕರಣಗಳು, 59 ಜನ ಬಲಿ ಚಂಡಿಗಢ- 6,652 ಸಕ್ರಿಯ ಪ್ರಕರಣಗಳು, 465 ಜನ ಬಲಿ ಪುದುಚೆರಿ- 8,989 ಸಕ್ರಿಯ ಪ್ರಕರಣಗಳು, 793 ಜನ ಬಲಿ ಮಣಿಪುರ- 1,225 ಸಕ್ರಿಯ ಪ್ರಕರಣಗಳು, 400 ಜನ ಬಲಿ ಮೇಘಾಲಯ- 1,531 ಸಕ್ರಿಯ ಪ್ರಕರಣಗಳು, 169 ಜನ ಬಲಿ ಮಿಜೋರಾಂ- 1,123 ಸಕ್ರಿಯ ಪ್ರಕರಣಗಳು, 14 ಜನ ಬಲಿ ನಾಗಾಲ್ಯಾಂಡ್- 1,073 ಸಕ್ರಿಯ ಪ್ರಕರಣಗಳು, 100 ಜನ ಬಲಿ ಸಿಕ್ಕಿಂ- 1,247 ಸಕ್ರಿಯ ಪ್ರಕರಣಗಳು, 146 ಜನ ಬಲಿ ತ್ರಿಪುರ-1,161 ಸಕ್ರಿಯ ಪ್ರಕರಣಗಳು, 396 ಜನ ಬಲಿ
ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆಯ ಪ್ರಸರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ 21,602 ಕೊವಿಡ್ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ದೇಶದಲ್ಲಿ ಕೊರೊನಾ ಸೋಂಕಿನ ನಾಗಾಲೋಟ; 24 ಗಂಟೆಯಲ್ಲಿ 1,341 ಮಂದಿ ಕೊವಿಡ್-19ನಿಂದ ಸಾವು
ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆ ಬೆಂಗಳೂರು ನಗರ
Published On - 9:18 am, Sat, 1 May 21