AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ; ಇಂದು ಕೊವಿಡ್​ 19 ಟೆಸ್ಟ್​ಗಾಗಿ ಮುಗಿಬೀಳುತ್ತಿರುವ ಮತಗಟ್ಟೆ ಏಜೆಂಟ್​ಗಳು

ನಮಗೆ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ RT-PCR ಟೆಸ್ಟ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರ್ಯಾಪಿಡ್ ಆ್ಯಂಟಿಜೆನ್​ ಟೆಸ್ಟ್ ಮಾಡಿಸಿಕೊಂಡು, ಅರ್ಧಗಂಟೆಯಲ್ಲಿ ರಿಪೋರ್ಟ್ ಪಡೆಯಬೇಕಾಗಿದೆ ಎನ್ನುತ್ತಾರೆ ಏಜೆಂಟ್​ಗಳು.

ನಾಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ; ಇಂದು ಕೊವಿಡ್​ 19 ಟೆಸ್ಟ್​ಗಾಗಿ ಮುಗಿಬೀಳುತ್ತಿರುವ ಮತಗಟ್ಟೆ ಏಜೆಂಟ್​ಗಳು
ಕೊವಿಡ್​ ಪರೀಕ್ಷೆ (ಪ್ರಾತಿನಿಧಿಕ ಚಿತ್ರ)
Lakshmi Hegde
|

Updated on: May 01, 2021 | 10:26 AM

Share

ಕೋಲ್ಕತ್ತ: ನಾಳೆ (ಮೇ 2) ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ದೇಶಾದ್ಯಂತ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿರುವ ಈ ಹೊತ್ತಲ್ಲಿ ಮತಎಣಿಕೆ ನಡೆಯಲಿದ್ದು, ಯಾವುದೇ ಪಕ್ಷಗಳು ಗೆದ್ದರೂ ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದು ಈಗಾಗಲೇ ಚುನಾವಣಾ ಆಯೋಗ ಹೇಳಿದೆ. ಅಲ್ಲದೆ, ಅಭ್ಯರ್ಥಿಯೊಂದಿಗೆ ಇಬ್ಬರು ಮಾತ್ರ ಮತ ಎಣಿಕೆ ಸ್ಥಳಕ್ಕೆ ಆಗಮಿಸಲು ಅವಕಾಶ ನೀಡಲಾಗಿದೆ. ಹಾಗೇ ಅದಕ್ಕೂ ಮೊದಲು ಮತಗಟ್ಟೆ ಏಜೆಂಟ್​ಗಳು ಸೇರಿ, ಅಲ್ಲಿಗೆ ಬರುವ ಪ್ರತಿಯೊಬ್ಬರೂ ಕೊವಿಡ್ 19 ಟೆಸ್ಟ್ ಮಾಡಿಸಿಕೊಂಡು, ನೆಗೆಟಿವ್​ ವರದಿ ತರುವುದು ಕಡ್ಡಾಯ ಎಂದೂ ಚುನಾವಣಾ ಆಯೋಗ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಕೊರೊನಾ ತಪಾಸಣಾ ಕೇಂದ್ರದ ಬಳಿ ಹಲವು ಅಭ್ಯರ್ಥಿಗಳು, ಅವರ ಸಹಾಯಕರು ಕೊವಿಡ್​ ತಪಾಸಣೆಗಾಗಿ ಗುಂಪುಗೂಡಿದ್ದಾರೆ. ಅದರಲ್ಲೂ ಜಿಲ್ಲಾ ಚುನಾವಣಾ ಅಧಿಕಾರಿಗಳು, ಕೊವಿಡ್ ರ್ಯಾಪಿಡ್​ ಆ್ಯಂಟಿಜನ್ ತಪಾಸಣೆಗಾಗಿ ಪಶ್ಚಿಮಬಂಗಾಳದ ನೇತಾಜಿ ಒಳಾಂಗಣ ಕ್ರಿಡಾಂಗಣ ಮತ್ತು ಬ್ಯಾಲಿಗಂಜ್​ ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಿದ್ದು, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡುತ್ತಿದ್ದಾರೆ. ನಾಳೆ ಮತ ಎಣಿಕೆಗೂ ಮುನ್ನ ಕೊವಿಡ್ ಟೆಸ್ಟ್ ಮಾಡಿಸಿ, ರಿಪೋರ್ಟ್ ಪಡೆಯುವ ಅವಸರದಲ್ಲಿ ಇರುವುದರಿಂದ ಇದೆರಡೂ ಸ್ಥಳಗಳಲ್ಲಿ ಜನಸಂದಣಿ ನಿರ್ಮಾಣ ಆಗಿದೆ.

