ಹೊಸ ಒಮಿಕ್ರಾನ್ ರೂಪಾಂತರಿ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿ, ಕೊರೊನಾ ಅಲೆಯನ್ನು ಪ್ರಚೋದಿಸಬಹುದು

| Updated By: ಸುಷ್ಮಾ ಚಕ್ರೆ

Updated on: May 02, 2022 | 1:57 PM

ಕೊರೊನಾದ 4ನೇ ಅಲೆಯ ಬಗ್ಗೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಒಮಿಕ್ರಾನ್‌ನ ಅನೇಕ ಹೊಸ ರೂಪಾಂತರಗಳು ಜನರಲ್ಲಿರುವ ಈಗಾಗಲೇ ಬಂದಿರುವ ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಹೊಸ ಒಮಿಕ್ರಾನ್ ರೂಪಾಂತರಿ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿ, ಕೊರೊನಾ ಅಲೆಯನ್ನು ಪ್ರಚೋದಿಸಬಹುದು
ಪ್ರಾತಿನಿಧಿಕ ಚಿತ್ರ
Follow us on

ಜೋಹಾನ್ಸ್‌ಬರ್ಗ್: ಒಮಿಕ್ರಾನ್ (Omicron) ಕೊರೊನಾವೈರಸ್ ರೂಪಾಂತರದ ಎರಡು ಹೊಸ ಉಪವರ್ಗಗಳು ಕೊವಿಡ್ ಹೊಸ ಅಲೆಯನ್ನು ಪ್ರಚೋದಿಸುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಬಹುದು. ಆದರೆ, ಕೊವಿಡ್ ಲಸಿಕೆ (Covid-19 Vaccine) ಹಾಕಿಸಿಕೊಂಡ ಜನರ ರಕ್ತದಲ್ಲಿ ಈ ಕೊರೊನಾ ರೂಪಾಂತರಿ ಅಭಿವೃದ್ಧಿ ಹೊಂದುವ ಸಾಧ್ಯತೆ ತುಂಬಾ ಕಡಿಮೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅನೇಕ ಸಂಸ್ಥೆಗಳ ವಿಜ್ಞಾನಿಗಳು ಒಮಿಕ್ರಾನ್‌ನ BA.4 ಮತ್ತು BA.5 ಉಪವಿಭಾಗಗಳನ್ನು ಪರೀಕ್ಷಿಸುತ್ತಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಒಮಿಕ್ರಾನ್ (Omicron) ಸೋಂಕಿಗೆ ಒಳಗಾದ 39 ರೋಗಿಗಳಿಂದ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು.

ಕೊರೊನಾದ 4ನೇ ಅಲೆಯ ಬಗ್ಗೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಒಮಿಕ್ರಾನ್‌ನ ಅನೇಕ ಹೊಸ ರೂಪಾಂತರಗಳು ಜನರಲ್ಲಿರುವ ಈಗಾಗಲೇ ಬಂದಿರುವ ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಲಸಿಕೆ ಹಾಕಿಸಿಕೊಂಡವರ ರಕ್ತದಲ್ಲಿ ಈ ವೈರಸ್​ಗಳು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿರುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.

ಹಲವಾರು ಸಂಸ್ಥೆಗಳ ವಿಜ್ಞಾನಿಗಳು ಒಟ್ಟಾಗಿ ಒಮಿಕ್ರಾನ್ ಬಿಎ.4 ಮತ್ತು ಬಿಎ.5 ರೂಪಾಂತರಗಳ ಅಧ್ಯಯನ ನಡೆಸಿದ್ದಾರೆ. ಇದನ್ನು ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯ ಮೇಲ್ವಿಚಾರಣಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಧ್ಯಯನದ ಸಮಯದಲ್ಲಿ ಈ ಹಿಂದೆ ಒಮಿಕ್ರಾನ್ ಸೋಂಕಿಗೆ ಒಳಗಾದ 39 ಜನರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ 15 ಮಂದಿಗೆ ಕೊರೊನಾ ಲಸಿಕೆ ಕೂಡ ಸಿಕ್ಕಿದೆ. 8 ಜನರಿಗೆ ಫೈಜರ್ ಲಸಿಕೆ ನೀಡಲಾಗಿದೆ. 7 ಜನರಿಗೆ ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು 24 ಯಾವುದೇ ಲಸಿಕೆಯನ್ನು ಪಡೆದುಕೊಂಡಿರಲಿಲ್ಲ.

ಕೊವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಐದು ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿ ಇರುತ್ತದೆ ಮತ್ತು ಹೆಚ್ಚು ರಕ್ಷಣೆ ಪಡೆಯುತ್ತಾರೆ ಎಂದು ಈ ಅಧ್ಯಯನ ಹೇಳಿದೆ. ಲಸಿಕೆ ಹಾಕದವರಲ್ಲಿ 8 ಪಟ್ಟು ಕಡಿಮೆ ಪ್ರತಿಕಾಯ ಶಕ್ತಿ ಇರುತ್ತದೆ. ಇವರೂ BA.1 ಸೋಂಕಿಗೆ ಒಳಗಾಗಿದ್ದರು. ಆದರೆ ಇವರಲ್ಲಿ BA.4 ಮತ್ತು BA.5 ವಿರುದ್ಧ ಹೋರಾಡುವ ಸಾಮರ್ಥ್ಯ ಬಹಳ ಕಡಿಮೆಯಿತ್ತು ಎನ್ನಲಾಗಿದೆ.

ಕೊರೊನಾವೈರಸ್ ಕುರಿತ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದಕ್ಷಿಣ ಆಫ್ರಿಕಾದಲ್ಲಿ ಕೊರೋನಾದ ಐದನೇ ಅಲೆ ಅಕಾಲಿಕವಾಗಿ ಬರಲಿದೆ ಎಂದು ಅಧಿಕಾರಿಗಳು ಮತ್ತು ವಿಜ್ಞಾನಿಗಳು ಹೇಳಿದ್ದಾರೆ. ಬಿಎ.4 ಮತ್ತು ಬಿಎ.5 ರೂಪಾಂತರಿಗಳಿಂದ ಈ ಅಲೆ ಬರಬಹುದು ಎಂದು ಅವರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ 60 ಮಿಲಿಯನ್ ಜನಸಂಖ್ಯೆಯಲ್ಲಿ ಕೇವಲ ಶೇ.30ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ದಕ್ಷಿಣ ಆಫ್ರಿಕಾ ನಿರೀಕ್ಷೆಗಿಂತ ಮುಂಚೆಯೇ ಐದನೇ ಕೊವಿಡ್ ಅಲೆಯನ್ನು ಪ್ರವೇಶಿಸಬಹುದು ಎಂದು ಅಧಿಕಾರಿಗಳು ಮತ್ತು ವಿಜ್ಞಾನಿಗಳು ಹೇಳಿದ್ದಾರೆ. BA.4 ಮತ್ತು BA.5 ಒಮಿಕ್ರಾನ್ ಉಪ ವ್ಯತ್ಯಯಗಳಿಂದ ನಡೆಸಲ್ಪಡುವ ಸೋಂಕುಗಳ ನಿರಂತರ ಹೆಚ್ಚಳವನ್ನು ದೂಷಿಸಿದ್ದಾರೆ. ದಕ್ಷಿಣ ಆಫ್ರಿಕಾದ 60 ಮಿಲಿಯನ್ ಜನಸಂಖ್ಯೆಯ ಸುಮಾರು ಶೇ. 30ರಷ್ಟು ಜನರು ಮಾತ್ರ ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

Published On - 1:49 pm, Mon, 2 May 22