ನಮಗೆ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ RT-PCR ಟೆಸ್ಟ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರ್ಯಾಪಿಡ್ ಆ್ಯಂಟಿಜೆನ್​ ಟೆಸ್ಟ್ ಮಾಡಿಸಿಕೊಂಡು, ಅರ್ಧಗಂಟೆಯಲ್ಲಿ ರಿಪೋರ್ಟ್ ಪಡೆಯಬೇಕಾಗಿದೆ. ಆ ರಿಪೋರ್ಟ್​ನ್ನು ನಾಳೆ ಚುನಾವಣಾ ಅಧಿಕಾರಿಗಳಿಗೆ ನೀಡಿದರೆ ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ಸಿಗುತ್ತದೆ ಎಂದು ಜೋರಬಗನ್ ಕ್ಷೇತ್ರದ ತೃಣಮೂಲ ಕಾಂಗ್ರೆಸ್​ ಏಜೆಂಟ್ ಮಣಿಕ್ ಸಿಂಗ್ ತಿಳಿಸಿದ್ದಾರೆ.

ಈಗಾಗಲೇ ಸುಮಾರು ಜನ ಚುನಾವಣಾ ಏಜೆಂಟ್​ಗಳು, ಅವರ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಏಜೆಂಟ್​ಗಳನ್ನು ಆಯಾ ಮತಎಣಿಕೆ ಕೇಂದ್ರಗಳಿಗೆ ಕಳಿಸುವುದಕ್ಕೂ ಮೊದಲು ಅವರ ಕೊವಿಡ್​ 19ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜೋರಸಂಕೊದ ಸಂಜುಕ್ತ ಮೋರ್ಚಾ ಅಭ್ಯರ್ಥಿ ಅಜ್ಮಲ್ ಖಾನ್ ತಿಳಿಸಿದ್ದಾರೆ. ಯಾವುದೇ ಏಜೆಂಟ್​ಗೆ ಕೊರೊನಾ ಪಾಸಿಟಿವ್​ ಬಂದರೆ ಅವರ ಬದಲಿಗೆ ಇನ್ನೊಬ್ಬರನ್ನು ಕಳಿಸುತ್ತೇವೆ ಎಂದೂ ತಿಳಿಸಿದ್ದಾರೆ. ಇದೇ ನಿರ್ಧಾರವನ್ನು ಬಹುತೇಕ ಎಲ್ಲ ಪಕ್ಷಗಳೂ ಕೈಗೊಂಡಿವೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್​ನಿಂದ ಸಾಧ್ಯವಾದಷ್ಟು ಎರಡೂ ಡೋಸ್ ಲಸಿಕೆ ಪಡೆದವರನ್ನೇ ಏಜೆಂಟ್​ ಆಗಿ ಕಳಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೊವಿಡ್​ ವ್ಯಾಕ್ಸಿನ್​ ಬಗ್ಗೆ ತಪ್ಪು ಮಾಹಿತಿ ಹರಡಿದ ನಟನಿಗೆ 2 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್​

Covid India Update: ದೇಶದಲ್ಲಿ ಕೊವಿಡ್ ಎರಡನೇಯ ಅಲೆ ಹೆಚ್ಚಳ; ಸೋಂಕಿತರ ಸಂಖ್ಯೆ ದ್ವಿಗುಣ

ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
‘ಅವರನ್ನು ಕಳಿಸು’; ವೀರಪ್ಪನ್ ಬಳಿ ಅಂಗಲಾಚಿದ್ದ ರಾಜ್​ಕುಮಾರ್
‘ಅವರನ್ನು ಕಳಿಸು’; ವೀರಪ್ಪನ್ ಬಳಿ ಅಂಗಲಾಚಿದ್ದ ರಾಜ್​ಕುಮಾರ್
Video: ಮಹಾರಾಷ್ಟ್ರ: ಶತಮಾನಗಳಷ್ಟು ಹಳೆಯದಾದ ಕೋಟೆ ಕುಸಿತ
Video: ಮಹಾರಾಷ್ಟ್ರ: ಶತಮಾನಗಳಷ್ಟು ಹಳೆಯದಾದ ಕೋಟೆ ಕುಸಿತ
ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